Thursday, December 4, 2025

Latest Posts

ಯಶಸ್ಸು ಗಳಿಸಬೇಕೆಂದರೆ ಶ್ರೀಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 1

- Advertisement -

ಕುರುಕ್ಷೇತ್ರ ಯುದ್ಧ ನಡೆಯುವ ವೇಳೆ ಅರ್ಜುನ ಬೇಸರಗೊಂಡಿದ್ದ. ಎದುರಾಳಿಗಳೂ ತಮ್ಮವರೇ, ಸಂಬಂಧಿಕರು, ಗುರುಗಳು, ಹಿರಿಯರೊಂದಿಗೆ ನಾನು ಯುದ್ಧ ಮಾಡುವುದಿಲ್ಲವೆಂದು ಅರ್ಜುನ ಕೈ ಚೆಲ್ಲಿ ಕುಳಿತಿದ್ದ. ಆಗ ಶ್ರೀಕೃಷ್ಣ ಭಗವದ್ಗೀತೆಯ ಸಾರವನ್ನು ಹೇಳಿ, ಯುದ್ಧ ಯಾಕೆ ಮುಖ್ಯವಾಗಿದೆ ಎಂದು ಹೇಳಿದ. ನಂತರವೇ ಅರ್ಜುನ ಯುದ್ಧಕ್ಕೆ ಇಳಿದಿದ್ದು. ಇಂಥ ಶ್ರೀಕೃಷ್ಣ ಪರಮಾತ್ಮ, ಜೀವನದಲ್ಲಿ ನಾನು ಉದ್ಧಾರವಾಗಬೇಕು ಅಂದರೆ, ಹೀಗೆ ಇಕಬೇಕೆಂದು ಕೆಲ ಮಾತುಗಳನ್ನು ಹೇಳಿದ್ದಾನೆ. ಅದೇನೆಂದು ತಿಳಿಯೋಣ ಬನ್ನಿ..

ಊಟ ಮಾಡುವಾಗ ಇದನ್ನು ಗಮನದಲ್ಲಿಡಿ, ಇಲ್ಲವಾದರೆ ಆರೋಗ್ಯ, ಅದೃಷ್ಟ ನಿಮ್ಮ ಕೈ ತಪ್ಪುತ್ತದೆ..

ಮೊದಲನೇಯದಾಗಿ ರಹಸ್ಯ ನಿಮ್ಮ ಜೀವನ ನಾಶ ಮಾಡುವ ಕಿಲಿ ಕೈ ಇದ್ದ ಹಾಗೆ. ಹಾಗಾಗಿ ಆ ಕಿಲಿ ಕೈಯನ್ನು ಯಾರಿಗೂ ಕೊಡಬೇಡಿ. ಇದರ ಅರ್ಥ, ನಿಮ್ಮ ಜೀವನದ ರಹಸ್ಯವನ್ನು ಯಾರಲ್ಲಯೂ ಹೇಳಬೇಡಿ. ಅದು ನಿಮ್ಮ ಪ್ರೀತಿಪಾತ್ರರೇ ಆಗಿರಬಹುದು, ಸಂಬಂಧಿಕರು, ಸ್ನೇಹಿತರು ಯಾರೇ ಆಗಿರಬಹುದು, ಅವರ ಬಳಿ ನಿಮ್ಮ ರಹಸ್ಯ ಹೇಳಬೇಡಿ..

ಎರಡನೇಯದಾಗಿ ಯಾರನ್ನೂ ನಕಲು ಮಾಡಬೇಡಿ. ಇದು ಪೈಪೋಟಿ ಇರುವ ಯುಗ. ಇಲ್ಲಿ ನಾವು ಅವರಿಗಿಂತ ಮುಂದಿರಬೇಕು ಅಂತಾ ಅಂದುಕೊಳ್ಳುವವರೇ ಹೆಚ್ಚು. ಹಾಗಾಗಿ ಉದ್ಯಮದ ವಿಷಯದಲ್ಲಿ, ಕೆಲಸದ ವಿಷಯದಲ್ಲಿ, ಎಲ್ಲ ವಿಷಯದಲ್ಲೂ ಜನ ನಕಲು ಮಾಡಿಯಾದರೂ ಯಶಸ್ಸು ಗಳಿಸಲು ನೋಡುತ್ತಾರೆ. ಆದ್ರೆ ನಕಲು ಮಾಡುವವರೆಂದೂ ಉದ್ಧಾರವಾಗುವುದಿಲ್ಲ ಎನ್ನುತ್ತಾನೆ ಶ್ರೀಕೃಷ್ಣ. ಹಾಗಾಗಿ ನಿಮ್ಮ ಸ್ವಂತಿಕೆಯನ್ನು ತೋರಿಸಿ, ಗೆಲುವು ಸಾಧಿಸಲು ಪ್ರಯತ್ನಿಸಿ.

ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..

