ನಾವು ನಮ್ಮ ಹಿರಿಯರು ತೀರಿ ಹೋದಮೇಲೆ ಅವರ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡುತ್ತೇವೆ. ಹೀಗೆ ಮಾಡುವುದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋದು ನಂಬಿಕೆ. ಮತ್ತು ಸನಾತನ ಧರ್ಮದಲ್ಲಿ ನಡೆದುಕೊಂಡು ಬಂದ ಪದ್ಧತಿ. ಆದ್ರೆ ಮಹಾಭಾರತದಲ್ಲಿ ಬರುವ ದುರ್ಯೋಧನ, ತಂದೆ ಧೃತರಾಷ್ಟ್ರ ಬದುಕಿರುವಾಗಲೇ, ಅವರ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡಿದ್ದನಂತೆ. ಹಾಗಾದ್ರೆ ದುರ್ಯೋಧನ ಯಾಕೆ ಹೀಗೆ ಮಾಡಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಹೆಣ್ಣು ಮಕ್ಕಳು ಮುಟ್ಟಾದಾಗ ತುಳಸಿಗಿಡ ಮುಟ್ಟಬಾರದು ಅಂತಾ ಹೇಳೋದ್ಯಾಕೆ..?
ಪಾಂಡವರು ಮತ್ತು ಕೌರವರ ಮಧ್ಯೆ ಪಗಡೆಯಾಟ ನಡೆದಿದ್ದು, ಇದರಲ್ಲಿ ಪಾಂಡವರು ಸೋಲನ್ನೊಪ್ಪುತ್ತಾರೆ. ಆಗ ಕೌರವರು ಪಾಂಡವರನ್ನು ದಾಸರನ್ನಾಗಿ ನೇಮಿಸಿಕೊಳ್ಳುತ್ತಾರೆ. ಅವರ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದುಕೊಳ್ಳುತ್ತಾರೆ. ದ್ರೌಪದಿಯ ವಸ್ತ್ರಾಪಹರಣ ಮಾಡಿ ಅವಮಾನ ಮಾಡುತ್ತಾರೆ. ಆಗ ಕ್ರೋಧಿತಳಾದ ದ್ರೌಪದಿ, ಇಡೀ ಕುರುವಂಶ ನಾಶವಾಗಲಿ ಎಂದು ಶಾಪ ಕೊಡಲು ಹೋಗುತ್ತಾಳೆ. ಆಗ ಆಕೆಯನ್ನು ತಡೆದ ಧೃತರಾಷ್ಟ್ರ, ನಿನಗೆ ಬೇಕಾದ ಮೂರು ವರ ಕೇಳು ಎನ್ನುತ್ತಾನೆ.
ಆಗ ದ್ರೌಪದಿ, ಯುಧಿಷ್ಠಿರನನ್ನು ದಾಸ್ಯದಿಂದ ಮುಕ್ತಿಗೊಳಿಸಿ ಎಂದು ಕೇಳುತ್ತಾಳೆ. ಎರಡನೇಯ ವರವಾಗಿ ಅಱ್ಜುನ, ಭೀಮ, ನಕುಲ, ಸಹದೇವನ ಶಸ್ತ್ರಾಸ್ತ್ರಗಳನ್ನು ಕೊಟ್ಟು, ಅವರನ್ನೂ ಕೂಡ ದಾಸ್ಯದಿಂದ ಮುಕ್ತಿಗೊಳಿಸಿ ಎಂದು ಕೇಳುತ್ತಾಳೆ. ಆದರೆ ಮೂರನೇ ವರ ಕೇಳುವುದಿಲ್ಲ. ಹಾಗಾಗಿ ಧೃತರಾಷ್ಟ್ರ ಈ ಎರಡೂ ವರವನ್ನೂ ಕೊಟ್ಟು, ಮೂರನೇಯದಾಗಿ ನೀವೆಲ್ಲ ಖಾಂಡವ ವನಕ್ಕೆ ಹೋಗಿ, ರಾಜ ವೈಭೋಗವನ್ನು ಅನುಭವಿಸಿ ಎಂದು ವರ ಕೊಡುತ್ತಾನೆ.
ಕುರುವಂಶ ನಾಶಕ್ಕಾಗಿ ಶಕುನಿ ರಚಿಸಿದ್ದ ಈ 3 ತಂತ್ರ..
ನಂತರ ಕ್ರೋಧಿತನಾದ ದುರ್ಯೋಧನ ತನ್ನ ತಂದೆಯ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡಲು ಹೋಗುತ್ತಾನೆ. ಆಗ ಧೃತರಾಷ್ಟ್ರ ವಿಷಯ ತಿಳಿದು, ಯಾಕೆ ಹೀಗೆ ಮಾಡುತ್ತಿರುವ ಎಂದು ಕೇಳುತ್ತಾನೆ. ನೀವು ಒಂದು ಶಾಪಕ್ಕೆ ಹೆದರಿ, ನಾನು ಗೆದ್ದ ವಸ್ತುವನ್ನೆಲ್ಲಾ ಮರಳಿ ಪಾಂಡವರಿಗೆ ಕೊಟ್ಟಿದ್ದೀರಿ. ಇದು ನೀವು ನಿಮ್ಮ ಮಗನಿಗೆ ಮಾಡಿದ ಅನ್ಯಾಯ. ಹಾಗಾಗಿ ಇಂದಿನಿಂದ ನಾನು ಅನಾಥನೆಂದು ಭಾವಿಸಿ, ನಿಮ್ಮ ಹೆಸರಿನಲ್ಲಿ ಪಿಂಡ ಪ್ರಧಾನ ಮಾಡುತ್ತಿದ್ದೇನೆ. ಇಂದಿನಿಂದ ನನ್ನ ನಿಮ್ಮ ಸಂಬಂಧ ಮುಗಿಯಿತು ಎನ್ನುತ್ತಾನೆ.
ಆಗ ಧೃತರಾಷ್ಟ್ರ ಪುನಃ ಪಾಂಡವರನ್ನು ಕರೆಸಿ, ಆಟದಲ್ಲಿ ಅಥವಾ ಯುದ್ಧದಲ್ಲಿ ಯಾರು ಗೆಲ್ಲುತ್ತಾರೋ, ಅವರಿಗೆ ಅವರು ಗೆದ್ದ ವಸ್ತು ಸಿಗಬೇಕು. ಇದೇ ನ್ಯಾಯ. ಹಾಗಾಗಿ ನೀವು ಇನ್ನೊಮ್ಮೆ ಪಗಡೆಯಾಟ ಆಡಬೇಕು. ಗೆದ್ದರೆ, ನಿಮ್ಮ ರಾಜ್ಯ, ಶಸ್ತ್ರಾಸ್ತ್ರಗಳೆಲ್ಲ ನಿಮಗೆ ಸಿಗುತ್ತದೆ. ಇಲ್ಲವಾದಲ್ಲಿ ನೀವು 12 ವರ್ಷ ವನವಾಸ ಮತ್ತು 1 ವರ್ಷ ಅಜ್ಞಾತವಾಸ ಮಾಡಬೇಕೆಂದು ಹೇಳುತ್ತಾನೆ. ಹೀಗೆ ಮೋಸದ ದಾಳದಿಂದ ಪಾಂಡವರು ಸೋತು ವನವಾಸ ಹೋಗುತ್ತಾರೆ.