Monday, December 23, 2024

Latest Posts

ನಾಲ್ವರು ಸಾಧುಗಳ ಮೇಲೆ ಹಲ್ಲೆ.. ಕಾರಣವೇನು ಗೊತ್ತಾ..?

- Advertisement -

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಲ್ವರು ಸಾಧುಗಳ ಮೇಲೆ ಹಲ್ಲೆ ಮಾಡಲಾಗಿದೆ. ಗ್ರಾಮಕ್ಕೆ ಬಂದ ಸಾಧುಗಳನ್ನು ಮಕ್ಕಳು ಕಳ್ಳರೆಂದು ತಿಳಿದು, ಚೆನ್ನಾಗಿ ಥಳಿಸಿದ್ದಾರೆ. ಇಲ್ಲಿನ ಲವಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ಆದ್ರೆ ಸ್ಥಳೀಯ ಪೊಲೀಸರು, ನಮಗೆ ಯಾವುದೇ ದೂರು ಬರದಿದ್ದರೂ ಕೂಡ, ನಾವು ವೈರಲ್ ಆಗಿರುವ ವೀಡಿಯೋವನ್ನು ಪರಿಶೀಲಿಸಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆಂದು, ಸ್ಥಳೀಯ ಪೊಲೀಸ್ ಅಧಿಕಾರಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ. ಇನ್ನು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್, ಸಾಧು ಸಂತರಿಗೆ ಹೊಡೆದಿರುವುದು, ಶಿಕ್ಷಾರ್ಹ ಅಪರಾಧ, ಇದನ್ನು ನಾನು ಖಂಡಿಸುತ್ತೇನೆ. ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಹೇಳಿದ್ದಾರೆ.

- Advertisement -

Latest Posts

Don't Miss