Tuesday, September 23, 2025

Latest Posts

ರೆಸ್ಟೋರೆಂಟ್ ಸ್ಟೈಲ್ ಪಾಲಕ್ ಸೂಪ್ ಈಗ ಮನೆಯಲ್ಲೇ ತಯಾರಿಸಿ..

- Advertisement -

ಆರೋಗ್ಯಕ್ಕೆ ಉತ್ತಮವಾಗಿರುವ, ಕಬ್ಬಿಣ ಸತ್ವವನ್ನು ಹೊಂದಿರುವ ಪಾಲಕ್ ಸೊಪ್ಪು ಸೇವಿಸಿದ್ರೆ, ಆರೋಗ್ಯಕ್ಕೆ ತುಂಬಾ ಉತ್ತಮ. ಪಾಲಕ್‌ನಿಂದ ಪಕೋಡಾ, ಸಾಂಬಾರ್, ಪಲ್ಯ ತಯಾರಿಸಲಾಗತ್ತೆ. ಆದ್ರೆ ಇದನ್ನ ತಿನ್ನುವ ಸರಿಯಾದ ರೀತಿ ಅಂದ್ರೆ ಸೂಪ್ ಮಾಡುವ ಮೂಲಕ. ಹಾಗಾಗಿ ನಾವಿಂದು ಪಾಲಕ್ ಸೂಪ್ ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನು ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಬೆಳಿಗ್ಗೆ ಬೇಗ ಏಳಬೇಕಂದ್ರೆ ಈ ಟ್ರಿಕ್ಸ್ ಬಳಸಿ, ಆರೋಗ್ಯ ಕಾಪಾಡಿಕೊಳ್ಳಿ..

ಬೇಕಾಗುವ ಸಾಮಗ್ರಿ: ಒಂದು ಬೌಲ್ ಪಾಲಕ್ ಸೊಪ್ಪು, 10ರಿಂದ 20 ಎಸಳು ಬೆಳ್ಳುಳ್ಳಿ, 5 ಸ್ಪೂನ್ ಫ್ರೆಶ್ ಕ್ರೀಮ್, ಒಂದು ಕ್ಯೂಬ್ ಬೆಣ್ಣೆ, ಒಂದು ಪಲಾವ್ ಎಲೆ, ಎರಡು ಈರುಳ್ಳಿ, ಬೇಕಾದಲ್ಲಿ ಎರಡು ಟೊಮೆಟೋ ಬಳಸಬಹುದು. ಅರ್ಧ ಕಪ್ ಹಾಲು, ಕೊಂಚ ಪೆಪ್ಪರ್ ಪುಡಿ, ಚಿಟಿಕೆ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಸೋರೆಕಾಯಿ ಸೇವನೆಯಿಂದ ಆರೋಗ್ಯ ಲಾಭದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

ಮಾಡುವ ವಿಧಾನ: ಗ್ಯಾಸ್ ಆನ್ ಮಾಡಿ, ಪ್ಯಾನ್ ಇಟ್ಟು, ಅದಕ್ಕೆ ಬೆಣ್ಣೆ ಹಾಕಿ, ಪಲಾವ್ ಎಲೆ ಮತ್ತು 10 ಎಸಳು ಬೆಳ್ಳುಳ್ಳಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಈರುಳ್ಳಿ ಸೇರಿಸಿ, ಹುರಿಯಿರಿ. ಈಗ ಇದಕ್ಕೆ ಪಾಲಕ್ ಎಲೆ ಸೇರಿಸಿ, ಚೆನ್ನಾಗಿ ಬಾಡಿಸಿ. ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಮೇಲೆ, ಇದರಿಂದ ಪಲಾವ್ ಎಲೆ ತೆಗೆದು, ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ಪೇಸ್ಟ್ ತಯಾರಿಸಿ.

ಬದನೆ ಗೊಜ್ಜು ಹೀಗೆ ಮಾಡಿದ್ರೆ ಸಖತ್ ಟೇಸ್ಟಿಯಾಗಿರತ್ತೆ..

ಈಗ ಮತ್ತೆ ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ, ಪೇಸ್ಟ್ ಮಾಡಿದ ಮಿಶ್ರಣದ ಹಸಿ ವಾಸನೆ ಹೋಗುವವರೆಗೂ ಬೇಯಿಸಿ. ಈಗ ಇದಕ್ಕೆ ಅರ್ಧ ಕಪ್ ಹಾಲು, ಎರಡು ಸ್ಪೂನ್ ಫ್ರೇಶ್ ಕ್ರೀಮ್, ಪೆಪ್ಪರ್ ಪುಡಿ, ಕೊಂಚ ಸಕ್ಕರೆ, ಹಾಕಿ 5 ನಿಮಿಷ ಮಮಂದ ಉರಿಯಲ್ಲಿ ಬೇಯಿಸಿ. ಈಗ ಸೂಪ್ ರೆಡಿ. ಇದಾದ ಬಳಿಕ ಒಂದು ಒಗ್ಗರಣೆ ಸೌಟಿನಲ್ಲಿ ಕೊಂಚ ಎಣ್ಣೆ, ತುಪ್ಪ ಅಥವಾ ಬೆಣ್ಣೆ ಹಾಕಿ, ಅದರಲ್ಲಿ ಉಳಿದ 10 ಎಸಳು ಬೆಳ್ಳುಳ್ಳಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಸೇರಿಸಿ ಹುರಿಯಿರಿ. ಹೀಗೆ ಹುರಿದ ಬೆಳ್ಳುಳ್ಳಿ ಮತ್ತು 2 ಸ್ಪೂನ್ ಕ್ರೀಮನಿಂದ್ ಸೂಪನ್ನು ಗಾರ್ನಿಶ್ ಮಾಡಿ, ಸವಿಯಲು ಕೊಡಿ.

- Advertisement -

Latest Posts

Don't Miss