ಡ್ರೈಫ್ರೂಟ್ಸ್ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಅಂತಾ ಎಲ್ಲರಿಗೂ ಗೊತ್ತು. ಹಾಗಾಗಿ ಪುಟ್ಟ ಮಕ್ಕಳಿಗೆ, ಗರ್ಭಿಣಿಯರಿಗೆ, ಬಿಪಿ- ಶುಗರ್ ಪೇಶಂಟ್ಗಳಿಗೆಲ್ಲ ಡ್ರೈಫ್ರೂಟ್ಸ್ ಕೊಡಲಾಗುತ್ತದೆ. ಅದೇ ರೀತಿ ಹಲವು ಆರೋಗ್ಯಕರ ಅಂಶಗಳಿಂದ ಭರಪೂರವಾಗಿರುವ ಅಂಜೂರ ತಿಂದರೆ ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನವಿದೆ. ಹಾಗಾದ್ರೆ, ಅಂಜೂರದಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಂಜೂರವನ್ನು ತಿಂದು, ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ, ಹೃದಯ ಸಂಬಂಧಿ ಖಾಯಿಲೆಯಿಂದ ಮುಕ್ತಿ ಪಡೆಯಬಹುದು.
ದೋಸೆಗೆ ಈ ಚಟ್ನಿಯನ್ನ ಒಮ್ಮೆ ತಯಾರಿಸಿ ನೋಡಿ..
ಪ್ರತಿದಿನ ಒಂದು ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ತ್ವಚೆಯ ಸಮಸ್ಯೆ, ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಗರ್ಭಿಣಿಯರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರವನ್ನು ನೆನೆಸಿ ತಿನ್ನುವುದರಿಂದ, ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಮಗು ಶಕ್ತಿಯುತವಾಗಿರುತ್ತದೆ. ಅದರ ತ್ವಚೆಯೂ ಉತ್ತಮವಾಗಿರುತ್ತದೆ. ತಾಯಿ ಮಗು ಆರೋಗ್ಯದಿಂದಿರಲು ಇದು ಸಹಾಯಕವಾಗಿದೆ.
ಬಾಳೆಕಾಯಿಯ ಪದಾರ್ಥ ಸೇವಿಸಿದರೆ ನೀವು ಎಷ್ಟೆಲ್ಲ ರೋಗಗಳಿಂದ ಮುಕ್ತಿಪಡೆಯಬಹುದು ಗೊತ್ತಾ..?
ಡಯಾಬಿಟೀಸ್ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಂಜೂರ ತಿಂದು, ಉಗುರು ಬೆಚ್ಚಗಿನ ನೀರು ಕುಡಿಯದಲ್ಲಿ, ಅವರ ಆರೋಗ್ಯದಲ್ಲಿ ಅಭಿವೃದ್ಧಿ ಕಾಣಬಹುದು.
ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದವರು, ಅಸ್ತಮಾ ರೋಗಿಗಳು ಕೂಡ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ತಿನ್ನಬೇಕು. ಇನ್ನು ನೀವು ಈ ರೀತಿ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿ ದೂರವಾಗುತ್ತದೆ. ಇನ್ನು ನಿಮಗೆ ಅಂಜೂರ ತಿಂದಲ್ಲಿ, ಆರೋಗ್ಯ ಸಮಸ್ಯೆ ಆಗುತ್ತದೆ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.