Saturday, October 19, 2024

Latest Posts

ಬೆಳಿಗ್ಗೆ ಬೇಗ ಏಳಬೇಕಂದ್ರೆ ಈ ಟ್ರಿಕ್ಸ್ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ..

- Advertisement -

ನಮ್ಮಲ್ಲಿ ಎಷ್ಟೋ ಜನ ಬೆಳಿಗ್ಗೆ ಬೇಗ ಏಳಬೇಕು. ವ್ಯಾಯಾಮ ಮಾಡಬೇಕು. ವಾಕಿಂಗ್ ಹೋಗಬೇಕು, ಬೇಗ ಬೇಗ ಕೆಲಸ ಮುಗಿಸಿ, ಹೊಸತೇನಾದ್ರೂ ಮಾಡಬೇಕು. ಫಿಟ್ ಆಗಿರಬೇಕು. ಹಾಗೆ ಮಾಡಬೇಕು, ಹೀಗೆ ಮಾಡಬೇಕು ಅಂತಾ ಏನೇನೋ ಆಸೆ ಇಟ್ಟುಕೊಂಡಿರ್ತೀವಿ. ಆದ್ರೆ ಬೆಳಿಗ್ಗೆ ಎಚ್ಚರಾಗುತ್ತಿದ್ದಂತೆ, ಇಷ್ಟು ಬೇಗ ಬೆಳಗಾಗೋಯ್ತಾ. ಇನ್ನೊಂದೈದು ನಿಮಿಷ ಮಲಗೋಣ ಅಂತಾ ಹೇಳಿ. ಅರ್ಧ ಗಂಟೆ ಮಲಗಿಬಿಡ್ತೀರಿ. ಆಮೇಲೆ ಇಡೀ ದಿನ ಆಲಸ್ಯಭರಿತವಾಗಿರತ್ತೆ. ಹಾಗಾಗಿ ನಾವಿಂದು ಬೆಳಿಗ್ಗೆ ಬೇಗ ಏಳಬೇಕು ಅಂದ್ರೆ ಯಾವ ಟ್ರಿಕ್ಸ್ ಬಳಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಇಂಥ ವಿಷಯಗಳನ್ನು ಯಾರಲ್ಲಿಯೂ ಶೇರ್ ಮಾಡಿಕೊಳ್ಳಬೇಡಿ.. ಭಾಗ 1

ಬೆಳಿಗ್ಗೆ ಬೇಗ ಏಳಲು ಮೊದಲನೇಯ ರೂಲ್ಸ್‌ ಅಂದ್ರೆ, ನೀವು ಬೇಗ ಮಲಗಬೇಕು. ಆದ್ರೆ ನನಗೆ 11 ಗಂಟೆಯ ತನಕ ನನಗೆ ನಿದ್ದೇನೇ ಬರಲ್ಲ ಅನ್ನೋದು ಹಲವರ ಪ್ರಾಬ್ಲಮ್. ಯಾಕೆ ಹೀಗೆ ಆಗತ್ತೆ ಅಂದ್ರೆ, ಈಗೆಲ್ಲ ನಾವು ಮೊಬೈಲ್ ಬಳಸದೇ, ನಿದ್ದೆ ಮಾಡೋದೇ ಇಲ್ಲ. 10 ಗಂಟೆಗೆ ಮಲಗೋಕ್ಕೆ ಬಂದ್ರೆ, 11 ಗಂಟೆ ತನಕ ಮೊಬೈಲ್ ಬಳಕೆ ಮಾಡ್ತೀವಿ. ಆಮೇಲೆ ನಿದ್ದೆ ಮಾಡೋದು. ಹೀಗಾಗಿ ನಿಮಗೇ ಬೇಗ ನಿದ್ದೆ ಬರೋದಿಲ್ಲಾ. ಹಾಗಾಗಿ ನೀವು ಒಂದು ವಾರ ಯಾವುದೇ ಕಾರಣಕ್ಕೂ ಮೊಬೈಲ್ ಬಳಸದೇ 9 ಗಂಟೆಗೇ ಮಲಗೋಕ್ಕೆ ಟ್ರೈ ಮಾಡಿ. ಆಗ ನೀವು ಬೆಳಿಗ್ಗೆ 4ರಿಂದ 5 ಗಂಟೆಯೊಳಗೆ ಏಳಬಹುದು.

