Wednesday, October 15, 2025

Latest Posts

ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1

- Advertisement -

ರಾವಣ ರಾಕ್ಷಸನಾಗಿದ್ದರೂ, ಸಕಲ ವಿದ್ಯಾ ಪಾರಂಗತನಾಗಿದ್ದ. ವೇದ- ವಿದ್ಯೆ, ಜ್ಯೋತಿಷ್ಯ, ಮಂತ್ರೋಚ್ಛಾರಣೆ, ಶ್ಲೋಕಾದಿಗಳ ಪಠಣದಲ್ಲಿ ಉತ್ತುಂಗನಾಗಿದ್ದ. ಅಂಥ ರಾವಣ, ರಾಮನಿಂದ ಮರಣ ಹೊಂದುವ ವೇಳೆ, ರಾಮ ಲಕ್ಷ್ಮಣನನ್ನು ಕುರಿತು, ಲಕ್ಷ್ಮಣ, ರಾವಣ ರಾಕ್ಷಸನೇ ಆಗಿರಬಹುದು. ಅವನು ಸೀತೆಯ ಮೇಲೆ ಕೆಂಗಣ್ಣೇ ಹಾಕಿರಬಹುದು. ಆದರೆ ಅವನು ಸಕಲ ವಿದ್ಯಾ ಪಾರಂಗತನಾಗಿದ್ದ. ಅವನಿಗೆ ಜೀವನ ಅನುಭವವೂ ಹೆಚ್ಚಿದೆ. ಅವನ ಬಳಿ ಹೋಗಿ, ಜೀವನಕ್ಕೆ ಬೇಕಾದ ಪಾಠಗಳ ಬಗ್ಗೆ ಕೇಳು ಎಂದು ಹೇಳುತ್ತಾನೆ. ಹೀಗೆ ಲಕ್ಷ್ಮಣ ರಾವಣನ ಬಳಿ ಹೋಗಿ, ಜೀವನ ಪಾಠದ ಬಗ್ಗೆ ಕೇಳಿದಾಗ, ರಾವಣ ಕೆಲ ಮಾತುಗಳನ್ನು ಹೇಳುತ್ತಾನೆ. ಆ ಮಾತುಗಳೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಯಶಸ್ಸು ಗಳಿಸಬೇಕೆಂದರೆ ಶ್ರೀಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 1

ಮೊದಲನೇಯದ್ದು, ಶುಭಸ್ಯ ಶೀಘ್ರಂ. ಉತ್ತಮ ಕೆಲಸಗಳನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕು. ಉತ್ತಮ ಕೆಲಸ ಮಾಡುವುದನ್ನು ನಾವು ಮುಂದೂಡಿದಷ್ಟು, ನಮಗೇ ನಷ್ಟವಾಗುತ್ತದೆ. ನಾನು ರಾಮನನ್ನು ಮೊದಲೇ ಅರ್ಥ ಮಾಡಿಕೊಳ್ಳುವ ಉತ್ತಮ ಕೆಲಸ ಮಾಡಿದ್ದರೆ ಇಂದು ನನಗೆ ಈ ಗತಿ ಬರುತ್ತಿರಲಿಲ್ಲ. ಇನ್ನು ಅಶುಭ ಕೆಲಸಗಳನ್ನು ಮಾಡುವುದನ್ನು ಆದಷ್ಟು ಮುಂದೂಡಬೇಕು.

ಸೌಂದರ್ಯದ ಬಗ್ಗೆ ಹೆಚ್ಚು ಅಹಂಕಾರ ಬೇಡ ಅನ್ನುತ್ತೆ ಗರುಡಪುರಾಣದ ಈ ಮಾತು..

ಎರಡನೇಯದ್ದು, ಶತ್ರುವನ್ನ ಎಂದಿಗೂ ಕೀಳಾಗಿ ಭಾವಿಸಬೇಡಿ. ನಾನು ದೇವರಲ್ಲಿ ವರ ಬೇಡುವಾಗ ನನಗೆ ದೇವರು, ದಾನವರು, ಗಂಧರ್ವರಿಂದ ನನಗೆ ಸಾವಾಗಬಾರದು ಎಂದು ಬೇಡಿದ್ದೆ. ಏಕೆಂದರೆ, ನನಗೆ ನರ ಮತ್ತು ವಾನರರು ತುಚ್ಛರೆನ್ನಿಸುತ್ತಿದ್ದರು. ನಾನು ಹಾಗೆ ಅಂದುಕೊಂಡಿದ್ದಕ್ಕೆ, ಇಂದು ನನ್ನ ಅಂತ್ಯಕ್ಕೆ ನರ ಮತ್ತು ವಾನರರು ಕಾರಣವಾಗಿದ್ದಾರೆ ಎನ್ನುತ್ತಾನೆ ರಾವಣ.

ಹೆಣ್ಣೆಂದರೆ ಉಪ್ಪಿದ್ದ ಹಾಗೆ ಎಂದಿದ್ದಾನೆ ಶ್ರೀಕೃಷ್ಣ.. ಯಾಕೆ ಹೀಗೆ ಹೇಳಿದ..?

ಮೂರನೇಯದ್ದು, ನಿಮ್ಮ ರಹಸ್ಯ ಯಾರಲ್ಲಿಯೂ ಹೇಳಬೇಡಿ. ನಾನು ಈ ತಪ್ಪನ್ನು ಮಾಡದಿದ್ದಲ್ಲಿ ಇಂದು ನನಗೆ ಸಾವು ಸಂಭವಿಸುತ್ತಿರಲಿಲ್ಲ. ನನ್ನ ನಾಭಿಗೆ ಹೊಡೆದರಷ್ಟೇ ನನಗೆ ಸಾವು ಬರುತ್ತದೆ ಎಂಬ ಸತ್ಯವನ್ನು ನಾನು ನನ್ನ ಸಹೋದರ ವಿಭೀಷಣನಿಗೆ ಹೇಳಿದ್ದೆ. ಅವನು ರಾಮನಲ್ಲಿ ಈ ರಹಸ್ಯವನ್ನು ಹೇಳಿದ್ದಕ್ಕೆ, ರಾಮ ನನ್ನ ನಾಭಿಗೆ ಬಾಣ ಬಿಟ್ಟಿದ್ದು, ಮತ್ತು ನನಗೆ ಈ ಸ್ಥಿತಿ ಬಂದಿದ್ದು. ಹಾಗಾಗಿ ನಿನ್ನ ಜೀವನದ ರಹಸ್ಯವನ್ನು ಯಾರಲ್ಲಿಯೂ ಹೇಳಬೇಡವೆಂದು ರಾವಣ ಲಕ್ಷ್ಮಣನಲ್ಲಿ ಹೇಳುತ್ತಾನೆ.

ನಾಲ್ಕನೇಯದ್ದು, ಯಾವಾಗಲೂ ಶಕ್ತಿಯನ್ನು ಪಡೆಯುತ್ತಿರಿ. ಶಕ್ತಿ ಎಂದರೆ ದೇಹದ ಶಕ್ತಿಯಲ್ಲ ಬದಲಾಗಿ, ನಮ್ಮ ಜೊತೆಗಿರುವವರೂ ನಮ್ಮ ಶಕ್ತಿ. ಎಂದಿಗೂ ನಿಮಗೆ ಕಷ್ಟಕಾಲದಲ್ಲಿ ಸಾಥ ನೀಡುವವರನ್ನು ದೂರ ಮಾಡಬೇಡಿ. ಸ್ನೇಹಿತರು, ಸಂಬಂಧಿಕರು, ಜೀವನ ಸಂಗಾತಿ ಇವರೆಲ್ಲರೂ ಶಕ್ತಿ ಇದ್ದಂತೆ. ಇವರೆಲ್ಲರನ್ನೂ ಪ್ರೀತಿಯಿಂದ ಹಿಡಿದಿಟ್ಟುಕೊಳ್ಳಿ ಎಂದು ರಾವಣ ಹೇಳುತ್ತಾನೆ.

ಯಶಸ್ಸು ಗಳಿಸಬೇಕೆಂದರೆ ಕೃಷ್ಣನ ಈ 10 ಮಾತನ್ನ ಕೇಳಿ..- ಭಾಗ 2

ಐದನೇಯದ್ದು, ಯಾವಾಗಲೂ ಹೊಸ ಹೊಸತನ್ನು ಕಲಿಯುತ್ತಿರಿ. ನೀವು ಜೀವನದಲ್ಲಿ ಹೊಸ ಹೊಸ ಆವಿಷ್ಕಾರ ಮಾಡಿದಷ್ಚು, ಹೊಸ ಹೊಸ ವಿಷಯಗಳನ್ನು ಕಲಿತುಕೊಂಡಷ್ಟು ನಿಮ್ಮ ಜ್ಞಾನ ಹೆಚ್ಚುತ್ತದೆ. ಅಲ್ಲದೇ, ಸಮಾಜದಲ್ಲಿ ನಿಮ್ಮ ಬಗೆಗಿನ ಗೌರವ ಹೆಚ್ಚುತ್ತದೆ ಎಂದು ರಾವಣ ಲಕ್ಷ್ಮಣನಿಗೆ ಹೇಳುತ್ತಾನೆ.

ಇನ್ನುಳಿದ ವಿಚಾರವನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss