Monday, December 23, 2024

Latest Posts

ಪೆರಿ ಪೆರಿ ಪನೀರ್ ಸ್ಯಾಂಡವಿಚ್ ಪಕೋಡಾ ರೆಸಿಪಿ…

- Advertisement -

ನಿಮಗೆ ಯಾವಾಗಲೂ ಸಿಂಪಲ್ ಆಗಿರುವ ಬಜ್ಜಿ ತಿಂದು ತಿಂದು ಬೋರ್ ಬಂದಿದ್ರೆ, ನೀವು ಪನೀರ್ ಬಜ್ಜಿ ಟ್ರೈ ಮಾಡಬಹುದು. ಅದು ಕೂಡ ಯೂನಿಕ್ ಸ್ಟೈಲಲ್ಲಿ. ಇವತ್ತು ನಾವು ಪೆರಿ ಪೆರಿ ಪನೀರ್ ಸ್ಯಾಂಡವಿಚ್ ಪಕೋಡಾ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

2 ಟೇಬಲ್ ಸ್ಪೂನ್ ಖಾರದ ಪುಡಿ, 1 ಟೇಬಲ್ ಸ್ಪೂನ್ ಕಪ್ಪು ಉಪ್ಪು, ಒಂದು ಟೇಬಲ್ ಸ್ಪೂನ್ ಧನಿಯಾ ಪುಡಿ, 1 ಟೇಬಲ್ ಸ್ಪೂನ್ ಬೆಳ್ಳುಳ್ಳಿ ಪುಡಿ, 1 ಟೇಬಲ್ ಸ್ಪೂನ್ ಜಿಂಜರ್ ಪುಡಿ,  ಟೇಬಲ್ ಸ್ಪೂನ್ ಸಕ್ಕರೆ ಪುಡಿ, ಟೇಬಲ್ ಸ್ಪೂನ್ ಉಪ್ಪು. ಇವಿಷ್ಟನ್ನು ಮಿಕ್ಸ್ ಮಾಡಿದ್ರೆ ಪೆರಿ ಪೆರಿ ಮಸಾಲೆ ರೆಡಿ. ಇದನ್ನು ಒಂದು ಕಪ್ ಅಥವಾ ಡಬ್ಬದಲ್ಲಿ ಹಾಕಿಡಿ.

ರೆಸ್ಟೋರೆಂಟ್ ಸ್ಟೈಲ್ ಶಾಹಿ ಪನೀರ್ ಮನೆಯಲ್ಲೇ ತಯಾರಿಸಿ..

ಗ್ಯಾಸ್‌ ಆನ್ ಮಾಡಿ ಪ್ಯಾನ್ ಇರಿಸಿ, ಟೇಬಲ್ ಸ್ಪೂನ್ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಟೇಬಲ್ ಸ್ಪೂನ್ ಜೀರಿಗೆ, ಟೇಬಲ್ ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್, 2ರಿದಂ 3 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಇವಿಷ್ಟನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಬೇಯಿಸಿ, ಸ್ಮ್ಯಾಶ್ ಮಾಡಿದ 2 ಆಲೂಗಡ್ಡೆ, ಉಪ್ಪು, 4 ಟೇಬಲ್ ಸ್ಪೂನ್ ರೆಡಿ ಮಾಡಿಟ್ಟುಕೊಂಡ ಪೆರಿಪೆರಿ ಮಸಾಲೆ, ಟೇಬಲ್ ಸ್ಪೂನ್ ನಿಂಬೆ ರಸ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಇವಿಷ್ಟನ್ನೂ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈ ಆಲೂ ಮಿಶ್ರಣ ರೆಡಿ.

2 ಕಪ್ ಕಡಲೆ ಹಿಟ್ಟನ್ನು ಒಂದು ದೊಡ್ಡ ಮಿಕ್ಸಿಂಗ್ ಬೌಲ್‌ಗೆ ಹಾಕಿ. ಕೊಂಚ ವೋಮ, ಬೇಕಾದಷ್ಟು ಉಪ್ಪು, ನೀರು ಹಾಕಿ ಬಜ್ಜಿ ಬ್ಯಾಟರ್ ರೆಡಿ ಮಾಡಿ. ಎಣ್ಣೆ ಕಾಯಲು ಇಡಿ. ಈಗ ಪನೀರ್‌ನ್ನು ಸಣ್ಣ ಸ್ಲೈಸ್ ಮಾಡಿ, ಅದರ ಮಧ್ಯೆ ಆಲೂ ಮಿಶ್ರಣ ಹಾಕಿ, ಸ್ಯಾಂಡವಿಚ್ ರೀತಿ ರೆಡಿ ಮಾಡಿ. ಇದನ್ನು ಬಜ್ಜಿ ಬ್ಯಾಟರ್‌ನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಪೆರಿ ಪೆರಿ ಪನೀರ್ ಸ್ಯಾಂಡವಿಚ್ ಪಕೋಡಾ ರೆಡಿ.

- Advertisement -

Latest Posts

Don't Miss