ಪ್ರತಿದಿನ ಚಪಾತಿ, ರೊಟ್ಟಿ, ತಿಂದು ತಿಂದು ಬೋರ್ ಆಗಿದ್ರೆ, ನೀವು ಪರೋಠಾವನ್ನ ಟ್ರೈ ಮಾಡಬಹುದು. ಹಾಗಾಗಿ ನಾವಿಂದು ಮೆಂತ್ಯೆ ಸೊಪ್ಪು ಮತ್ತು ಆಲೂ ಸೇರಿಸಿ ಪರೋಠಾ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
2 ಬೇಯಿಸಿ ಮ್ಯಾಶ್ ಮಾಡಿದ ಆಲೂ, ಒಂದು ದೊಡ್ಡ ಕಪ್ ಗೋಧಿಹಿಟ್ಟು, ಒಂದು ಕಪ್ ತರಿತರಿಯಾಗಿ ಪೇಸ್ಟ್ ಮಾಡಿದ ಮೆಂತ್ಯೆ ಎಲೆ, ಕಾಲು ಕಪ್ ಮೊಸರು, ಅರ್ಧ ಚಮಚ ಖಾರದ ಪುಡಿ, ಚಿಟಿಕೆ ಅರಿಶಿನ, ಚಿಟಿಕೆ ಜೀರಿಗೆ ಮತ್ತು ವೋಮ, ಕೊಂಚ ಗರಂ ಮಸಾಲೆ ಪುಡಿ, ಇನ್ನೂ ಖಾರದ ಅವಶ್ಯಕತೆ ಇದ್ದರೆ, ಒಂದು ಸ್ಪೂನ್ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿಕೊಳ್ಳಿ. ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಅಗತ್ಯಕ್ಕೆ ತಕ್ಕಷ್ಟು ಉಪ್ಪು.
‘ನನಗೆ ಹೆಚ್ಚು ವರ್ಷ ಬದುಕಬೇಕು, ಆದರೆ ಎಷ್ಟು ವರ್ಷ ಬದುಕಿರುತ್ತೇನೋ ಗೊತ್ತಿಲ್ಲ’
ಮೊದಲು ಒಂದು ಮಿಕ್ಸಿಂಗ್ ಬೌಲ್‌ನಲ್ಲಿ ಹಿಟ್ಟು ಹಾಕಿ, ಅದಕ್ಕೆ ಬೇಯಿಸಿದ ಆಲೂ, ಮೆಂತ್ಯೆ ಎಲೆ, ಮೊಸರು, ಖಾರದ ಪುಡಿ, ಅರಿಶಿನ, ಜೀರಿಗೆ, ವೋಮ, ಗರಂ ಮಸಾಲೆ ಪುಡಿ, ಹಸಿಮೆಣಸಿನಕಾಯಿ ಪೇಸ್ಟ್, ತುಪ್ಪ ಇವಿಷ್ಟು ಸೇರಿಸಿ, ಹಿಟ್ಟನ್ನು ನಾದಿಕೊಳ್ಳಿ. ಇದನ್ನು ಇಪ್ಪತ್ತು ನಿಮಿಷ, ಕಾಟನ್ ಕ್ಲಾತ್ ಮುಚ್ಚಿ, ಬದಿಗಿರಿಸಿ.
ನಂತರ ಚಪಾತಿಯಾಕಾರದಲ್ಲಿ ಲಟ್ಟಿಸಿ, ಹುರಿದರೆ, ಆಲೂ ಮೇಥಿ ಪರೋಠಾ ರೆಡಿ. ಚಟ್ನಿ, ಸಾಸ್, ಬೆಣ್ಣೆಯೊಂದಿಗೆ ತಿಂದರೆ, ರುಚಿಯಾಗಿರತ್ತೆ.