ನಾವು ಮನೆ ಕಟ್ಟಲು ಹೋಗುವಾಗ, ಅಥವಾ ಬಾಡಿಗೆ ಮನೆಗೆ ಹೋಗುವಾಗ, ಅಥವಾ ಯಾವುದಾದರೂ ಅತಿಥಿಯ ಮನೆಯಲ್ಲಿ ಉಳಿಯಲು ಹೋದಾಗ, ಕೆಲ ಅಂಶಗಳನ್ನು ನೆನಪಿಡಬೇಕಾಗುತ್ತದೆ. ನಾವು ಕೆಲವು ಜಾಗಗಳಲ್ಲಿ ಉಳಿಯಬಾರದು. ಯಾಕಂದ್ರೆ ಅಂಥ ಜಾಗದಲ್ಲಿ ಉಳಿದರೆ, ನಾವೆಂದಿಗೂ ಉದ್ಧಾರವಾಗುವುದಿಲ್ಲ. ಹಾಗಾದ್ರೆ ಎಂಥ ಜಾಗದಲ್ಲಿ ನಾವು ಉಳಿಯಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಗೌರವ ಸಿಗದ ಜಾಗ: ನಮಗೆ ಎಲ್ಲಿ ಗೌರವ ಸಿಗುವುದಿಲ್ಲವೋ, ಅಂಥ ಜಾಗದಲ್ಲಿ ನಾವು ಇರಬಾರದು. ಉದಾಹರಣೆಗೆ ನೀವು ಯಾವುದಾದರೂ ಅತಿಥಿಗಳ ಮನೆಗೆ ಹೋಗಿದ್ದೀರಿ. ಅಲ್ಲಿ ನಿಮಗೆ ಗೌರವ ಸಿಗಲಿಲ್ಲ. ಹಾಗಿದ್ದಲ್ಲಿ, ನೀವು ಅಲ್ಲಿಂದ ಹೊರಡುವುದೇ ಲೇಸು. ಅಲ್ಲದೇ, ನೀವಿರುವ ಕಚೇರಿಯಲ್ಲಿ, ಮನೆಯಲ್ಲಿ, ಎಲ್ಲಿಯಾದರೂ ಸರಿ, ನಿಮಗೆ ಯಾರೂ ಗೌರವಿಸದಿದ್ದಲ್ಲಿ, ಅಂಥ ಜಾಗದಲ್ಲಿರಬೇಡಿ. ಅಲ್ಲದೇ ನಿಮ್ಮ ಗೌರವಕ್ಕೆ ಧಕ್ಕೆ ತರುವ ಜನರಿದ್ದರೆ, ಅಂಥ ಜಾಗ ಇರುವುದಕ್ಕೆ ಲೇಸಲ್ಲ..
ರಾಮನಾಮ ಜಪದಿಂದ ಆಗುವ ಪ್ರಯೋಜನವೇನು..?
ಉದ್ಯೋಗವಿಲ್ಲದ ಜಾಗ: ನೀವಿರುವ ಜಾಗದಲ್ಲಿ ಉತ್ತಮ ಉದ್ಯೋಗವಿಲ್ಲ. ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗವಿಲ್ಲ. ಹಣ ಸಂಪಾದಿಸಲು ನಿಮಗೆ ಸಾಧ್ಯವಾಗುತ್ತಿಲ್ಲವೆಂದಾದಲ್ಲಿ, ನೀವು ಅಂಥ ಜಾಗದಲ್ಲಿ ಇರಕೂಡದು. ಅದು ಸುಮ್ಮನೆ ಸಮಯ ವ್ಯರ್ಥ ಮಾಡಿದಂತಾಗುತ್ತದೆ. ಹಾಗಾಗಿ ಉದ್ಯೋಗವಿರುವ ಜಾಗಕ್ಕೆ ಹೋಗಿ. ನಿಯತ್ತಿನಿಂದ ಹಣ ಸಂಪಾದಿಸಲು ಸಾಧ್ಯವಾಗುವ ಜಾಗಕ್ಕೆ ಹೋದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ಚಾಣಕ್ಯರು.
ಉತ್ತಮ ಗುಣವಿಲ್ಲದ ಜಾಗ: ನೀವು ಉಳಿದಿರುವ ಮನೆಯಲ್ಲಿ, ಅಥವಾ ನೀವು ಕೆಲಸ ಮಾಡುವ ಕಚೇರಿಯಲ್ಲಿ, ಉತ್ತಮ ಗುಣವಿಲ್ಲದ ಜನರೇ ತುಂಬಿಹೋಗಿದ್ದರೆ, ನೀವು ಅಂಥ ಜಾಗದಲ್ಲಿ ಇರಬಾರದು. ಯಾಕಂದ್ರೆ ಒಂದು ಹಣ್ಣು ಹಾಳಾಗಿದ್ದರೆ, ಅದರೊಂದಿಗಿರುವ ಇನ್ನೊಂದು ಉತ್ತಮವಾದ ಹಣ್ಣು ಕೂಡ ಬಹುಬೇಗ ಹಾಳಾಗುತ್ತದೆ. ಅದೇ ರೀತಿ, ಕೆಟ್ಟ ಗುಣವಿರುವ ಮನುಷ್ಯನ ಜೊತೆ, ಉತ್ತಮ ಗುಣದ ಮನುಷ್ಯ ಸೇರಿದರೆ, ಅವನ ಗುಣ ಕೂಡ ಬಹುಬೇಗ ಕೆಟ್ಟದಾಗುತ್ತದೆ.
ಅ.15 ರಂದು ಮಹಾ ಕುಂಭಮೇಳದ ಕಾರ್ಯಕ್ರಮಗಳ ವಿವರ ಇಂತಿದೆ.
ಜ್ಞಾನವಿಲ್ಲದ ಜಾಗ: ಮನುಷ್ಯ ಸಾಯುವವರೆಗೂ ಒಂದಲ್ಲ ಒಂದು ವಿಷಯದ ಬಗ್ಗೆ ಕಲಿಯುತ್ತಲೇ ಇರುತ್ತಾನೆ. ಯಾಕಂದ್ರೆ ಮನುಷ್ಯ ಕಲಿಯುವುದನ್ನು ನಿಲ್ಲಿಸಿದಾಗಲೇ, ಅವನು ದಡ್ಡನಾಗೋದು. ಹಾಗಾಗಿ ಒಂದಲ್ಲ ಒಂದು ವಿಷಯಗಳ ಬಗ್ಗೆ ಜ್ಞಾನಾರ್ಜನೆ ಮಾಡುತ್ತಲೇ ಇರಬೇಕು. ಆದ್ರೆ ನೀವು ಉಳಿದ ಜಾಗದಲ್ಲಿ, ನಿಮಗೆ ಉತ್ತಮ ಜ್ಞಾನ ಸಂಪಾದನೆ ಮಾಡಲು ಅವಕಾಶವಿಲ್ಲದಿದ್ದಲ್ಲಿ, ನೀವು ಅಂಥ ಸ್ಥಳದಲ್ಲಿರುವುದು ಸೂಕ್ತವಲ್ಲ ಎನ್ನುತ್ತಾರೆ ಚಾಣಕ್ಯರು.