Thursday, December 26, 2024

Latest Posts

ಕರಬೂಜಾ ಹಣ್ಣನ್ನು ಇಷ್ಟಪಡುವವರು ಮೊದಲು ಈ ಸ್ಟೋರಿ ಓದಿ..

- Advertisement -

ಎಲ್ಲ ಹಣ್ಣುಗಳಲ್ಲೂ ಆರೋಗ್ಯಕರ ಗುಣಗಳಿರುತ್ತದೆ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಹಣ್ಣುಗಳನ್ನು ನಾವು ಸೇವಿಸಿದರೆ, ಅದರಿಂದ ಅನಾರೋಗ್ಯವಾಗಲೂಬಹುದು. ಅದೇ ರೀತಿ ಕರಬೂಜಾ ಹಣ್ಣು ಕೂಡ ಮಿತವಾಗಿ ತಿಂದರೆ ಉತ್ತಮ. ಹಾಗಾಗಿ ಇಂದು ನಾವು ಕರ್ಬೂಜಾ ಹಣ್ಣು ತಿನ್ನುವುದರಿಂದ ನಮಗಾಗು ಆರೋಗ್ಯ ಲಾಭ ಮತ್ತು ನಷ್ಟದ ಬಗ್ಗೆ ತಿಳಿಸಲಿದ್ದೇವೆ..

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ, ಕರಬೂಜಾ ಹಣ್ಣನ್ನು ತಿನ್ನಬೇಕು. ಅಥವಾ ಇದರ ಜ್ಯೂಸ್ ಮಾಡಿ ಸೇವಿಸಿದರೂ ಉತ್ತಮ. ಈ ವೇಳೆ ಸಕ್ಕರೆ ಬದಲು, ಬೆಲ್ಲ ಬಳಸಿದರೆ ಇನ್ನೂ ಒಳ್ಳೆಯದು. ಬೇಸಿಗೆಯಲ್ಲಿ ಕರಬೂಜಾ ಜ್ಯೂಸ್ ಹೆಚ್ಚು ಬಳಸಲಾಗುತ್ತದೆ.

ನಿಖಿಲ್ ಸ್ಪರ್ಧೆ ಬಗ್ಗೆ ಪರೋಕ್ಷವಾಗಿ ಸೂಚನೆ ಕೊಟ್ಟ ಹೆಚ್‌ಡಿಕೆ..

ನಿಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗಿದ್ದರೆ, ನೀವು ಕರಬೂಜಾ ಜ್ಯೂಸ್ ಕುಡಿಯಬಹುದು. ಇದು ವಿಟಾಮಿನ್‌ನಿಂದ ಭರಪೂರವಾಗಿದ್ದು, ವಾರದಲ್ಲಿ ಮೂರು ದಿನವಾದ್ರೂ ನೀವು ಲಿಮಿಟ್‌ನಲ್ಲಿ ಕರಬೂಜಾ ಸೇವನೆ ಮಾಡಿದ್ರೆ, ಉತ್ತಮ ಫಲಿತಾಂಶ ಕಾಣಬಹುದು.

ತೂಕ ಇಳಿಸಿಕೊಳ್ಳು ನೀವು ಪರದಾಡುತ್ತಿದ್ದರೆ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಜ್ಯೂಸ್ ಕುಡಿಯಬೇಕು. ಅದೇ ರೀತಿ ನೀವು ವಾರದಲ್ಲಿ ಮೂರು ದಿನವಾದ್ರೂ ಕರಬೂಜಾ ಜ್ಯೂಸನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ, ನಿಮ್ಮ ದೇಹದ ತೂಕ ಕಡಿಮೆಯಾಗತ್ತದೆ.

ಹೆಚ್.ಡಿ.ದೇವೇಗೌಡರ ಮುಂದೆ ಗಳಗಳನೆ ಕಣ್ಣೀರಿಟ್ಟ ಜಿಟಿಡಿ..

ನಿಮಗೆ ಕೂದಲು ಉದುರುವ ಸಮಸ್ಯೆ, ತ್ವಚೆಯ ಸಮಸ್ಯೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿದ್ದರೆ, ಮಿತವಾಗಿ ಕರಬೂಜಾ ಸೇವನೆ ಮಾಡಿ. ಇದು ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಇವಿಷ್ಟು ಕರಬೂಜಾ ಸೇವನೆಯಿಂದಾಗುವ ಲಾಭಗಳು. ಇದೇ ರೀತಿ ಕರಬೂಜಾ ಸರಿಯಾಗಿ ತಿನ್ನದಿದ್ದರೆ, ಅದರಿಂದ ನಷ್ಟವೂ ಸಂಭವಿಸಬಹುದು.

ಇದು ಉಷ್ಣತೆಯಿಂದ ಕೂಡಿರುತ್ತದೆ. ಹಾಗಾಗಿ ನೀವು ಕರಬೂಜಾ ತಂದು, ತಣ್ಣಗಿನ ನೀರಿನಲ್ಲಿ ಹಣ್ಣನ್ನು ನೆನೆಸಿಡಬೇಕು. ಇದರಿಂದ ಹಣ್ಣಿನಲ್ಲಿರುವ ಉಷ್ಣತೆ ಕಡಿಮೆಯಾಗುತ್ತದೆ. ಹಾಗಂತ ನೀವು ಹಣ್ಣನ್ನು ಫ್ರಿಜ್‌ನಲ್ಲಿಟ್ಟು ತಿನ್ನುವುದು ಉತ್ತಮವಲ್ಲ. ಆಗ ಉಷ್ಣತೆ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಇನ್ನು ಹಣ್ಣಿನಲ್ಲಿ ಹುಳವಾಗುವ ಸಾಧ್ಯತೆ ಇದ್ದು ಇದನ್ನು ಗಮನಿಸಿ ಸೇವಿಸಿ. ಆದಷ್ಟು ಫ್ರೆಶ್ ಹಣ್ಣನ್ನೇ ಸೇವಿಸಿ, ಇಲ್ಲವಾದಲ್ಲಿ ಇದನ್ನು ಸೇವಿಸಿ ಯಾವುದೇ ಪ್ರಯೋಜನವಾಗುವುದಿಲ್ಲ.

- Advertisement -

Latest Posts

Don't Miss