Tuesday, October 14, 2025

Latest Posts

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ2

- Advertisement -

ಕಳೆದ ಭಾಗದಲ್ಲಿ ನಾವು ಗರುಡ ಪುರಾಣದಲ್ಲಿ ಹೇಳಲಾಗಿರುವ 4 ಕಹಿ ಸತ್ಯಗಳ ಬಗ್ಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ ಕಹಿ ಸತ್ಯಗಳ ಬಗ್ಗೆ ಹೇಳಲಿದ್ದೇವೆ..

ಈ ಖುಷಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿ.. ನಿಮ್ಮ ಜೀವನ ಉತ್ತಮವಾಗಿರುತ್ತದೆ..

ಐದನೇಯ ಸತ್ಯ ಲಿಮಿಟಿನಲ್ಲಿ ಊಟ ಮಾಡದಿದ್ದಲ್ಲಿ, ಆಯುಷ್ಯ ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಹೊಟೇಲ್‌ಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲದೇ, ಜನ ದುಡ್ಡು ಕೊಡಲಾಗದ ಕಾರಣ, ಮನೆಯಲ್ಲಿ ಗಂಜಿ ಬೇಯಿಸಿ ತಿನ್ನುತ್ತಿದ್ದರು. ಹಾಗಾಗಿ ಅವರು ಗಟ್ಟಿಮುಟ್ಟಾಗಿದ್ರು. ಆದ್ರೆ ಇಂದಿನ ಕಾಲದಲ್ಲಿ ರಾಶಿ ರಾಶಿ ಹೊಟೇಲ್‌ಗಳು ತಲೆ ಎತ್ತಿದೆ. ಆಹಾರದಲ್ಲಿ ಕಲಬೆರಕೆ ಕಂಡು ಬರುತ್ತಿದೆ. ಮನುಷ್ಯ ತಿನ್ನುವ ಲಿಮಿಟ್‌ ಕೂಡ ಹೆಚ್ಚಿಸಿಕೊಂಡಿದ್ದಾನೆ. ಆದ್ರೆ ಗರುