Friday, December 27, 2024

Latest Posts

ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?

- Advertisement -

ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಲಾಗುತ್ತದೆ. ಹಾಗಾಗಿ ಆಕೆಯನ್ನು ಗೋಮಾತೆ ಎಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಹಬ್ಬ ಹರಿದಿನಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಆಕೆಗೆ ನಮ್ಮ ಎಂಜಿಲನ್ನು ಕೊಡುವುದು ತಪ್ಪು ಅಂತಾ ಹೇಳಲಾಗುತ್ತದೆ. ಮತ್ತು ಯಾರು ತಾವು ಸಾಕಿದ ಗೋವನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲವೋ, ಮುಂದೆ ಅವರ ಮಕ್ಕಳೂ ಕೂಡ ಅವರನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲ ಎಂಬ ನಂಬಿಕೆ ಇದೆ.

ಗುರುಬಲ ಪ್ರಾಪ್ತಿಗೆ ಅರಶಿನ ಔಷಧ..?!

ಅಲ್ಲದೇ ನೀವೇನಾದ್ರೂ ಪೂರ್ವ ಜನ್ಮದಲ್ಲಿ ಗೋವಿಗೆ ತೀರಾ ತೊಂದರೆ ಕೊಟ್ಟಿದ್ದಲ್ಲಿ, ನಿಮಗೆ ಋಣ ಪುತ್ರ ಅಥವಾ ಋಣಪುತ್ರಿ ಜನಿಸುತ್ತಾಳೆ. ಮತ್ತು ಆ ಮಕ್ಕಳು ಎಷ್ಟೋ ವಿದ್ಯಾವಂತರೂ, ಬುದ್ಧಿವಂತರೂ, ಉತ್ತಮ ಸಂಬಳ ಪಡೆಯುವ ಕೆಲಸ ಮಾಡುತ್ತಿದ್ದರೂ, ಅವರನ್ನು ನೀವೇ ಸಾಕಬೇಕಾಗುತ್ತದೆ. ಹಾಗಾಗಿ ನೀವು ಗೋವನ್ನು ಸಾಕುವುದಿದ್ದರೆ, ಅದಕ್ಕೆ ಉತ್ತಮವಾಗಿ ನೋಡಿಕೊಳ್ಳಿ. ಉತ್ತಮ ಆಹಾರ ಹಾಕಿ, ಅದನ್ನು ಯಾವಾಗಲೂ ಕಟ್ಟಿ ಹಾಕಿ ಹಿಂಸೆ ಮಾಡಬೇಡಿ ಎನ್ನುತ್ತಾರೆ ಹಿರಿಯರು.

ಹಾಗಾಗಿ ತಾಯಿಯ ಸ್ಥಾನ ಕೊಟ್ಟಿರುವ ಗೋವಿನ ಮಾಂಸವನ್ನು ತಿಂದವನಿಗೆ ಎಂದಿಗೂ ಕ್ಷಮೆ ಇಲ್ಲವೆಂದು ಹೇಳಲಾಗಿದೆ. ಅಂಥವರಿಗೆ ತಕ್ಕ ಶಿಕ್ಷೆ ಸಿಗುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ಅಲ್ಲದೇ ಗೋಮಾಂಸ ತಿನ್ನುವ ಹಿಂದೂ ಎಂದಿಗೂ ಉದ್ಧಾರವಾಗುವುದಿಲ್ಲ. ಅಂಥವರ ಪೂಜೆಯನ್ನು ದೇವರು ಎಂದಿಗೂ ತೆಗೆದುಕೊಳ್ಳುವುದಿಲ್ಲವೆಂದು ಹೇಳಲಾಗಿದೆ.

ನಿಮಗೆ ಲಕ್ ತಂದುಕೊಡುವ ಲಕ್ಕಿ ಸಸ್ಯ…!

ಹುಲ್ಲು ತಿಂದು ನಮಗೆ ಹಾಲು ಕೊಡುವ ಗೋಮಾತೆಯ ರಕ್ಷಣೆ ಮಾಡೋದು ಹಿಂದೂಗಳ ಕರ್ತವ್ಯ. ಆಕೆಯ ಸೇವೆ ಮಾಡುವುದರಿಂದ ಸಕಲ ಪುಣ್ಯ ಪ್ರಾಪ್ತಿಯಾಗುತ್ತದೆ. ಉತ್ತಮ ಸಂತಾನ ಲಭಿಸುತ್ತದೆ. ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ.

- Advertisement -

Latest Posts

Don't Miss