Friday, September 20, 2024

Latest Posts

ಹಳದಿಗಟ್ಟಿದ ಹಲ್ಲನ್ನು ಸ್ವಚ್ಛಗೊಳಿಸಲು ಈ ರೆಮಿಡಿ ಬಳಸಿ..

- Advertisement -

ಸೌಂದರ್ಯದ ಬಗ್ಗೆ ಎಲ್ಲರೂ ಗಮನ ಕೊಡ್ತಾರೆ. ಇಂದಿನ ಪೀಳಿಗೆಯವರು ಕೊಂಚ ಹೆಚ್ಚೇ ಗಮನ ಕೊಡ್ತಾರೆ. ಆದ್ರೆ ನೀವು ನಿಮ್ಮ ತ್ವಚೆ, ಮುಖ, ಕೂದಲಿನ ಸೌಂದರ್ಯದ ಬಗ್ಗೆ ಅಷ್ಟೇ ಗಮನ ಹರಿಸಿದ್ರೂ ಸಾಲದು. ಹಲ್ಲಿನ ಬಗ್ಗೆಯೂ ಗಮನ ಹರಿಸಿ. ಯಾಕಂದ್ರೆ ನೀವು ನಗುವಾಗ, ನಿಮ್ಮ ಹಲ್ಲು ಕಾಣುವ ಕಾರಣ, ಅದರ ಆರೋಗ್ಯವನ್ನೂ ನಾವು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಇಂದು ಹಳದಿಯಾದ ಹಲ್ಲಿಗೆ ಏನನ್ನು ಬಳಸಿ, ಬಿಳಿ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸೌತೇಕಾಯಿ ಬಳಸಿ ನೀವು ಈ 4 ಫೇಸ್‌ಮಾಸ್ಕ್ ತಯಾರಿಸಬಹುದು..

ಮೊದಲ ರೆಮಿಡಿ, ಸ್ಟ್ರಾಬೇರಿ ಬಳಸುವುದು. ಸ್ಟ್ರಾಬೇರಿಯಿಂದ ನಿಮ್ಮ ಹಲ್ಲಿಗೆ 3 ನಿಮಿಷ ಮಸಾಜ್ ಮಾಡಿ, 5 ನಿಮಿಷ ಹಾಗೆ ಬಿಡಿ. ನಂತರ ಬೆರಳಿಂದ ಹಲ್ಲುಜ್ಜಿ. ಹೀಗೆ ಮಾಡುವುದರಿಂದ ನಿಮ್ಮ ಹಲ್ಲಿನ ಮೇಲಿರುವ ಹಳದಿ ಕಲೆ ಮಾಯವಾಗುತ್ತದೆ.

ಎರಡನೇಯ ರೆಮಿಡಿ, ಸೇಬು ಸೇವನೆ. ಇತ್ತಿಚೆಗೆ ಆ್ಯಪಲ್ ಮೇಲೆ ವ್ಯಾಕ್ಸ್ ಹಚ್ಚಲಾಗತ್ತೆ ಎಂದು ಹೆಚ್ಚಿನವರು ಆ್ಯಪಲ್ ತಿನ್ನಲ್ಲಾ. ಆದ್ರೆ ನೀವು ಆ್ಯಪಲನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. ಇದರಿಂದ ನಿಮ್ಮ ಹಲ್ಲು ಬಿಳಿಯಾಗಿರುತ್ತದೆ. ಮತ್ತು ನಿಮ್ಮ ಅಂದ ಕೂಡ ಹೆಚ್ಚುತ್ತದೆ.

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಮೂರನೇ ರೆಮಿಡಿ, ಆರೇಂಜ್ ಬಳಕೆ. ಆರೇಂಜ್ ಸಿಪ್ಪೆಯಿಂದ ನೀವು ಹಲ್ಲುಜ್ಜಿ. 5 ನಿಮಿಷ ಬಿಟ್ಟು ಬಾಯಿ ತೊಳೆಯಿರಿ. ಹೀಗೆ ಮಾಡುವುದರಿಂದ ಹಲ್ಲು ಬಿಳಿಯಾಗುತ್ತದೆ.

ನಾಲ್ಕನೇ ಟಿಪ್ಸ್, ಉಪ್ಪು ನೀರಿನ ಬಳಕೆ. ಪ್ರತಿದಿನ ನೀವು ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಚಿಟಿಕೆ ಉಪ್ಪು ಹಾಕಿ. ಅದರಿಂದ 10 ಬಾರಿ ಬಾಯಿ ಮುಕ್ಕಳಿಸಿ. ಹೀಗೆ ಮಾಡುವುದರಿಂದ ಹಲ್ಲಿನ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಬಾಯಿ ವಾಸನೆ ಹೋಗುತ್ತದೆ. ನೀವು ನಿಂಬೆಹಣ್ಣಿಗೆ ಉಪ್ಪು ಹಚ್ಚಿ,ಅದರಿಂದಲೂ ಹಲ್ಲುಜ್ಜಬಹುದು.

ಐದನೇ ಟಿಪ್ಸ್, ತೆಂಗಿನ ಎಣ್ಣೆಯ ಬಳಕೆ. ನೀವು 3 ಸ್ಪೂನ್ ತೆಂಗಿನ ಎಣ್ಣೆ ತೆಗೆದುಕೊಂಡು, ಅದನ್ನು ಬಾಯಲ್ಲಿ ಹಾಕಿ, ಬಾಯಿ ಮುಕ್ಕಳಿಸಬೇಕು. ಅಂದ್ರೆ ಆಯ್ಲ ಪುಲ್ಲಿಂಗ್. ಹೀಗೆ 5 ನಿಮಿಷ ಕಂಟಿನ್ಯೂ ನೀವು ಬಾಯಲ್ಲೇ ತೆಂಗಿನ ಎಣ್ಣೆಯನ್ನ ಅಲ್ಲಾಡಿಸುತ್ತಿದ್ದರೆ, ನಿಮ್ಮ ಹಲ್ಲು ಬಿಳಿಯಾಗಿರುತ್ತದೆ. ಆದ್ರೆ ಅಪ್ಪಿ ತಪ್ಪಿಯೂ ಎಣ್ಣೆಯನ್ನ ಕುಡಿದುಬಿಡಬೇಡಿ. ಹಾಗೆ ಮಾಡಿದ್ದಲ್ಲಿ ಕೆಮ್ಮು ಶುರುವಾಗುತ್ತದೆ.

- Advertisement -

Latest Posts

Don't Miss