ಸೊಳ್ಳೆ ನೋಡೋಕ್ಕೆ ಚಿಕ್ಕ ಕೀಟವಾದರೂ ಕೂಡ, ಇದು ಕೊಡುವ ಕಾಟ ಅಷ್ಟಿಷ್ಟಲ್ಲ. ಎಷ್ಟೋ ಜನ ಸೊಳ್ಳೆ ಕಚ್ಚಿ ಢೆಂಗ್ಯೂ ಬಂದು ಸತ್ತುಹೋದವರಿದ್ದಾರೆ. ಇಂಥ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಏನೇನು ಪರಿಹಾರ ಮಾಡಬಹುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..
ಮೊದಲನೇಯದಾಗಿ ಸೊಳ್ಳೆ ಬ್ಯಾಟ್ ಬೀಸಿ, ಸೊಳ್ಳೆ ಸಾಯಿಸುವುದನ್ನ ಕಡಿಮೆ ಮಾಡಿ. ಮಲಗುವಾಗ ಫ್ಯಾನ್ ಹಾಕಿ ಸೊಳ್ಳೆ ಓಡಿಸುವ ಬದಲು, ಸೊಳ್ಳೆ ಪರದೆ ಬಳಸಿ, ಮಲಗಿ. ಇನ್ನು ಸೊಳ್ಳೆ ಬತ್ತಿ ಬಳಸಿದ್ರೆ, ಅದರಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಸಂಜೆ ಧೂಪ ಹಾಕಿ, ಅಥವಾ ಕರ್ಪೂರ ಮತ್ತು ಎಣ್ಣೆ ಬಳಸಿ, ದೀಪ ಹಚ್ಚಿ. ಇದರಿಂದಲೂ ಸೊಳ್ಳೆ ಕಾಟ ತಪ್ಪುತ್ತದೆ.
ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ..
ಇನ್ನು ಕೆಲವರು ಮೈಗೆ ಕ್ರೀಮ್ ಹಚ್ಚಿದ್ರೆ ಸೊಳ್ಳೆ ಕಚ್ಚುವುದಿಲ್ಲವೆಂದು, ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಸುತ್ತಾರೆ. ಇದರಿಂದ ಚರ್ಮ ರೋಗ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಮನೆಯಲ್ಲೇ ಎಣ್ಣೆಯನ್ನ ತಯಾರಿಸಿ, ಅದನ್ನ ಮೈಗೆ ಹಚ್ಚಿಕೊಳ್ಳಿ. ಇದರಿಂದಲೂ ಸೊಳ್ಳೆ ಕಚ್ಚುವುದಿಲ್ಲ. ಎರಡು ಸ್ಪೂನ್ ಬೇವಿನ ಎಣ್ಣೆಗೆ ಎರಡು ಸ್ಪೂನ್ ತೆಂಗಿನ ಎಣ್ಣೆ ಮಿಕ್ಸ್ ಮಾಡಿ, ದೇಹಕ್ಕೆ ಹಚ್ಚಿಕೊಳ್ಳಿ. ಇದರಿಂದಲೂ ಸೊಳ್ಳೆಯಿಂದ ಮುಕ್ತಿ ಪಡೆಯಬಹುದು.