ಬದಾಮಿನ ಸೇವನೆಯಿಂದ ಹಲವಾರು ರೋಗಗಳಿಗೆ ಮುಕ್ತಿ ಸಿಗುತ್ತದೆ ಅನ್ನೋದು ನಿಜ. ಆದ್ರೆ ಅದನ್ನು ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವುದು ಸಂಪೂರ್ಣ ಸತ್ಯವಲ್ಲ. ಹಾಗಾದ್ರೆ ಬಾದಾಮಿನ ಸೇವನೆಯಿಂದ ನಿಜವಾಗ್ಲೂ ಬುದ್ಧಿ ಚುರುಕಾಗುತ್ತಾ ಇಲ್ಲವಾ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬಾದಾಮನ್ನು ರಾತ್ರಿ ನೆನೆಸಿಟ್ಟು, ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದರಿಂದ ಬಿಪಿ ಶುಗರ್, ಇದ್ದವರಿಗೆ , ಕೈಕಾಲಲ್ಲಿ ನಿಶ್ಯಕ್ತಿ ಇದ್ದವರಿಗೆ ಉತ್ತಮ ಅಂತಾ ಹೇಳಲಾಗತ್ತೆ. ಅದೇ ರೀತಿ ವಿದ್ಯಾರ್ಥಿಗಳು ಪ್ರತಿದಿನ 5 ಬಾದಾಮನ್ನು ನೆನೆಸಿ ತಿನ್ನಬೇಕು. ಇದರಿಂದ ಅವರ ನೆನಪಿನ ಶಕ್ತಿ ಹೆಚ್ಚುತ್ತದೆ ಅನ್ನೋದು ಸಂಪೂರ್ಣ ಸತ್ಯವಲ್ಲ.
‘ಸಿಎಸ್ ಪುಟ್ಟರಾಜುಗೆ ನಾನು ಯಾಕೆ ಫ್ರೀ ಪಬ್ಲಿಸಿಟಿ ಕೊಡ್ಲಿ..?’
ಯಾಕಂದ್ರೆ ಈ ಬಗ್ಗೆ ಕೆಲವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಇದು ಶುದ್ಧ ಸುಳ್ಳು. ಬಾದಾಮ್ ಹೆಚ್ಚು ಖರೀದಿಯಾಗಲಿ ಎಂದು ದೊಡ್ಡ ದೊಡ್ಡ ಕಂಪೆನಿಯವರು ಮಾಡಿರುವ ಗೋಲ್‌ಮಾಲ್ ಇದು ಎಂದು ಕೆಲವರು ಆರೋಪಿಸಿದ್ದಾರೆ. ಬಾದಾಮ್ ಮೊದಲು ಆಮದಾಗಿದ್ದು ವಿದೇಶದಿಂದ, ನಂತರ ಭಾರತದಲ್ಲಿ ಇದನ್ನು ಬೆಳೆಸಲಾಯಿತು ಎಂದು ಹೇಳಲಾಗಿದೆ.
ಅದರಲ್ಲೂ ಹೆಚ್ಚು ಬೆಲೆಯುಳ್ಳ ಬಾದಾಮ್ ಬೀಜ ಆರೋಗ್ಯಕ್ಕೆ ಒಳ್ಳೆಯದು, ಕಡಿಮೆ ರೇಟ್‌ನ ಬಾದಾಮ್ ಬೀಜದಲ್ಲಿ ಸತ್ವವಿರುವುದಿಲ್ಲ. ಅದನ್ನು ತಿಂದು ಪ್ರಯೋಜನವಿಲ್ಲ. ಈ ರೀತಿಯಾಗಿ ಪ್ರಚಾರ ಆರಂಭಿಸಿ, ತಮ್ಮ ಲಾಭ ಮಾಡಿಕೊಳ್ಳಲು ವಿದೇಶಿಗರು ಈ ರೀತಿ ಟ್ರಿಕ್ಸ್ ಬಳಸಿದ್ದಾರೆಂದು ಹೇಳಲಾಗುತ್ತಿದೆ. ಹಾಗಾಗಿ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಲು ಬಾದಾಮ್ ಬದಲು ನೀವು ಶೇಂಗಾ ನೆನೆಸಿ ಕೊಡಬಹುದು. ಒಂದೆಲಗದ ಎಲೆಯನ್ನು ತಿನ್ನಲು ಕೊಡಿ. ಬಜೆ ಅರೆದು ಕೊಡಬಹುದು.