Monday, November 17, 2025

Latest Posts

ಅಪ್ಪಿ ತಪ್ಪಿಯೂ ನಿಮ್ಮ ದೇವರ ಕೋಣೆಯಲ್ಲಿ ಈ 7 ವಸ್ತುಗಳನ್ನು ಇಡಲೇಬೇಡಿ..

- Advertisement -

ಹಿಂದೂಗಳ ಮನೆಯಲ್ಲಿ ಪವಿತ್ರವಾದ ಕೋಣೆ, ಪವಿತ್ರವಾದ ಜಾಗ ಅಂತಿದ್ದರೆ ಅದು ದೇವರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಪರಿಣಾಮ ಕಡಿಮೆಯಾಗಿರುತ್ತದೆ. ಇನ್ನು ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇಡಬಾರದು. ಹಾಗಾದ್ರೆ ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯ ವಸ್ತು ದೇವರ ಮೂರ್ತಿ. ದೇವರ ಕೋಣೆಯಲ್ಲಿ ಒಂದಕ್ಕಿಂತ ಹೆಚ್ಚು ಮೂರ್ತಿಯನ್ನು ಇಟ್ಟು ಪೂಜಿಸಬಾರದು ಅನ್ನೋ ನಿಯಮವಿದೆ. ಹಾಗಾಗಿ ಹೆಚ್ಚೆಂದರೆ ಎರಡು ಇಡಬಹುದು. ಅದಕ್ಕಿಂತ ಹೆಚ್ಚು ಮೂರ್ತಿಯನ್ನು ಇಡಬಾರದು. ಅಲ್ಲದೇ ದೊಡ್ಡ ದೊಡ್ಡ ಮೂರ್ತಿಯನ್ನಿಡಬಾರದು. ಹಾಗೇನಾದ್ರೂ ನೀವು ದೇವರ ಕೋಣೆಯಲ್ಲಿ ದೊಡ್ಡ ಮೂರ್ತಿಯನ್ನೇ ಇಟ್ಟಲ್ಲಿ, ದಿನಕ್ಕೆ ಎರಡು ಹೊತ್ತು ಮಡಿಯಿಂದ ಸ್ನಾನ ಮಾಡಿ ಪೂಜೆ ಸಲ್ಲಿಸಿ, ನೈವೇದ್ಯಕ್ಕಿಡಬೇಕು. ಇಲ್ಲವಾದಲ್ಲಿ ಮನೆಗೆ ಒಳ್ಳೆಯದಾಗುವುದಿಲ್ಲ.

ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?

ಎರಡನೇಯ ವಸ್ತು ದೇವರ ರೌದ್ರ ರೂಪದ ಫೋಟೋವನ್ನು ದೇವರಕೋಣೆಯಲ್ಲಿ ಎಂದಿಗೂ ಇಡಬೇಡಿ. ಕಾಳಿಮಾತೆಯ ಫೋಟೋ, ರುದ್ರದೇವರ ಫೋಟೋ, ಭಯಂಕರವಾಗಿರುವ ದೇವರು ದೇವತೆಗಳ ಫೋಟೋವನ್ನು ದೇವರ ಕೋಣೆಯಲ್ಲಷ್ಟೇ ಅಲ್ಲ, ಮನೆಯಲ್ಲೇ ಇಡಬಾರದು. ಹಾಗೇನಾದರೂ ಇಟ್ಟರೆ, ಆ ಮನೆಯಲ್ಲಿ ನೆಮ್ಮದಿ ಅನ್ನೋದು ಇರೋದೇ ಇಲ್ಲ.

ಮೂರನೇಯ ವಸ್ತು ಒಂದಕ್ಕಿಂತ ಹೆಚ್ಚು ಶಂಖವನ್ನು ಮನೆಯಲ್ಲಿ ಇರಿಸಬಾರದು. ಶ್ರೀವಿಷ್ಣುವಿನ ಪ್ರತೀಕವಾಗಿರುವ ಶಂಖವಿದ್ದರೆ, ಅದು ಒಂದೇ ಶಂಖವಿರಬೇಕು ಎಂಬ ನಿಯಮವಿದೆ. ಯಾಕಂದ್ರೆ ಒಂದಕ್ಕಿಂತ ಹೆಚ್ಚು ಶಂಖವನ್ನು ಬಳಸಿದ್ರೆ, ಅದು ಒಳ್ಳೆಯದಲ್ಲ ಎನ್ನುಲಾಗಿದೆ. ಹಾಗಾಗಿ 2 ಶಂಖವಿದ್ದಲ್ಲಿ, ಅದನ್ನು ಯಾವುದಾದರೂ ಪವಿತ್ರ ನದಿಗೆ ಹಾಕಿರಿ.

