ಹೆಣ್ಣು ಪಡುವಷ್ಟು ದೈಹಿಕ ಕಷ್ಟ ಗಂಡು ಪಡುವುದಿಲ್ಲ. ಗಂಡಸರಿಗೆ ಹಲವು ಮಾನಸಿಕ ಕಷ್ಟಗಳಿರುತ್ತದೆ. ಆದ್ರೆ ಗಂಡಿಗಿಂತ ಹೆಣ್ಣು ಹೆಚ್ಚು ದೈಹಿಕ ಕಷ್ಟ ಅನುಭವಿಸುತ್ತಾಳೆ. ಋತುಮತಿಯಾದಾಗ ಒಂದು ರೀತಿಯ ಕಷ್ಟ, ಗರ್ಭಾವಸ್ಥೆಯಲ್ಲಿ ಇನ್ನೊಂದು ರೀತಿಯ ಕಷ್ಟ, ಹೆರಿಗೆ ಸಮಯದಲ್ಲಿ ಒಂದು ಜನ್ಮ ಕಳೆದು ಬಂದ ಅನುಭವ. ಬಾಣಂತನದಲ್ಲೂ ಮಾನಸಿಕ ಹಿಂಸೆ, ಮತ್ತೆ ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ, ಕಷ್ಟ. ಹೀಗೆ ಹೆಣ್ಣು ದೈಹಿಕವಾಗಿ ಕಷ್ಟ ಅನುಭವಿಸುತ್ತಾಳೆ. ಈ ಬಗ್ಗೆ ಗರುಡ ಪುರಾಣದಲ್ಲಿ ಹೇಳಲಾಗಿದೆ. ಹಾಗಾಗಿ ನಾವಿಂದು ಹೆಣ್ಣು ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ ಹೆಚ್ಚು ಕಷ್ಟ ಪಡುವುದೇಕೆ ಅನ್ನೊ ಬಗ್ಗೆ ವಿವರಿಸಲಿದ್ದೇವೆ.
ಗರ್ಭಾವಸ್ಥೆಯಲ್ಲಿರುವಾಗ, ಹೆಣ್ಣಿಗೆ ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಆಕೆ ತನ್ನ ಮಗುವಿನ ಆರೈಕೆಯಲ್ಲಿ ತೊಡಗಿರುವುದರಿಂದ, ಅದಕ್ಕೇನು ತೊಂದರೆಯಾಗದಿರಲೆಂದು ಬೇಡಿಕೊಳ್ಳುತ್ತಾಳೆ. ಹಾಗಾಗಿ ಉತ್ತಮ ಆಹಾರ ಸೇವನೆ ಮಾಡುತ್ತಾಳೆ. ಹಾಗಾಗಿ ಗರ್ಭದಲ್ಲಿರುವ ಮಗುವಿಗೆ ಮೊದಲು ಮೆದುಳಿನ ಬೆಳವಣಿಗೆಯಾಗುತ್ತದೆ. ನಂತರ ಹೃದಯ, ನಂತರ ಕೈ ಕಾಲು, ಹೀಗೆ 4 ತಿಂಗಳು ತುಂಬುವ ಹೊತ್ತಿಗೆ ಮಗುವಿನ ಅಂಗಾಗ ಸರಿಯಾಗಿ ಬೆಳೆದಿರುತ್ತದೆ.
ಆದ್ರೆ ಮಗುವಿಗೆ ಕಳೆದ ಜನ್ಮದ ಪಾಪ ಕರ್ಮಗಳೆಲ್ಲಾ ನೆನಪಿಗೆ ಬರುತ್ತದೆಯಂತೆ. ಇದೇ ವೇಳೆ ಹೊಟ್ಟೆಯಲ್ಲಿ ಇತರೇ ಕ್ರೀಮಿ ಕೀಟಗಳು, ಮಲ ಮೂತ್ರಗಳೊಂದಿಗೆ ಆ ಮಗು ಇರಬೇಕಾಗುತ್ತದೆ. ಆಗ ಆ ಮಗು ದೇವರಲ್ಲಿ ಬೇಗ ಇದರಿಂದ ಮುಕ್ತಿ ಕೊಡಿಸೆಂದು ಬೇಡುತ್ತದೆ. ಆದ್ರೆ ಅದಕ್ಕೆ ಕಳೆದ ಜನ್ಮದ ಪಾಪ ಕರ್ಮಗಳು ನೆನಪಿನಲ್ಲಿರುವ ಕಾರಣ, ಅದಕ್ಕೆ ಮುಂದಿನ ಜನ್ಮದಲ್ಲಿ ತಾನು ಮನುಷ್ಯನಾಗಿ ಹುಟ್ಟುವುದು ಬೇಡವೆಂದು ಬೇಡುತ್ತದೆಯಂತೆ.
ಹಾಗಾಗಿ ಮಗು ಹುಟ್ಟುವ ಮುನ್ನ, ದೇಹದಲ್ಲಿರುವ ಒಂದು ಅಂಶ ನಾಶವಾಗಿ, ಅದರ ಕಳೆದ ಜನ್ಮದ ನೆನಪೆಲ್ಲ ಮಾಸಿ ಹೋಗಿ, ಅದು ಜನ್ಮ ಪಡೆಯುತ್ತದೆ. ಹೀಗೆ ಹೊಟ್ಟೆಯಲ್ಲಿ ಕಳೆದ ಜನ್ಮದ ನೆನಪು, ಮಲ ಮೂತ್ರಗಳೊಂದಿಗೆ, ಕ್ರೀಮಿಯೊಂದಿಗೆ ಕೆಲ ಕಳೆಯುವ ವೇಳೆ, ತಾಯಿಯಾದವಳಿಗೆ ದೈಹಿಕವಾಗಿ ತೊಂದರೆಯಾಗುತ್ತದೆ ಅಂತಾ ಹೇಳಲಾಗುತ್ತದೆ.




