ಮಹಾಭಾರತ ಯುದ್ಧ ನಡೆಯಲು ದ್ರೌಪದಿಯ ಹಠವೇ ಕಾರಣವಿರಬಹುದು. ಆದರೆ ದ್ರೌಪದಿಗೆ ಅವಮಾನವಾಗುವಂತೆ ಮಾಡಿ, ಆಕೆಯಲ್ಲಿ ಹಠ ಬರುವಂತೆ ಮಾಡಿದ್ದೇ, ಶಕುನಿಯ ದುಷ್ಟತನ, ದುಷ್ಟ ಉಪಾಯ. ಮಹಾಭಾರತ ಯುದ್ಧ ನಡೆದು, ಇಡೀ ಕುರುವಂಶವೇ ನಾಶವಾಗಬೇಕು ಅನ್ನೋದು ಶಕುನಿಯ ಆಸೆಯಾಗಿತ್ತು. ಧೃತರಾಷ್ಟ್ರ ತನ್ನ ಅಪ್ಪನನ್ನು ಕೊಂದ ದ್ವೇಷಕ್ಕೆ ಶಕುನಿ ಹಸ್ತಿನಾಪುರ ಸೇರಿ, ಸುಯೋಧನನ್ನು ದುರ್ಯೋಧನನ್ನಾಗಿ ಮಾಡುವಲ್ಲಿ ಸಫಲನಾದ. ಹಾಗಾದ್ರೆ ಕುರುವಂಶ ನಾಶಕ್ಕೆ ಶಕುನಿ ರಚಿಸಿದ್ದ 3 ತಂತ್ರಗಳ್ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹೆಣ್ಣು ಮಕ್ಕಳು ಮುಟ್ಟಾದಾಗ ತುಳಸಿಗಿಡ ಮುಟ್ಟಬಾರದು ಅಂತಾ ಹೇಳೋದ್ಯಾಕೆ..?
ಮೊದಲನೇಯ ತಂತ್ರ ಅಪ್ಪನ ಮೂಳೆಯಿಂದ ದಾಳ ರಚಿಸಿದ್ದ. ಗಾಂಧಾರಿಗೆ ಈ ಮೊದಲು ಮೇಕೆಯೊಂದಿಗೆ ವಿವಾಹವಾಗಿದೆ ಎಂಬ ವಿಷಯವನ್ನು ಮುಚ್ಚಿಟ್ಟ ಕಾರಣ, ಧೃತರಾಷ್ಟ್ರ ಗಾಂಧಾರಿಯ ವಂಶದ ಪುರುಷರನ್ನು ತಂದು ಜೈಲಿನಲ್ಲಿ ಕೂಡಿ ಹಾಕಿ, ಪ್ರತಿದಿನ ಒಂದೇ ಅಗಳು ಅನ್ನ ಕೊಟ್ಟು ಅವರೆಲ್ಲ ಸಾಯುವಂತೆ ಮಾಡಿದ್ದ. ಈ ವೇಳೆ ಶಕುನಿಯ ಅಪ್ಪ, ನಾನು ಸತ್ತ ಮೇಲೆ ನೀನು ನನ್ನ ಮೂಳೆಯಿಂದ ದಾಳ ಮಾಡು. ಆ ದಾಳ ನೀನು ಹೇಳಿದ ಹಾಗೆ ಕೇಳುತ್ತದೆ. ಆ ದಾಳದಿಂದಲೇ ಕೌರವರು ಮತ್ತು ಪಾಂಡವರು ಪಗಡೆಯಾಡಿ, ಇಬ್ಬರ ಮಧ್ಯೆ ಜಗಳ ನಡೆದು, ಮುಂದೊಂದು ದಿನ ಅದು ಮಹಾಭಾರತ ಯುದ್ಧವಾಗಬೇಕು. ಕುರುವಂಶ ನಾಶವಾಗಬೇಕು ಎಂದು ಹೇಳಿದ್ದ.
ಈ 5 ಜನರನ್ನು ಎಂದಿಗೂ ದ್ವೇಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..
ಎರಡನೇಯ ತಂತ್ರ ದುರ್ಯೋಧನನ ಮೂಲಕ ಭೀಮನಿಗೆ ವಿಷ ಹಾಕಿಸಿ, ಕೊಲ್ಲಲು ನೋಡಿದ್ದು. ಭೀಮ ಮರಣ ಹೊಂದಿದರೆ, ಅವನ ಸಹೋದರರು ದುರ್ಯೋಧನನ ಮೇಲೆ ದ್ವೇಷ ಸಾಧಿಸುತ್ತಾರೆ. ನಂತರ ಇಬ್ಬರ ಮಧ್ಯೆ ಜಗಳ ನಡೆದು ಮಹಾಭಾರತ ಯುದ್ಧವಾಗುತ್ತದೆ ಎಂಬುದು ಶಕುನಿಯ ಉಪಾಯವಾಗಿತ್ತು. ದುರ್ಯೋಧನ ಮತ್ತು ಭೀಮನ ಮಧ್ಯೆ ದ್ವೇಷವಿರುವುದನ್ನೇ ಅಸ್ತ್ರವಾಗಿಟ್ಟುಕೊಂಡು, ತಿಂಡಿಪೋತನಾಗಿದ್ದ ಭೀಮನಿಗೆ ದುರ್ಯೋಧನನಿಂದ ವಿಷದ ಲಡ್ಡು ಕೊಡಿಸುವ ಮೂಲಕ, ಸಾಯಿಸಲು ಪ್ರಯತ್ನಿಸಿದ್ದ. ಆದ್ರೆ ಅದೃಷ್ಟವಶಾತ್ ಶೇಷನಾಗನ ಸಹಾಯದಿಂದ ಭೀಮ ಬದುಕಿ ಬಂದ.
ಮೂರನೇಯ ತಂತ್ರ, ದಾಳ ಉಪಯೋಗಿಸಿ, ಶಕುನಿ ಸಫಲನಾಗಿದ್ದು. ದಾಳದಿಂದ ಪಾಂಡವರು ಮತ್ತು ಕೌರವರು ಪಗಡೆಯಾಗಿ, ಪಾಂಡವರು ಸೋತಿದ್ದು. ನಂತರ ದುರ್ಯೋಧನ ದ್ರೌಪದಿ ವಸ್ತ್ರಾಪಹರಣ ಮಾಡಿದ್ದು. ಇದೇ ಕಾರಣಕ್ಕೆ ದ್ರೌಪದಿ ಮಹಾಭಾರತ ಯುದ್ಧ ನಡೆಯಲೇಬೇಕು. ದುರ್ಯೋಧನ ಸಾಯಲೇ ಬೇಕು. ತಾನು ದುರ್ಯೋಧನನ ರಕ್ತದಿಂದಲೇ ಕೂದಲು ಕಟ್ಟಬೇಕೆಂದು ಹಠ ಮಾಡಿದ್ದು. ಹೀಗೆ ಕುರುವಂಶ ನಾಶ ಮಾಡಬೇಕೆಂದು 3 ತಂತ್ರ ಹೆಣೆದಿದ್ದ ಶಕುನಿ, ಕೊನೆಗೆ ಅದೇ ಮಹಾಭಾರತ ಯುದ್ಧದಲ್ಲಿ ಪಾಂಡವರಿಂದ ಹತನಾದ.