ಎರಡನೇಯದಾಗಿ ಬೆಳಿಗ್ಗೆ ಏಳಲು ಯಾವುದಾದರೂ ಒಂದು ಉತ್ತಮ ಕಾರಣ ಹುಡುಕಿ. ಉದಾಹರಣೆಗೆ ಬೆಳಿಗ್ಗೆ ಬೇಗ ಎದ್ದು, ಯಾವುದಾದರೂ ಶ್ಲೋಕ ಪಠಣ ಮಾಡುವುದು, ಸಂಗೀತ ಪ್ರ್ಯಾಕ್ಟೀಸ್ ಮಾಡುವುದು, ಪುಸ್ತಕ ಬರೆಯುವುದು, ಯೋಗ ಮಾಡುವುದು, ವಾಕಿಂಗ್, ಜಾಗಿಂಗ್ ಹೋಗುವುದು ಇತ್ಯಾದಿ ಕೆಲಸ ಮಾಡಬಹುದು. ನಿಮಗೆ ಯಾವಾಗ ಬೆಳಗಾಗುತ್ತದೆಯೋ, ನಾನು ಯಾವಾಗ ಸಂಗೀತ ಪ್ರ್ಯಾಕ್ಟೀಸ್ ಮಾಡುತ್ತೇನೋ ಅಂನ್ನುವಷ್ಟು ಆ ಕೆಲಸದ ಬಗ್ಗೆ ಕುತೂಹಲವಿರಬೇಕು. ಹೀಗಿದ್ದಾಗಲೇ, ನೀವು ಆ ವಿಷಯದಲ್ಲಿ ಯಶಸ್ಸು ಸಾಧಿಸೋಕ್ಕೆ ಆಗೋದು.

ಇಂಥ ವಿಷಯಗಳನ್ನು ಯಾರಲ್ಲಿಯೂ ಶೇರ್ ಮಾಡಿಕೊಳ್ಳಬೇಡಿ.. ಭಾಗ 2

ಮೂರನೇಯದಾಗಿ ಬೆಳಿಗ್ಗೆ ಬೇಗ ಎದ್ದು, ಫ್ರೆಶ್ ಅಪ್‌ ಆಗಿ, ಒಂದು ಗಂಟೆ ಅಥವಾ ಅರ್ಧ ಗಂಟೆ ಧ್ಯಾನಕ್ಕೆ ಮೀಸಲಿಡಿ. ಯಾಕಂದ್ರೆ ಏಕಾಗೃತೆಯಿಂದ ಧ್ಯಾನ ಮಾಡಿದ್ರೆ, ಮುಂದಿನ ನಿಮ್ಮ ಕೆಲಸಕ್ಕೆ ಅದು ಅನುಕೂಲವಾಗುತ್ತದೆ. ಆಗ ಯಾವುದೇ ಕೆಲಸವನ್ನು ಏಕಾಗೃತೆಯಿಂದ ಮಾಡಬಹುದು. ಅಥವಾ ನೀವು ಬೆಳಿಗ್ಗೆ ಎದ್ದ ತಕ್ಷಣ, ಸ್ನಾನ ಮಾಡಿ, ಪೂಜೆ ಮಾಡಿ. ಪೂಜೆಯಲ್ಲಿ ಅರ್ಧ ಸಮಯ ಕಳೆದಾಗ, ಮನದಲ್ಲಿ ಚೈತನ್ಯ ತುಂಬುತ್ತದೆ.

ನಾಲ್ಕನೇಯದಾಗಿ ಬೆಳಿಗ್ಗೆ ಬೇಗ ಏಳುವುದಕ್ಕೆ ದಿ ಬೆಸ್ಟ್ ಐಡಿಯಾ ಅಂದ್ರೆ, ನಿಮ್ಮ ಅಲಾಂನ್ನು ನಿಮ್ಮ ಬೆಡ್‌ನಿಂದ ದೂರವಿಡಿ. ಯಾಕಂದ್ರೆ ಹಲವರು ಬೆಳಿಗ್ಗೆ ಅಲಾಂ ಬಡಿದುಕೊಳ್ಳುತ್ತಿದ್ದಂತೆ, ಇನ್ನೊಂದೈದು ನಿಮಿಷ ಮಲಗೋಣವೆಂದು ಹೇಳಿ, ಸ್ನೂಜ್ ಮಾಡಿ ಮಲಗುತ್ತಾರೆ. ಹೀಗೆ 5 ನಿಮಿಷ ಅನ್ನುತ್ತ ಅನ್ನುತ್ತ ಅರ್ಧ ಗಂಟೆ ಕಳೆದು ಬಿಡುತ್ತದೆ. ಹಾಗಾಗಿ ನೀವು ನಿಮ್ಮ ಅಲಾಂನ್ನು ನಿಮ್ಮ ಬೆಡ್‌ನಿಂದ ದೂರಿವಿಸಿದರೆ, ಅದು ಬಡಿದುಕೊಳ್ಳುವಾಗ, ನೀವು ಅದನ್ನು ಸ್ಟಾಪ್ ಮಾಡಲು, ಬೆಡ್‌ನಿಂದ ಎದ್ದು ಹೋಗಬೇಕಾಗುತ್ತದೆ. ಮತ್ತು ಹಾಗೆ ಹೋದ ಬಳಿಕ, ಏಳಲೇಬೇಕಾಗುತ್ತದೆ.

ಈ 12 ಟ್ರಿಕ್ಸ್ ಬಳಸಿ, ಜೀವನದಲ್ಲಿ ಗೌರವ ಗಳಿಸಿ: ಭಾಗ 2

- Advertisement -

Latest Posts

Don't Miss