Saturday, November 23, 2024

Latest Posts

ಮನುಷ್ಯನ ಮೃತ್ಯುವಾದ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡುವುದೇಕೆ..?

- Advertisement -

ಸನಾತನ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಮನುಷ್ಯ ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೂ ಇದರಲ್ಲಿ ಕೆಲವು ಪದ್ಧತಿಗಳನ್ನಾದರೂ, ಅವನು ಆಚರಿಸಲೇಬೇಕು. ಅದೇ ರೀತಿ, ಅವನು ಮೃತನಾದ ಮೇಲೆ ಅವನ ಮನೆಯವರು ಮುಂದಿನ ಪದ್ಧತಿಗಳನ್ನ ಆಚರಿಸಬೇಕು. ಕೇಶ ಮುಂಡನ, ಅಂತ್ಯ ಸಂಸ್ಕಾರ, ದಾನ, ತಿಥಿ, ಇತ್ಯಾದಿ ಪದ್ಧತಿಗಳು ಈ ವೇಳೆ ಆಚರಿಸಲ್ಪಡುತ್ತದೆ.

ಇದರ ಜೊತೆ ಕೆಲವರು ಮನೆಯಲ್ಲಿ ಯಾರಾದರೂ ಮೃತರಾದರೆ, 14ನೇ ದಿನ, ಅಂದರೆ 13ನೇ ದಿನ ಎಲ್ಲ ಕಾರ್ಯಗಳು ಮುಗಿದ ಮೇಲೆ, ಗರುಡ ಪುರಾಣ ಪಾಠ ಮಾಡಿಸುತ್ತಾರೆ. ಅಂದರೆ ಒಬ್ಬರು ಮೃತರ ಮನೆಗೆ ಬಂದು, ಗರುಡ ಪುರಾಣ ಓದುತ್ತಾರೆ. ಇದರ ಮಹತ್ವ ಹೇಳುತ್ತಾರೆ. ಹಾಗಾದ್ರೆ ಮೃತರ ಮನೆಯಲ್ಲಿ ಗರುಡ ಪುರಾಣ ಹೇಳುವುದರಿಂದ ಏನಾಗುತ್ತದೆ..? ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಾವು ಈ ಮೊದಲೇ ನಿಮಗೆ ಮನುಷ್ಯನ ಮರಣದ ಬಳಿಕ ಏನಾಗುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಿದ್ದೆವು. ಮನುಷ್ಯ ಮೃತನಾದ 13ನೇ ದಿನಕ್ಕೆ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆದರೆ, ಆ ಆತ್ಮ ಯಮ ಲೋಕಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ಹೇಳಿದ್ದೆವು. ಅದೇ ರೀತಿ 13ನೇ ದಿನದ ಎಲ್ಲ ಕಾರ್ಯ ಮುಗಿದ ಮೇಲೆ 14ನೇ ದಿನದಿಂದ ಗರುಡ ಪುರಾಣ ಓದಿಸುವುದಕ್ಕೆ ಕಾರಣವೂ ಇದೆ. ಹೀಗೆ ಗರುಡ ಪುರಾಣ ಪಠಣ ಮಾಡಿಸುವುದರಿಂದ, ಆತ್ಮಕ್ಕೆ ಶಾಂತಿ ಸಿಕ್ಕು, ಅದು ಸ್ವರ್ಗಕ್‌ಕೆ ಹೋಗಲಿ ಅನ್ನೋದು ಇದರ ಆಶಯವಾಗಿದೆ.

7 ಸಾವಿರ ಶ್ಲೋಕವಿರುವ ಗರುಡ ಪುರಾಣ ಶ್ರವಣದಿಂದ ಪಿತೃ ತನ್ನ ಕಷ್ಟವನ್ನೆಲ್ಲಾ ಮರೆತು, ಪರಲೋಕಕ್ಕೆ ಅಥವಾ ಇನ್ನೊಂದು ಗರ್ಭಕ್ಕೆ ಸೇರುತ್ತಾನೆಂದು ನಂಬಲಾಗಿದೆ. ಅಲ್ಲದೇ, ಗರುಡ ಪುರಾಣ ಓದುವಾಗ, ಮನೆ ಮಂದಿಯೆಲ್ಲ ಕುಳಿತು ಅದನ್ನು ಕೇಳಬೇಕು. ಯಾಕಂದ್ರೆ ಹೀಗೆ ಗರುಡ ಪುರಾಣ ಕೇಳಿದಾಗ, ಅವರಿಗೆ ತಮ್ಮವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗುತ್ತದೆ. ಯಾಕಂದ್ರೆ ಗರುಡ ಪುರಾಣ ಕೇಳಿದ ಬಳಿಕ, ಮನುಷ್ಯನಲ್ಲಿ ತಾನು ಯಾವಾಗಲೂ ಒಳ್ಳೆಯ ಕೆಲಸಗಳನ್ನೇ ಮಾಡಬೇಕು ಅಂತಾ ಅನ್ನಿಸುತ್ತದೆ. ಯಾಕಂದ್ರೆ ಕೆಟ್ಟ ಕೆಲಸಕ್ಕೆ ನರಕದಲ್ಲಿ ಘೋರ ಶಿಕ್ಷೆ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

- Advertisement -

Latest Posts

Don't Miss