ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 2

ಯಾವ ಕಾರಣಕ್ಕೆ ಕಾನ್ಫಿಡೆನ್ಸ್ ಕಡಿಮೆಯಾಗುತ್ತದೆ ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ ನಾವು 3 ವಿಷಯಗಳ ಬಗ್ಗೆ ಮೊದಲ ಭಾಗದಲ್ಲಿ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಉಳಿದ 4 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗುವುದು ಈ ಕಾರಣದಿಂದಲೇ..- ಭಾಗ 1

ನಾಲ್ಕನೇಯದಾಗಿ ನೀಟ್ ಆಗಿರುವುದು. ನಿಮ್ಮ ಕಾನ್ಫಿಡೆನ್ಸ್ ಲೇವಲ್ ಉತ್ತಮವಾಗಿರಬೇಕು ಅಂದ್ರೆ ನೀವು ಚೆಂದಗಾಣಿಸಬೇಕು. ನೀಟ್ ಆಗಿರಬೇಕು. ಹಲವು ಸಂಶೋಧನೆ ಮಾಡಿದ ಬಳಿಕ, ಬೆಳಕಿಗೆ ಬಂದ ವಿಷಯವೇನಂದ್ರೆ, ನೀಟ್ ಆಗಿ ಡ್ರೆಸ್ ಮಾಡಿಕೊಳ್ಳುವವರಿಗೆ ಇರುವ ಕಾನ್ಫಿಡೆನ್ಸ್, ಕೆಟ್ಟದಾಗಿ ಡ್ರೆಸ್ ಮಾಡಿಕೊಳ್ಳುವವರಿಗೆ ಇರುವುದಿಲ್ಲವಂತೆ. ಹಾಗಾಗಿ ನಾವು ಹಾಕುವ ಸ್ವಚ್ಛವಾದ, ಉತ್ತಮವಾದ ಬಟ್ಟೆ, ನಾವು ಇರುವ ರೀತಿ ಕೂಡ ನಮ್ಮ ಕಾನ್ಫಿಡೆನ್ಸ್ ಲೆವಲ್ ಹೆಚ್ಚಿಸಬಲ್ಲದು.

ನಿಮ್ಮ ಸ್ಕಿನ್ ಗ್ಲೋ ಆಗಲು ಜೇನುತುಪ್ಪವನ್ನು ಈ ರೀತಿಯಾಗಿ ಬಳಸಿ..

ಐದನೇಯದಾಗಿ ಚಿಕ್ಕ ಚಿಕ್ಕ ವಿಷಯಕ್ಕೆ ಹದರುವುದು. ಇದನ್ನು ಸ್ಪಾಟ್ ಲೈಟ್ ಎಫೆಕ್ಟ್ ಎಂದು ಕರೆಯುತ್ತಾರೆ. ಉದಾಹರಣೆಗೆ ನಿಮ್ಮ ಮುಖದ ಮೇಲೆ ಒಂದು ಮೊಡವೆಯಾಗಿರುತ್ತದೆ. ಅದರಿಂದ ನೀವು ತುಂಬಾ ಟೆನ್ಶನ್ ಆಗಿರುತ್ತೀರಾ. ನನ್ನನ್ನೇ ಎಲ್ಲರೂ ನೋಡುತ್ತಿದ್ದಾರೆ. ಆ ಮೊಡವೆಯಿಂದ ನಾನು ಕೆಟ್ಟದಾಗಿ ಕಾಣುತ್ತಿರಬಹುದಾ..? ಇತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಓಡುತ್ತಿರುತ್ತದೆ. ಆದ್ರೆ ನಿಮ್ಮ ಮೊಡವೆ ಬಗ್ಗೆ ಯಾರೂ ಏನೂ ತಿಳಿದುಕೊಂಡಿರೋದಿಲ್ಲ. ಹಾಗಾಗಿ ಚಿಕ್ಕ ಚಿಕ್ಕ ವಿಷಯಕ್ಕೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟುಬಿಡಿ.

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

ಆರನೇಯದಾಗಿ ಯಾವುದೇ ಕೆಲಸಕ್ಕೂ ಹೋಗುವ ಮುನ್ನ ಪ್ಲಾನ್ ಮಾಡದೇ ಇರುವುದು. ಉದಾಹರಣೆಗೆ ನೀವು ಡಿನ್ನರ್‌ಗಾಗಿ ಹೊರಗಡೆ ಹೋಗಬೇಕು ಅಂದುಕೊಂಡಿರುತ್ತೀರಿ. ಅಥವಾ ಕೆಲಸಕ್ಕೆ ಇಂಟರ್‌ವ್ಯೂಗೆ ಹೋಗಬೇಕು. ಆದ್ರೆ ನೀವು ಮೊದಲೇ ಇದಕ್ಕೆ ಬೇಕಾದ ಪ್ಲಾನ್‌ಗಳನ್ನು ಮಾಡಿಕೊಳ್ಳಬೇಕು. ಡಿನ್ನರ್‌ಗೆ ಹೋಗುವಾಗ, ಡ್ರೆಸ್ಸಿಂಗ್ ಮಾಡಿಕೊಳ್ಳುವ ಬಗ್ಗೆ ಯೋಚಿಸಿರಬೇಕು. ಇಂಟರ್‌ವ್ಯೂಗೆ ಹೋಗುವಾಗ, ಅಲ್ಲಿ ಕೇಳು ಪ್ರಶ್ನೆಗಳಿಗೆ ಉತ್ತರಿಸುವ ಪ್ಲಾನಿಂಗ್ ಮಾಡಿರಬೇಕು. ನೀವು ಪ್ಲಾನ್‌ ಮಾಡದೇ ಹೋದಲ್ಲಿ, ಆ ಕೆಲಸ ಸಪ್ಪೆಯಾಗಿರುತ್ತದೆ. ಆವಾಗಲೇ ನಿಮ್ಮ ಕಾನ್ಫಿಡೆನ್ಸ್ ಕಡಿಮೆಯಾಗೋದು.

ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..

ಏಳನೇಯದಾಗಿ ನಾಯಕತ್ವದ ಗುಣವನ್ನು ಹೊಂದದೇ ಇರುವುದು. ಅಧಿಕಾರ ವಹಿಸಿಕೊಳ್ಳಲು ಮುಂದೆ ಬರದಿರುವುದು. ನಮಗೆ ಯಾವುದಾದರೂ ಅಧಿಕಾರ ಕೊಟ್ಟಾಗ, ನಾವು ಅದನ್ನು ವಹಿಸಿಕೊಳ್ಳಲು ಹಿಂದೇಟು ಹಾಕಿದರೆ, ನಮ್ಮ ಕಾನ್ಫಿಡೆನ್ಸ್ ಲೆವಲ್ ಕಡಿಮೆ ಎಂದರ್ಥ. ಯಾಕಂದ್ರೆ ಅಧಿಕಾರ ವಹಿಸಿಕೊಂಡ್ರೆ, ಅದನ್ನು ನಿಭಾಯಿಸುವ ಒತ್ತಡ ಹೆಚ್ಚುತ್ತದೆ. ಆದ್ರೆ ನಾವು ಅದರಿದಂ ಹಿಂದೆ ಸರಿದ್ರೆ, ನಾವಾಯ್ತು, ನಮ್ಮ ಕೆಲಸವಾಯ್ತು ಎಂದು ಆರಾಮವಾಗಿರಬಹುದು ಅನ್ನೋ ಯೋಚನೆ ಇರುತ್ತದೆ. ಹೀಗೆ ನಾವು ಯಾಶಸ್ವಿಯಾಗಲು ಬಯಸದೇ, ನಮ್ಮ ಕಂಫರ್‌ಟ್ ಲೇವಲ್‌ನಲ್ಲಿದ್ದಾಗಲೇ, ಕಾನ್ಫಿಡೆನ್ಸ್ ಕಡಿಮೆಯಾಗೋದು.

About The Author