Friday, October 17, 2025

Latest Posts

ನೀರು ಕುಡಿಯುವಾಗ ಈ 4 ತಪ್ಪುಗಳನ್ನು ಮಾಡಬೇಡಿ..

- Advertisement -

ನೀರು ಕುಡಿಯುವುದರಿಂದ ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀವು ಕುಡಿಯುವ ನೀರು ಸ್ವಚ್ಛವಾಗಿರಬೇಕು. ಇದರ ಜೊತೆಗೆ ನೀರು ಕುಡಿಯಲು ಇನ್ನೂ ಹೆಚ್ಚು ನಿಯಮಗಳಿದೆ. ಆ ನಿಯಮಗಳನ್ನು ತಕಿಳಿದುಕೊಳ್ಳುವುದರ ಜೊತೆಗೆ, ನಾವು ನೀರು ಕುಡಿಯುವಾಗ ಮಾಡಬಾರದ 4 ತಪ್ಪುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನೀರು ಕುಡಿಯುವಾಗ ಅನುಸರಿಸಬೇಕಾದ ನಿಯಮಗಳೆಂದರೆ, ನಿಮಗೆ ಎಷ್ಟು ನೀರು ಕುಡಿಯುವ ಕೆಪೆಸಿಟಿ ಉಂಟೋ ಅಷ್ಟೇ ನೀರು ಕುಡಿಯಿರಿ. ಯಾರೋ ಹೇಳಿದ್ರು ಎಂದು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯಬೇಡಿ. ಯಾಕಂದ್ರೆ ಎಲ್ಲರಿಗೂ ನೀರನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ.

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

ಅದರಲ್ಲೂ ವಯಸ್ಸಾದವರಿಗೆ ಹೆಚ್ಚು ನೀರು ಕುಡಿದು ಜೀರ್ಣಿಸಿಕೊಳ್ಳುವಷ್ಟು ಶಕ್ತಿ ಇರುವುದಿಲ್ಲ. ಹಾಗೆ ನೀರು ಕುಡಿದಾಗ, ನಿಮ್ಮ ಹೊಟ್ಟೆ ದೊಡ್ಡದಾಗಿ, ನಿಮಗೆ ಉಸಿರಾಡಲು ಕಷ್ಟವಾಗಬಹುದು. ಹಾಗಾಗಿ ನಿಮ್ಮ ದೇಹಕ್ಕೆ ಅಗತ್ಯವಿದ್ದಷ್ಟು, ನಿಮ್ಮ ದೇಹ ಜೀರ್ಣಿಸಿಕೊಳ್ಳುವಷ್ಟು ನೀರು ನೀವು ಕುಡಿಯಬಹುದು.

ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ ಕುದಿಸಿ, ಆರಿಸಿದ ನೀರನ್ನು ಕುಡಿಯುವುದು ತುಂಬಾ ಉತ್ತಮ. ಯಾಕಂದ್ರೆ ನೀವು ತಣ್ಣಗಿನ ನೀರು ಕುಡಿದರೆ, ನಿಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಕಡಿಮೆಯಾಗಬಹುದು. ಹಾಗಾಗಿ ಆದಷ್ಟು ಕುದಿಸಿ, ತಣಿಸಿದ ನೀರನ್ನೇ ಕುಡಿಯಿರಿ.

ನಿಮ್ಮ ಸ್ಕಿನ್ ಗ್ಲೋ ಆಗಲು ಜೇನುತುಪ್ಪವನ್ನು ಈ ರೀತಿಯಾಗಿ ಬಳಸಿ..

ಇನ್ನು ನಾವು ನೀರು ಕುಡಿಯುವಾಗ ಮಾಡಬಾರದ 4 ತಪ್ಪುಗಳಲ್ಲಿ, ಮೊದಲನೇಯ ತಪ್ಪಂದ್ರೆ, ನೀವು ನೀರು ಕುಡಿಯುವಾಗ, ಆ ನೀರು ಹೆಚ್ಚು ಬಿಸಿ ಬಿಸಿಯಾಗಿ ಇರಬಾರದು. ಮತ್ತು ಫ್ರಿಜ್ ನೀರು ಸಹ ಆಗಿರಬಾರದು. ಅದು ರೂಮ್ ಟೆಂಪರೇಚರ್‌ನಲ್ಲಿ ಇರಬೇಕು. ಯಾಕಂದ್ರೆ ಹೆಚ್ಚು ಬಿಸಿ ನೀರು ಮತ್ತು ಹೆಚ್ಚು ತಣ್ಣಗಿನ ನೀರು ಕುಡಿಯುವುದು, ಎರಡೂ ಕೂಡ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಹಾಗಾಗಿ ಉಗುರು ಬೆಚ್ಚಗಿನ ನೀರು ಕುಡಿಯಿರಿ.

