Friday, September 20, 2024

Latest Posts

ಆ್ಯಲೋವೆರಾವನ್ನು ಹೀಗೆ ಬಳಸಿ ನೋಡಿ, ರಿಸಲ್ಟ್ ಸೂಪರ್ ಆಗಿರತ್ತೆ..

- Advertisement -

ಆ್ಯಲೋವೆರಾ ಬಗ್ಗೆ ನಾವು ಈಗಾಗಲೇ ಹಲವು ಟಿಪ್ಸ್ ನೀಡಿದ್ದೇವೆ. ಇಂದು ಕೂಡ ಆ್ಯಲೋವೆರಾವನ್ನು ನಾವು ಯಾವ ರೀತಿ ಬಳಸಿ, ಅದರ ಲಾಭವನ್ನು ಪಡೆಯಬಹುದು ಅಂತಾ ತಿಳಿಯೋಣ.

ಹಳದಿಗಟ್ಟಿದ ಹಲ್ಲನ್ನು ಸ್ವಚ್ಛಗೊಳಿಸಲು ಈ ರೆಮಿಡಿ ಬಳಸಿ..

  1. ನೀವು ಪ್ರತಿದಿನ ಆ್ಯಲೋವೆರಾ ಜ್ಯೂಸ್ ಕುಡಿದರೆ, ನಿಮ್ಮ ತ್ವಚೆಯ ಆರೋಗ್ಯ, ಕೂದಲಿನ ಆರೋಗ್ಯ, ಮತ್ತು ನಿಮ್ಮ ದೇಹದ ಆರೋಗ್ಯ ಎಲ್ಲವೂ ಉತ್ತಮವಾಗಿರುತ್ತದೆ. ನಿಮ್ಮ ದೇಹ ತಂಪಾಗಿರುತ್ತದೆ. ಆಧ್ರೆ ಗರ್ಭಿಣಿಯರು, ಮತ್ತು ಅಲರ್ಜಿ ಇರುವವರು ಸೇವಿಸಬೇಡಿ. ಆ್ಯಲೋವೆರಾ ಜ್ಯೂಸ್ ಸೇವಿಸುವುದಿದ್ದರೂ, ಲಿಮಿಟ್‌ನಲ್ಲಿ ಸೇವಿಸಿ.
  2. ಆ್ಯಲೋವೆರಾವನ್ನ ಮೇಕಪ್ ರಿಮೂವರ್ ರೀತಿ ಬಳಸಬಹುದು. ನೀವು ಮಾರುಕಟ್ಟೆಯಲ್ಲಿ ಸಿಗುವ ಮೇಕಪ್ ರಿಮೂವರ್‌ ಬಳಸಿದರೆ, ಅದರಲ್ಲಿರುವ ಆಲ್ಕೋಹಾಲ್ ನಿಮ್ಮ ತ್ವಚೆಯನ್ನು ಡ್ರೈ ಮಾಡುತ್ತದೆ. ಹಾಗಾಗಿ ಒಂದು ಸ್ಪೂನ್ ಆ್ಯಲೋವೆರಾ ಜೆಲ್ ಮತ್ತು ಒಂದು ಸ್ಪೂನ್ ಆಲಿವ್ ಎಣ್ಣೆಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಮೇಕಪ್ ರಿಮೂವರ್ ರೀತಿ ಬಳಸಿ.

ಸೌತೇಕಾಯಿ ಬಳಸಿ ನೀವು ಈ 4 ಫೇಸ್‌ಮಾಸ್ಕ್ ತಯಾರಿಸಬಹುದು..

3.ನಿಮ್ಮ ಮುಖ ಆಯ್ಲಿಯಾಗಿದ್ದಲ್ಲಿ, ಪ್ರತಿದಿನ ಒಂದು ಚಿಕ್ಕ ತುಂಡು ಆ್ಯಲೋವೆರಾವನ್ನು ನಿಮ್ಮ ಮುಖಕ್ಕೆ ಮಸಾಜ್ ಮಾಡಿ, ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ. ಇದರಿಂದ ನೀವು ನಿಮ್ಮ ಮುಖದಲ್ಲಾಗುವ ಬದಲಾವಣೆಯನ್ನ ಕೇವಲ ಒಂದೇ ವಾರದಲ್ಲಿ ಕಂಡುಕೊಳ್ಳುವಿರಿ. ಮೊಡವೆ ಕಲೆ, ಮೊಡವೆ ಎಲ್ಲ ಹೋಗಿ, ನಿಮ್ಮ ಮುಖ ಕ್ಲೀನ್ ಆಗಿರುತ್ತದೆ.

4. ಗರ್ಭಿಣಿಯಾಗಿದ್ದಾಗ, ನಿಮ್ಮ ಹೊಟ್ಟೆ ದೊಡ್ಡದಾಗಿ, ಮಗು ಹುಟ್ಟಿದ ಮೇಲೆ ಅದು ನಾರ್ಮಲ್ ಆಗುತ್ತದೆ. ಈ ವೇಳೆ ಸ್ಟ್ರೇಚ್ ಮಾರ್ಕ್ ಬೀಳುತ್ತದೆ. ಈ ಸ್ಟ್ರೆಚ್‌ ಮಾರ್ಕ್ ಹೋಗಬೇಕಂದ್ರೆ, ನೀವು ಪ್ರೆಗ್ನೆಂಟ್ ಇರುವಾಗಲೇ ಪ್ರತಿದಿನ ಆ್ಯಲೋವೆರಾ ಜೆಲ್‌ನಿಂದ ನಿಮ್ಮ ಹೊಟ್ಟೆಗೆ ಮಸಾಜ್ ಮಾಡುತ್ತಲಿರಬೇಕು. ನಿಮ್ಮ ಮಗು ಹುಟ್ಟಿ 6 ತಿಂಗಳಾಗುವವರೆಗೂ ಸರಿಯಾಗಿ ಮಸಾಜ್ ಮಾಡಿದ್ದಲ್ಲಿ, ನೀವೋರ್ವ ತಾಯಿ ಅನ್ನೋ ಸುಳಿವು ಯಾರಿಗೂ ಸಿಗುವುದಿಲ್ಲ. ಅಷ್ಟು ಕ್ಲೀನ್ ಆಗತ್ತೆ ನಿಮ್ಮ ಸ್ಟ್ರೇಚ್ ಮಾರ್ಕ್.

5. 2 ಸ್ಪೂನ್ ಆ್ಯಲೋವೆರಾ ಜೆಲ್ ಮತ್ತು 2 ಸ್ಪೂನ್ ನಿಂಬೆರಸ ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈಗ ಈ ಫೇಸ್‌ಮಾಸ್ಕ್ನ್ನ ಮುಖಕ್ಕೆ ಅಪ್ಲೈ ಮಾಡಿ. ಇದರಿಂದ ನಿಮ್ಮ ಸೌಂದರ್ಯ ದುಪ್ಪಟ್ಟಾಗುತ್ತದೆ. ಇನ್ನು ನಿಮಗೆ ಆ್ಯಲೋವೆರಾ ಬಳಸಿದ್ರೆ ಅಲರ್ಜಿ ಎಂದಾದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.

- Advertisement -

Latest Posts

Don't Miss