ಗರುಡ ಪುರಾಣದಲ್ಲಿ ಬರೀ ನರಕದಲ್ಲಿ ಸಿಗುವಂಥ ಶಿಕ್ಷೆ ಬಗ್ಗೆಯಷ್ಟೇ ವಿವರಣೆ ನೀಡಿಲ್ಲ. ಬದಲಾಗಿ ಯಾವ ರೀತಿ ಜೀವಿಸಿದರೆ, ಶಿಕ್ಷೆಯಿಂದ ಮುಕ್ತಿ ಸಿಗುತ್ತದೆ. ಪುಣ್ಯ ಲಭಿಸುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ 9 ಕೆಲಸ ಮಾಡಿದ್ರೆ ನಾವು ಸುಖಿಯಾಗಿರುತ್ತೇವೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ, ಕುಲದೇವತೆಯ ಪೂಜೆ ಮತ್ತು ಶ್ರಾದ್ಧ. ಸನಾತನ ಧರ್ಮದ ನಂಬಿಕೆಯ ಪ್ರಕಾರ ಯಾವ ಕುಟುಂಬಸ್ಥರು ತಮ್ಮ ಕುಲದೇವರ ಪೂಜೆಯನ್ನು ಪ್ರತೀ ವರ್ಷ ಮಾಡುತ್ತಾರೋ. ಅಥವಾ ಕುಲದೇವತೆಯ ದರ್ಶನ ಪ್ರತೀ ವರ್ಷ ಮಾಡುತ್ತಾರೋ, ಅವರು ನೆಮ್ಮದಿಯಾಗಿರುತ್ತಾರೆ. ಮತ್ತು ಪೂರ್ವಜರ ಶ್ರಾದ್ಧವನ್ನು ಪ್ರತೀ ವರ್ಷ ಪದ್ಧತಿಪೂರ್ವಕವಾಗಿ ಮಾಡುವುದರಿಂದ, ಅವರ ಪೂರ್ವಜರು ಸಂತೃಪ್ತರಾಗಿ, ತಮ್ಮ ಮಕ್ಕಳಿಗೆ ಆಶೀರ್ವದಿಸುತ್ತಾರೆ. ಗರುಡ ಪುರಾಣದ ಪ್ರಕಾರ, ಈ ಕೆಲಸ ಮಾಡುವುದು ಪುಣ್ಯದ ಕೆಲಸ.
ಈ ಕೆಲಸ ಮಾಡುವುದನ್ನು ನೀವು ಬಿಡದಿದ್ದಲ್ಲಿ, ಲಕ್ಷ್ಮೀ ನಿಮ್ಮ ಮನೆಗೆ ಕಾಲಿಡುವುದಿಲ್ಲ- ಭಾಗ 2
ಎರಡನೇಯ ಕೆಲಸ, ಮನೆಯನ್ನು ಸ್ವಚ್ಛವಾಗಿಡುವುದು. ಅದರಲ್ಲೂ ಅಡುಗೆ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು. ಯಾರ ಅಡುಗೆ ಮನೆ ಸ್ವಚ್ಛವಾಗಿರುತ್ತದೆಯೋ, ಅವರ ಮೇಲೆ ಲಕ್ಷ್ಮೀ ಕೃಪೆ ತೋರಿಸುತ್ತಾಳೆ. ಮತ್ತು ಯಾರ ಮೇಲೆ ಲಕ್ಷ್ಮೀ ಕೃಪೆ ತೋರಿಸುತ್ತಾಳೋ, ಅವರು ಯಾವಾಗಲೂ ಸುಖವಾಗಿರುತ್ತಾರೆ.
ಮೂರನೇಯ ಕೆಲಸ, ನಿಮ್ಮ ಊಟಕ್ಕೂ ಮುನ್ನ ಗೋವಿಗೆ ಮತ್ತು ನಾಯಿಗಳಿಗೆ ಊಟ ತೆಗೆದಿಡುವುದು. ಮತ್ತು ಅನ್ನ ಊಟ ಮಾಡುವ ಮುನ್ನ ದೇವರಿಗೆ ನೆನೆಯುವುದು. ಧನ್ಯವಾದ ಹೇಳುವುದು. ಇವೆಲ್ಲ ಪುಣ್ಯದ ಕೆಲಸಗಳು. ನೀವು ತಿನ್ನುವ ಆಹಾರವನ್ನು ಪ್ರಾಣಿ, ಪಕ್ಷಿಗಳ ಜೊತೆ ಹಂಚಿ ತಿಂದರೆ, ನಿಮಗೆ ಪುಣ್ಯ ಲಭಿಸುತ್ತದೆ. ಮತ್ತು ನೀವು ಯಾವಗಲೂ ಸುಖಿಗಳಾಗಿರುತ್ತೀರಿ.
ಈ 5 ಕೆಲಸ ಮಾಡುವ ಮನುಷ್ಯರು ಪುಣ್ಯವಂತರಂತೆ..
ನಾಲ್ಕನೇಯ ಕೆಲಸ, ಅನ್ನದಾನ. ಈ ಬಗ್ಗೆ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಹಸಿದವರಿಗೆ ಅನ್ನ ನೀಡುವು ಮಹಾಪಂಚಪುಣ್ಯಗಳಲ್ಲೊಂದು. ಹಸಿದವನು ಮನುಷ್ಯನೇ ಆಗಬೇಕಿಲ್ಲ. ಪ್ರಾಣಿ ಪಕ್ಷಿಗಳಾದರೂ ಸರಿ. ಅವುಗಳಿಗೆ ನಿಮ್ಮ ಕೈಲಾದಷ್ಟು ಆಹಾರ ಹಾಕಿ. ಇದರಿಂದ ನೀವು ಜೀವನದಲ್ಲಿ ಸುಖಿಯಾಗಿರುತ್ತೀರಿ.
ಐದನೇಯ ಕೆಲಸ, ಸನಾತನ ಧರ್ಮದಲ್ಲಿ ಪ್ರತಿಯೊಬ್ಬರು ಧರ್ಮ ಗ್ರಂಥವನ್ನು ಓದಿ, ಅದನ್ನು ಅರ್ಥೈಸಿಕೊಳ್ಳಬೇಕು ಎನ್ನುವ ನಿಯಮವಿದೆ. ಯಾಕಂದ್ರೆ, ಅದರಲ್ಲಿ ಜೀವನ ಸಾರವನ್ನು ಹೇಳಲಾಗಿದೆ. ಅದನ್ನು ಓದಿ ಅರ್ಥೈಸಿಕೊಳ್ಳಬೇಕು. ಹಾಗೆ ಮಾಡಿದ್ದಲ್ಲಿ, ನಮ್ಮ ಜೀವನದಲ್ಲಿ ಬರುವ ಕಷ್ಟವನ್ನು ಎದುರಿಸುವ ಸಾಮರ್ಥ್ಯ ನಮಗೆ ಬರುತ್ತದೆ. ಮತ್ತು ಇದರಿಂದ ನಮ್ಮ ಜೀವನ ನೆಮ್ಮದಿಯಾಗಿರುತ್ತದೆ.