ಅನ್ನಾಹಾರವಿಲ್ಲದೆ ಸೀತೆ ಅಶೋಕ ವನದಲ್ಲಿ ಹೇಗೆ ಬದುಕಿದ್ದಳು..?

ನಾಲ್ಕನೇಯ ವಸ್ತು ಹಾಳಾದ ಹೂವನ್ನಿರಿಸಬೇಡಿ. ದೇವರ ಕೋಣೆಯಲ್ಲಿ ಹಾಳಾದ, ಕೊಳೆತ ಹೂವನ್ನು ಇರಿಸಬೇಡಿ. ಹಾಗೆ ಇರಿಸಿದರೆ, ಅದಕ್ಕೆ ಬರುವ ಹುಳು ಹುಪ್ಪಟೆ, ದೇವರ ವಿಗ್ರಹಕ್ಕೋ, ಫೋಟೋಗೋ ಹೋಗುತ್ತದೆ. ಇದು ಉತ್ತಮವಲ್ಲ. ಇಂಥ ಸ್ಥಳದಲ್ಲಿ ಪೂಜೆ ಮಾಡಿದರೂ, ಮಾಡದಿದ್ದರೂ ಒಂದೇ. ಹಾಗಾದ್ರೆ ಹೂವು ಕೊಳೆತ ಬಳಿಕ, ಅದನ್ನು ಗಿಡದ ಬುಡಕ್ಕೆ ಹಾಕಿ.

ಐದನೇಯ ವಸ್ತು ಮುರಿದಿರುವ ಮೂರ್ತಿಯನ್ನಿರಿಸಬೇಡಿ. ನೀವು ಪೂಜಿಸುವ ಮೂರ್ತಿ ಮುರಿದಿದ್ದರೆ, ಅದನ್ನು ಪದ್ಧತಿ ಪ್ರಕಾರವಾಗಿ, ದೇವಸ್ಥಾನಕ್ಕೋ ಅಥವಾ ಯಾವುದಾದರೂ ನದಿಗೋ ಹಾಕಿ. ಅದನ್ನು ಇಟ್ಟು ಪೂಜೆ ಮಾಡಿದರೆ, ಮನೆಗೆ ಒಳ್ಳೆಯದಾಗುವುದಿಲ್ಲ.

ಅಕ್ಟೋಬರ್ 2021ರ ಮಾಸ ಭವಿಷ್ಯ, ಈ ರಾಶಿಗೆ ಶುಕ್ರ ದೆಸೆ ಶುರೂ..?!

ಆರನೇಯ ವಸ್ತು ದೇವರ ಕೋಣೆಯಲ್ಲಿ ಎಂದಿಗೂ ಪಿತೃಗಳ ಪೋಟೋ ಇಡಬೇಡಿ. ನಿಮ್ಮ ಮನೆಯಲ್ಲಿ ಯಾರಾದರೂ ಮರಣ ಹೊಂದಿದರೆ, ಅಂಥವರ ಫೋಟೋವನ್ನು ದೇವರ ಕೋಣೆಯಲ್ಲಿರಿಸಬೇಡಿ. ಸತ್ತವರು ದೇವರ ಸಮಾನರಾದರೂ, ಕೂಡ ದೇವರ ಕೋಣೆಯಲ್ಲಿ ಅವರ ಫೋಟೋವನ್ನಿರಿಸುವುದು ಉತ್ತಮವಲ್ಲ.

ಏಳನೇಯ ವಸ್ತು ನೀಲಿ ಬಣ್ಣದ ಲೈಟ್. ದೇವರ ಕೋಣೆಯಲ್ಲಿ ಬಿಳಿ ಬಣ್ಣದ ಬಲ್ಬ್, ಹಳದಿ ಬಣ್ಣದ ಬಲ್ಬ್ ಅಷ್ಟೇ ಬಳಸಿ, ನೀಲಿ ಬಣ್ಣದ ಬಲ್ಬ್ ಹಾಕುವುದರಿಂದ ಮನೆಗೇನೂ ಕೆಟ್ಟದ್ದಾಗುವುದಿಲ್ಲ. ಆದ್ರೆ ನಿಮಗೆ ದೇವರ ಕೋಣೆಯಲ್ಲಿ ಕುಳಿತು, ಏಕಾಗೃತೆಯಿಂದ ಪೂಜಾ ಪಾಠ ಮಾಡಲಾಗುವುದಿಲ್ಲ.

- Advertisement -

Latest Posts

Don't Miss