ಮೂರನೇಯದಾಗಿ ಯಾವುದೇ ಆಸೆಯಿಲ್ಲದೇ, ಸಹಾಯ ಮಾಡಿ. ಕೆಲವರು ನಾನು ಇವರಿಗೆ ಈ ಸಹಾಯ ಮಾಡಿದ್ರೆ, ಅವರು ನನಗೆ ಆ ಸಹಾಯ ಮಾಡಬಹುದು. ಅಥವಾ ಯಾವುದಾದರೂ ವಸ್ತುವನ್ನು ನೀಡಬಹುದು ಎಂದು ಆಸೆ ಇಟ್ಟುಕೊಂಡು ಸಹಾಯ ಮಾಡಲು ಹೋಗುತ್ತಾರೆ. ಆದ್ರೆ ಶ್ರೀಕೃಷ್ಣನ ಪ್ರಕಾರ, ಯಾವುದೇ ಕಾಮನೆ ಇಲ್ಲದೇ, ನಿಮ್ಮ ಕೆಲಸ ನೀವು ಮಾಡಿ. ಅಗತ್ಯವಿದ್ದವರಿಗೆ ಸಹಾಯ ಮಾಡಬೇಕು ಎನ್ನುತ್ತಾನೆ ಶ್ರೀಕೃಷ್ಣ.

ನಾಲ್ಕನೇಯದಾಗಿ ಅಗತ್ಯಕ್ಕಿಂತ ಹೆಚ್ಚು ಮಾತನಾಡಬೇಡಿ. ಶ್ರೀಕೃಷ್ಣ ಹೇಳುವ ಪ್ರಕಾರ, ನಾವು ಅವಶ್ಯಕತೆ ಇರುವಷ್ಟು ಮಾತ್ರವೇ ಮಾತನಾಡಬೇಕೆ ಹೊರತು, ಅದಕ್ಕಿಂತ ಹೆಚ್ಚಲ್ಲ. ಹೆಚ್ಚು ಮಾತನಾಡುವುದರಿಂದ ನಾವು ನಷ್ಟ ಅನುಭವಿಸುತ್ತೇವೆ ಹೊರತು, ಲಾಭವನ್ನಲ್ಲ. ನಮ್ಮ ಪಂಚೇದ್ರಿಯಗಲ್ಲಿ ಕಿವಿ ಎರಡುಂಟು, ಕಣ್ಣೆರಡುಂಟು, ದೇಹದ ತುಂಬ ಚರ್ಮ ಉಂಟು. ಮೂಗಿಗೆ ಎರಡು ಹೊಳ್ಳೆಗಳುಂಟು. ಆದರೆ ನಾಲಿಗೆ ಒಂದೇ. ಯಾಕೆ ಹೀಗೆ ಅಂದರೆ, ನಾವು ಹೆಚ್ಚು ಗಮನಿಸಲಿ, ಹೆಚ್ಚು ಕೇಳಿಸಿಕೊಳ್ಳಲಿ ಆದರೆ, ಕಡಿಮೆ ಮಾತನಾಡಲಿ ಎಂಬ ಕಾರಣಕ್ಕೆ.

ನಂದಿ ಶಿವನ ವಾಹನವಾಗಿದ್ದು ಹೇಗೆ..? ಯಾರು ಈ ನಂದಿ..?

ಐದನೇಯದಾಗಿ ನಿಮ್ಮವರು ಯಾರೆಂದು ಮೊದಲು ತಿಳಿದುಕೊಳ್ಳಿ. ನೀವು ಒಳ್ಳೆಯ ಕೆಲಸ ಮಾಡುವಂತೆ ಪ್ರೇರೆಪಿಸುವವರು, ನಿಮ್ಮಿಂದ ಸಮಾಜಕ್ಕೆ ಒಳಿತಾಗುವಂತೆ ಮಾಡುವವರು, ನಿಮಗೆ ಒಳ್ಳೆಯದು ಬಯಸುವವರು, ಮತ್ತು ನೀವು ಬೇಡದ ಕೆಲಸ ಮಾಡುವಾಗ, ಅದು ತಪ್ಪೆಂದು ಹೇಳಿ, ಬೈಯ್ದು ಬುದ್ಧಿ ಹೇಳುವವರೇ ನಿಮ್ಮವರು. ಯಾರಾದರೂ ನಿಮಗೆ ಬೈದು ಅದು ತಪ್ಪು ಹಾಗೆ ಮಾಡಬೇಡ ಎಂದರೆ, ನೀವು ಅದನ್ನ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕು. ಆದ್ರೆ ನೀವು ಮಾಡಿದ ತಪ್ಪನ್ನು ಸರಿ ಎಂದು ಹೊಗಳಿ ಅಟ್ಟಕ್ಕೇರಿಸುವವರು, ನಿಮ್ಮ ಸೋಲನ್ನು ಕಾಣ ಬಯಸುವವರು. ಹಾಗಾಗಿ ನಿಮ್ಮ ಒಳಿತನ್ನ ಬಯಸುವವರೇ ನಿಮ್ಮವರು.

ಇನ್ನುಳಿದ ಮಾತುಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ..

ಯಶಸ್ಸು ಗಳಿಸಬೇಕೆಂದರೆ ಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 2

- Advertisement -

Latest Posts

Don't Miss