ಮುಖ್ಯವಾದ ವಿಷಯ ಅಂದ್ರೆ ನಿಮಗೆ ತಣ್ಣನೆಯ ನೀರೇ ಕುಡಿಯಬೇಕು ಅಂದ್ರೆ, ಮಣ್ಣಿನ ಮಡಿಕೆಗೆ ಉಗುರು ಬೆಚ್ಚಗಿನ ನೀರು ಹಾಕಿ, ಕೆಲವು ಗಂಟೆಗಳ ಬಳಿಕ ಕುಡಿಯಿರಿ. ಮತ್ತು ಯಾವುದೇ ಕಾರಣಕ್ಕೂ ನೀರು ಕುಡಿಯುವಾಗ ಪ್ಲಾಸ್ಟಿಕ್ ಬಾಟಲಿಯನ್ನು ಬಳಸಬೇಡಿ. ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರನ್ನು ಹೆಚ್ಚು ಕುಡಿಯಬೇಡಿ.

ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು ಹೀಗೆ ನೋಡಿ..

ಎರಡನೇಯ ತಪ್ಪು ಅಂದ್ರೆ, ನೀರನ್ನು ಕುಡಿಯಬೇಡಿ. ಬದಲಾಗಿ ನೀರನ್ನು ತಿನ್ನಿ. ಹೌದು ಇದು ಕೇಳೋಕ್ಕೆ ವಿಚಿತ್ರವಾದ್ರೂ ಸತ್ಯ. ಮೊದಲು ನೀರನ್ನು ಬಾಯಿಗೆ ಹಾಕಿ, ಬಾಯಿ ಮುಕ್ಕಳಿಸಬೇಕು. ನಂತರ ಆರಾಮವಾಗಿ ನೀರು ಕುಡಿಯಬೇಕು. ಅದನ್ನು ಬಿಟ್ಟು, ಗಟ ಗಟ ಎಂದು ನೀರು ಕುಡಿಯಬೇಡಿ. ಇದರಿಂದ ನೀರು ಕುಡಿದು ಪ್ರಯೋಜನವಾಗುವುದಿಲ್ಲ.

ಮೂರನೇಯ ತಪ್ಪು, ಊಟಕ್ಕೂ ಅರ್ಧ ಗಂಟೆ ಮೊದಲು ಮತ್ತು ಊಟವಾದ ಒಂದು ಗಂಟೆ ಬಳಿಕ ನೀರು ಕುಡಿಯಿರಿ. ಅದನ್ನು ಬಿಟ್ಟು ಊಟ ಮಾಡುವಾಗ ಮಧ್ಯೆ ಮಧ್ಯೆ ನೀರು ಕುಡಿಯಬೇಡಿ. ಮತ್ತು ಊಟವಾದ ತಕ್ಷಣ ನೀರು ಕುಡಿಯಬೇಡಿ. ಹೀಗೆ ಮಾಡಿದರೆ, ಉತ್ತಮವಾದ ಊಟ ಮಾಡಿಯೂ ಪ್ರಯೋಜನವಾಗುವುದಿಲ್ಲ. ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಊಟದ ಅರ್ಧ ಗಂಟೆ ಮೊದಲು ಮತ್ತು ಊಟವಾದ ಒಂದು ಗಂಟೆ ನಂತರ ನೀರು ಕುಡಿಯಿರಿ.

ಕೇವಲ 3 ವಸ್ತುವನ್ನು ಬಳಸಿ, ಈ ಎಫೆಕ್ಟಿವ್ ಹೇರ್ ಆಯ್ಲ್ ತಯಾರಿಸಿ..

ನಾಲ್ಕನೇಯ ತಪ್ಪು, ನಿಂತು ನೀರು ಕುಡಿಯಬೇಡಿ. ಬದಲಾಗಿ ಕುಳಿತು ಆರಾಮವಾಗಿ ನೀರು ಕುಡಿಯಿರಿ. ನೀವು ನಿಂತು, ಮಲಗಿದ ರೀತಿ ಒರಗಿ ಕುಳಿತು, ಅಥವಾ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೇ, ನೀರು ಕುಡಿದರೆ, ಹಾಗೆ ನೀರು ಕುಡಿದು ಪ್ರಯೋಜನವಾಗುವುದಿಲ್ಲ. ಹಾಗಾಗಿ ಸರಿಯಾದ ರೀತಿಯಲ್ಲಿ, ನೇರವಾಗಿ ಕುಳಿತು, ಆರಾಮವಾಗಿ ನೀರು ಕುಡಿಯಿರಿ.

ಇದರಿಂದ ನಮ್ಮ ದೇಹಕ್ಕೆ ಸರಿಯಾದ ರೀತಿನಲ್ಲಿ, ನೀರು ತಲುಪಿ, ಅದರಿಂದ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. ಮತ್ತು ನಿಂತು ನೀರು ಕುಡಿದರೆ, ಅದು ದೇಹದಲ್ಲಿ ಪಸರಿಸದೇ, ನೇರವಾಗಿ, ಮೂತ್ರದ ಮೂಲಕ ಹೊರಟು ಹೋಗುತ್ತದೆ. ಮತ್ತು ಇದರಿಂದೇನೂ ಪ್ರಯೋಜನವಿಲ್ಲ.

- Advertisement -

Latest Posts

Don't Miss