Thursday, October 16, 2025

Latest Posts

ಮೃತ ವ್ಯಕ್ತಿ ಪುನರ್ಜನ್ಮ ಹೇಗೆ ಪಡೆಯುತ್ತಾನೆ..?

- Advertisement -

ಹುಟ್ಟು ಸಾವು ಎರಡೂ ಕೂಡ ಮನುಷ್ಯನ ಜೀವನದ ಒಂದು ಭಾಗ. ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇಬೇಕು ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಆದ್ರೆ ಮೃತ ವ್ಯಕ್ತಿ ಹೇಗೆ ಪುನರ್ಜನ್ಮ ಪಡೆಯುತ್ತಾನೆಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ..

ಈ ಭೂಮಿಯ ಮೇಲೆ ಮನುಷ್ಯ ಜನ್ಮ ತಾಳಿದ್ದು ಹೇಗೆ..?

ಒರ್ವ ವ್ಯಕ್ತಿ ತೀರಿಹೋದಾಗ, ಅವನ ಮನೆಜನ ಅವನ ಶವ ಸಂಸ್ಕಾರವನ್ನು ಸರಿಯಾಗಿ ಮಾಡಿ. ಶ್ರಾದ್ಧ ಕಾರ್ಯಗಳನ್ನೆಲ್ಲ ಪದ್ಧತಿ ಪ್ರಕಾರವಾಗಿ ಮುಗಿಸಿದರೆ, ಅವನಿಗೆ ಉತ್ತಮ ಯೋನಿಯಲ್ಲಿ ಜನ್ಮ ಸಿಗುತ್ತದೆ. ಓರ್ವ ವ್ಯಕ್ತಿ ಮೃತನಾದಾಗ ಅವನ ಆತ್ಮ ಒಂದು ಕ್ಷಣಕ್ಕೂ ಮುನ್ನವೇ ಇನ್ನೊಂದು ಗರ್ಭಕ್ಕೆ ಹೋಗಿ ಸೇರುತ್ತದೆ ಅನ್ನೋ ನಂಬಿಕೆ ಇದೆ.

ಅದೇ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಾಗ, ಅಥವಾ ಅವನ ಶವಸಂಸ್ಕಾರ, ಶ್ರಾದ್ಧಾದಿಗಳೆಲ್ಲ ಸರಿಯಾದ ಕ್ರಮದಲ್ಲಿ ಆಗದಿದ್ದಾಗ, ಅವನ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ. ಅಥವಾ ಮುಂದಿನ ಜನ್ಮದಲ್ಲಿ ಅವನು ಉತ್ತಮ ಯೋನಿಯಲ್ಲಿ ಜನಿಸಲ್ಪಡುವುದಿಲ್ಲ ಎಂಬ ನಂಬಿಕೆ ಇದೆ. ಗರುಡ ಪುರಾಣದ ಪ್ರಕಾರ, ಯಮದೂತರು ಮೃತರನ್ನು 24 ಗಂಟೆಯಷ್ಟೇ ಯಮಲೋಕಕ್ಕೆ ಕರೆದೊಯ್ದು, ಅವರಿಗೆ ಸಿಗಬೇಕಾದ ಶಿಕ್ಷೆ ಕೊಡುತ್ತಾರಂತೆ. ಅದಾದ ಬಳಿಕ, ಪುನಃ ಅವರು ತಮ್ಮ ಮನೆಗೇ ಬರುತ್ತಾರೆ.

ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

ತಮ್ಮ ಮನೆಜನ ತಮ್ಮನ್ನು ಕಳೆದುಕೊಂಡು ಶೋಕಿಸುತ್ತಿರುವುದನ್ನು ಕಂಡು ಕೊರಗುತ್ತಾರೆ. ಹಾಗೆ ಕೊರಗುತ್ತ ಅವರ ಆತ್ಮ ಶಕ್ತಿ ಕಳೆದುಕೊಳ್ಳುತ್ತದೆ. 13 ದಿನಗಳ ಬಳಿಕ ಪದ್ಧತಿ ಪ್ರಕಾರ, ತಿಥಿ, ದಾನ ಧರ್ಮ ಮಾಡಿದ ಬಳಿಕ , ಪುನಃ ಆತ್ಮದ ಶಕ್ತಿ ಮರುಕಳಿಸುತ್ತದೆ. ನಂತರ ಪುನರ್ಜನ್ಮ ಪ್ರಾಪ್ತಿಯಾಗುತ್ತದೆ. ಮುಂದಿನ ಜನ್ಮ ಉತ್ತಮವಾಗಿರಬೇಕು. ಉತ್ತಮ ಕುಟುಂಬದಲ್ಲಿ ಜನ್ಮ ಪಡೆಯಬೇಕು ಅಂದ್ರೆ, ಹಿಂದಿನ ಜನ್ಮದಲ್ಲಿ ಉತ್ತಮ ಕರ್ಮಗಳನ್ನು ಮಾಡಿರಬೇಕು. ಯಾಕಂದ್ರೆ ನಮ್ಮ ಕರ್ಮದ ಮೇಲೆ ನಮ್ಮ ಪುನರ್ಜನ್ಮ ಅವಲಂಬಿತವಾಗಿರುತ್ತದೆ.

- Advertisement -

Latest Posts

Don't Miss