ಟೊಮೆಟೋ ಹಣ್ಣು ಆರೋಗ್ಯಕ್ಕೆ ಉತ್ತಮ. ಆದ್ರೆ ಇದನ್ನ ಅಗತ್ಯಕ್ಕಿಂತ ಜಾಸ್ತಿ ತಿಂದ್ರೆ, ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿದಿನ ಟೊಮೆಟೋ ತಿನ್ನಬಾರದು ಅಂತಾ ಹೇಳಲಾಗತ್ತೆ. ಆದ್ರೆ ನೀವು ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಟೋಮೆಟೋದಿಂದ ಮಾಡಿದ ಪದಾರ್ಥವನ್ನ ಸೇವಿಸಬಹುದು. ಹಾಗಾಗಿ ನಾವಿಂದು ಟೇಸ್ಟಿ ಟೋಮೆಟೋ ಸೂಪ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಪನೀರ್ ಪೆಪ್ಪರ್ ಫ್ರೈ ಹೀಗೆ ತಯಾರಿಸಿ ನೋಡಿ..
ಬೇಕಾಗುವ ಸಾಮಗ್ರಿ: 5 ಟೊಮೆಟೋ, 2 ಈರುಳ್ಳಿ, ಎರಡು ಹಸಿ ಮೆಣಸಿನಕಾಯಿ, ಸಣ್ಣ ತುಂಡು ಶುಂಠಿ, 15 ಎಸಳು ಬೆಳ್ಳುಳ್ಳಿ, ಒಂದು ಕ್ಯೂಬ್ ಬೆಣ್ಣೆ ಅಥವಾ ತುಪ್ಪ, ಎರಡು ಸ್ಪೂನ್ ಫ್ರೆಶ್ ಕ್ರೀಮ್, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಸ್ಪೂನ್ ಪೆಪ್ಪರ್ ಪುಡಿ ಅಥವಾ 5 ಕಾಳು ಪೆಪ್ಪರ್ ಬಳಸಿ, ಚಿಟಿಕೆ ಸಕ್ಕರೆ, ಒಂದು ಪಲಾವ್ ಎಲೆ, ಕೊಂಚ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಈಗ ರೆಸ್ಟೋರೆಂಟ್ ಸ್ಟೈಲ್ ಫ್ರೈಡ್ ರೈಸ್ ಮನೆಯಲ್ಲೇ ತಯಾರಿಸಬಹುದು…
ಮಾಡುವ ವಿಧಾನ: ಮೊದಲು ಒಂದು ಪ್ಯಾನ್ ಇರಿಸಿ, ಅದರಲ್ಲಿ ಅರ್ಧ ಬೆಣ್ಣೆ, ಪಲಾವ್ ಎಲೆ, ಟೊಮೆಟೋ, 7 ಎಸಳು ಬೆಳ್ಳುಳ್ಳಿ, ಪೆಪ್ಪರ್ ಕಾಳು, ಹಸಿ ಮೆಣಸು ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಗ್ಯಾಸ್ ಆಫ್ ಮಾಡಿ, ತಣಿಯಲು ಬಿಡಿ. ಈ ಮಿಶ್ರಣ ತಣಿದ ಮೇಲೆ, ಪಲಾವೆ ಎಲೆ ತೆಗೆದು, ಚಿಕ್ಕ ತುಂಡು ಶುಂಠಿ, ಕೊತ್ತೊಂಬರಿ ಸೊಪ್ಪು,ಉಪ್ಪು ಸೇರಿಸಿ, ಗ್ರೈಂಡ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ.
ಹೊಟೇಲ್ ಶೈಲಿಯ ಸ್ವೀಟ್ ಕಾರ್ನ್ ಸೂಪ್ ಈಗ ಮನೆಯಲ್ಲೇ ತಯಾರಿಸಿ…
ಈಗ ಮತ್ತೆ ಪ್ಯಾನ್ ಬಿಸಿ ಮಾಡಿ, ಉಳಿದಿದ್ದ ಬೆಣ್ಣೆ, ಪೇಸ್ಟ್ ಮಾಡಿದ ಮಿಶ್ರಣವನ್ನು ಹಾಕಿ, 5 ನಿಮಿಷ ಕೈಯಾಡಿಸುತ್ತ ಬೇಯಿಸಿ. ನಂತರ ಕ್ರೀಮ್ ಹಾಕಿ, ಮತ್ತೆ ಬೇಯಿಸಿ. ಈಗ ಈ ಪ್ಯಾನ್ ಬದಿಗಿರಿಸಿ, ಒಗ್ಗರಣೆ ಸೌಟಿಟ್ಟು, ಅದಕ್ಕೆ ಕೊಂಚ ಬೆಣ್ಣೆ ಮತ್ತು 8 ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ. ಈಗ ಬಿಸಿ ಬಿಸಿಯಾಗಿರುವ ಸೂಪ್ಗೆ ಹುರಿದ ಬೆಳ್ಳುಳ್ಳಿ ಸೇರಿಸಿ, ಸರ್ವ್ ಮಾಡಿ.