ಅಕ್ಕಪಕ್ಕದ ಮನೆಯವರು ಅಂದ್ರೆ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿರಬೇಕು. ಒಬ್ಬರಿಗೊಬ್ಬರು ಕಾಳಜಿ ಮಾಡುತ್ತಿರಬೇಕು. ಆದ್ರೆ ಹಾಗೆ ಸಹಾಯ ಮಾಡುವ ವೇಳೆ ಅವರು ಕೇಳಿದ ಎಲ್ಲ ವಸ್ತುವನ್ನ ನಾವು ಕೊಡುವ ಹಾಗಿಲ್ಲ. ಅದರಲ್ಲೂ ಅಡುಗೆ ಕೋಣೆಯಲ್ಲಿರುವ ಕೆಲ ವಸ್ತುಗಳನ್ನು ನೀವು ಕೊಡುವ ಹಾಗಿಲ್ಲ. ಹಾಗಾದ್ರೆ ಅದ್ಯಾವ ವಸ್ತುಗಳು ಅಂತಾ ತಿಳಿಯೋಣ ಬನ್ನಿ..
ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!
ಅರಿಶಿನ: ಅರಿಶಿನ ಬರೀ ಅಡುಗೆ ಮನೆಗಷ್ಟೇ ಸೀಮಿತವಲ್ಲ. ಬದಲಾಗಿ ಇದನ್ನು ಶುಭಕಾರ್ಯಗಳಲ್ಲಿ, ದೇವರ ಕಾರ್ಯದಲ್ಲಿ ಬಳಸಲಾಗತ್ತೆ. ಇನ್ನು ಪ್ರತೀ ಮನೆಯಲ್ಲೂ ಅಡುಗೆ ಮಾಡುವಾಗ ಅರಿಶಿನ ಬಳಸಲಾಗತ್ತೆ. ಬ್ರಹಸ್ಪತಿ ಗ್ರಹಕ್ಕೆ ಸಂಬಂಧಿಸಿದ ಅರಿಶಿನ ಎಂದಿಗೂ ಖಾಲಿಯಾಗಬಾರದು ಅಂತಾ ಹೇಳಲಾಗುತ್ತದೆ. ಇನ್ನೇನು ಅರಿಶಿನ ಖಾಲಿಯಾಗುತ್ತ ಬಂತು ಅಂದಿಟ್ಟುಕೊಳ್ಳಿ. ಆದಷ್ಟು ಬೇಗ ಅರಿಶಿನ ತರಿಸಿಬಿಡಿ.
ಇನ್ನು ನಿಮ್ಮ ಬಳಿ ಯಾರಾದ್ರೂ ಮನೆಯಲ್ಲಿ ಅರಿಶಿನ ಖಾಲಿಯಾಗಿದೆ, ಸ್ವಲ್ಪ ಕೊಡಿ ಅಂತಾ ಕೇಳಿದ್ರೆ, ಖಂಡಿತ ಕೊಡಬೇಡಿ. ಯಾಕಂದ್ರೆ ನೀವು ಅರಿಶಿನವನ್ನ ದಾನ ಮಾಡಿದರೆ, ನಿಮಗೆ ದರಿದ್ರ ಆವರಿಸುತ್ತದೆ. ಮನೆಯಲ್ಲಿ ನೆಮ್ಮದಿ ಹಾಳಾಗಬಹುದು. ಧನ ಧಾನ್ಯ ಸಮಸ್ಯೆ ಎದುರಾಗಬಹುದು. ಹಾಗಾಗಿ ಅರಿಶಿನವನ್ನು ದಾನ ಮಾಡಬೇಡಿ. ಅದರಲ್ಲೂ ಮುಸ್ಸಂಜೆ ಬಳಿಕ ಅರಿಶಿನ ಯಾರಿಗೂ ಕೊಡಬೇಡಿ.
ದೇವಾಲಯಗಳಲ್ಲಿ ಪ್ರದಕ್ಷಣೆಯ ದೈವಿಕ ಶಕ್ತಿ ನಿಮಗೆ ಗೊತ್ತಾ ..?
ಉಪ್ಪು: ಉಪ್ಪನ್ನು ಯಾರಿಗೂ ದಾನ ಮಾಡುವಂತಿಲ್ಲ. ರಾಹುವಿನ ಆಹಾರವಾದ ಉಪ್ಪನ್ನು ದಾನ ಮಾಡಿದ್ದಲ್ಲಿ, ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಅದೇ ರೀತಿ ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಿ. ಮನೆಯಲ್ಲಿ ಉಪ್ಪು ಖಾಲಿಯಾದರೆ ರಾಹುವಿನ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದು, ಮನೆಯ ನೆಮ್ಮದಿ ಕೆಡುತ್ತದೆ.
ಅಕ್ಕಿ: ಅಕ್ಕಿಯನ್ನು ದಾನ ಮಾಡಬೇಕು ಅನ್ನೋದು ಎಷ್ಟು ನಿಜವೋ, ಮುಸ್ಸಂಜೆ ಬಳಿಕ ಅಕ್ಕಿ ಯಾರಿಗೂ ಕೊಡಬಾರದು ಅನ್ನೋದು ಅಷ್ಟೇ ನಿಜ. ಯಾರಾದರೂ ಅಕ್ಕಿ ದಾನ ಕೇಳಿದರೆ, ನಾಳೆ ಬೆಳಿಗ್ಗೆ ಕೊಡುತ್ತೇನೆಂದು ಹೇಳಿ. ಆದ್ರೆ ಯಾವುದೇ ಕಾರಣಕ್ಕೂ ಮುಸ್ಸಂಜೆ ಬಳಿಕ, ಅಕ್ಕಿ, ಹಾಲು, ಮೊಸರು, ಮಜ್ಜಿಗೆಯನ್ನು ದಾನ ನೀಡಬೇಡಿ. ಇದರಿಂದ ಮನೆಯಲ್ಲಿ ಸಂಕಷ್ಟ ಎದುರಾಗುತ್ತದೆ. ಮತ್ತು ಯಾವಾಗಲೂ ಮನೆಯಲ್ಲಿರುವ ಅಕ್ಕಿ ಡಬ್ಬದಲ್ಲಿ ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಿ.