ಹಾಸನ: ಮೊನ್ನೆಯಷ್ಟೇ ಹಾಸನಾಂಬೆಯ ದರ್ಶನ ಪಡೆದಿದ್ದ ಬ್ರಹ್ಮಾಂಡ ಗುರೂಜಿ, ಇಂದು ಶುಕ್ರವಾರವಾದ ಕಾರಣ ಎರಡನೇಯ ಬಾರಿಗೆ ಮತ್ತೆ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ಬಳಿಕ ಮಾತನಾಡಿದ ಗುರೂಜಿ, ದೇವೇಗೌಡರಿಗೆ ಪರಿಪೂರ್ಣವಾದಂತಹ ಆರೋಗ್ಯ ಸಿಗಲು ಸಲಹೆ ಕೇಳಿದ್ರು. ದೇವೇಗೌಡರ ಆರೋಗ್ಯಕ್ಕೆ ದೇವಿಯಲ್ಲಿ ಪ್ರಾರ್ಥನೆ ಮಾಡಿ ಅಂತ ಕೇಳಿದ್ರು. ನಾನು ಎರಡು ಮೂರು ಸಲಹೆ ಕೊಟ್ಟಿದ್ದೇನೆ. ದೊಡ್ಮನೆ ಕುಟುಂಬ, ಬಹಳ ವಿಶೇಷವಾಗಿರುವ ಸಂದರ್ಭ. ಯಡಿಯೂರಪ್ಪ, ಸಿದ್ದರಾಮಯ್ಯ ಬಂದರು ಆರೋಗ್ಯ ನೋಡಿಕೊಳ್ಳಿ ಅಂತ ಹೇಳ್ತಾರೆ ಎಂದರು.
ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..
ಅಲ್ಲದೇ, ರೇವಣ್ಣ ಅವರು ಮೊದಲಿನಿಂದಲೂ ಬಹಳ ಆಸ್ತಿಕರು. ಅವರ ತಂದೆಯವರ ಆರೋಗ್ಯ ಸುಧಾರಿಸುವುದಕ್ಕೋಸ್ಕರ ಏನು ಮಾಡಬಹುದು ಎಂದು ಪರಿಹಾರ ಹೇಳಿ ಎಂದರು. ಅವರ ಆರೋಗ್ಯ ಬಹಳ ಚೆನ್ನಾಗಿರಲಿ . ಕರ್ನಾಟಕದಿಂದ ಒಬ್ಬ ರೈತರ ಮತ್ತು ಪ್ರಧಾನಮಂತ್ರಿ ಆಗಿದ್ದಾರೆ. ಲೋಕೋಪಯೋಗಿ ಸಚಿವರಾಗಿ, ಪ್ರಧಾನಮಂತ್ರಿಯಾಗಿ ಎಲ್ಲಾ ಪ್ರಾಜೆಕ್ಟ್‌ಗಳಿಗೆ ಅನುಮತಿ ನೀಡಿರುವವರು ದೇವೇಗೌಡರು ಒಬ್ಭರೇ ಎಂದು ಹೇಳಿದ ಬ್ರಹ್ಮಾಂಡ ಗುರೂಜಿ, ಜೆಡಿಎಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹಳ ಮುಖ್ಯವಾದ ಪಾತ್ರ ವಹಿಸುತ್ತೆ, ಸರ್ಕಾರ ನಡೆಸುತ್ತಾರೆ ಎಂದು ಹೇಳಿದ್ದಾರೆ.