Friday, September 20, 2024

Latest Posts

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

- Advertisement -

ಮನುಷ್ಯನಿಗೆ ವರ್ಷಕ್ಕೊಮೆಯಾದರೂ ಜ್ವರ ಬರಬೇಕು, ಇದರಿಂದ ದೇಹ ಶುದ್ಧವಾಗುತ್ತದೆ. ಇದು ಒಳ್ಳೆಯದು ಅಂತಾ ಹೇಳಲಾಗುತ್ತದೆ. ಆದ್ರೆ ಜ್ವರ ಬಂದಾಗ, ನಾವೆಲ್ಲರೂ ಕೆಲ ಸಾಮಾನ್ಯ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ನಾವು ಅದ್ಯಾವ ತಪ್ಪುಗಳನ್ನ ಮಾಡುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..

ಬೇಬಿಕಾರ್ನ್ ಬಳಸಿ ಈ ಖಾದ್ಯ ತಯಾರಿಸಿ ನೋಡಿ..

ಮೊದಲನೇಯ ತಪ್ಪು, ಊಟ ಮಾಡುವುದನ್ನು ಮುಂದುವರಿಸುವುದು. ನಿಮಗೆ ಜ್ವರ, ಶೀತ, ಕೆಮ್ಮುಂಟಾದಾಗ ನೀವು ಎರಡು ದಿನವಾದರೂ ಉಪವಾಸ ಮಾಡಬೇಕು. ಅಂದ್ರೆ ಸೂಪ್, ಮನೆಯಲ್ಲೇ ತಯಾರಿಸಿದ, ಐಸ್ ಬಳಸದ ಪಾನೀಯ, ಎಳನೀರು, ಡ್ರೈಫ್ರೂಟ್ಸ್ ಇಂತಹುದನ್ನು ಸೇವಿಸಬೇಕು. ಹೀಗೆ ಸರಳವಾದ ಆಹಾರ ಸೇವಿಸಿ, ಉಪವಾಸ ಮಾಡಬೇಕು. ಅದನ್ನು ಬಿಟ್ಟು ನೀವು ಎಂದಿನಂತೆ, ಘನ ಆಹಾರವನ್ನು ಸೇವಿಸಿದರೆ, ಆಹಾರ ಮತ್ತು ನಿಮ್ಮ ದೇಹದಲ್ಲಿರುವ ಜ್ವರ ಕೂಡಿ, ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ. ಮತ್ತು ಜೀರ್ಣಕ್ರಿಯೆ ಸಮಸ್ಯೆ ಉಂಟಾದರೆ, ನಿಮ್ಮ ಆರೋಗ್ಯ ಸುಧಾರಿಸುವುದಕ್ಕೆ ತುಂಬ ಸಮಯ ತೆಗೆದುಕೊಳ್ಳುತ್ತದೆ.

ಬಾದಾಮಿ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಗೊತ್ತಾ..?

ಎರಡನೇಯ ತಪ್ಪು ರೆಸ್ಟ್ ಮಾಡದಿರುವುದು. ಜ್ವರ ಬಂದಾಗ, ಕೆಲಸಕ್ಕೆ ಬ್ರೇಕ್ ಹಾಕಿ, ಮನೆಯಲ್ಲಿ ರೆಸ್ಟ್ ಮಾಡಬೇಕು. ಆದರೆ ರೆಸ್ಟ್ ಅನ್ನೋ ಹೆಸರಲ್ಲಿ ಟಿವಿ ನೋಡೋದು, ಮೊಬೈಲ್ ನೋಡೋದು ಅಥವಾ ಲ್ಯಾಪ್‌ಟಾಪ್ ಬಳಸೋದೆಲ್ಲ ಮಾಡೋದಲ್ಲ. ಬದಲಾಗಿ ನೀವು ಏನನ್ನೂ ಬಳಸದೇ, ಸುಮ್ಮನೆ ನಿದ್ರಿಸುವುದು. ಅಥವಾ ಸುಮ್ಮನೆ ಕುಳಿತುಕೊಳ್ಳುವುದು. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಸೋರೆಕಾಯಿ ಸೇವನೆಯಿಂದ ಆರೋಗ್ಯ ಲಾಭದ ಬಗ್ಗೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ..

ಮೂರನೇಯ ತಪ್ಪು ಜ್ವರ ಬಂತು ಅಂದಕೂಡಲೇ ಮಾತ್ರೆ ತೆಗೆದುಕೊಳ್ಳುವುದು. ಜ್ವರ ಬಂದ ತಕ್ಷಣ ಮಾತ್ರೆ ತೆಗೆದುಕೊಳ್ಳಬಾರದು. ಇದು ನಿಮಗೆ ಬಹುಬೇಗ ಜ್ವರದಿಂದ ಮುಕ್ತಿ ಕೊಡಬಹುದು. ಆದರೆ ಜ್ವರ ಬಂದಾಗ, ಎರಡು ದಿನ ದ್ರವಾಹಾರ ತೆಗೆದುಕೊಳ್ಳುವುದು ಮತ್ತು ಸರಿಯಾಗಿ ರೆಸ್ಟ್ ಮಾಡುವುದೇ, ಇದಕ್ಕೆ ಸರಿಯಾದ ಪರಿಹಾರ..

- Advertisement -

Latest Posts

Don't Miss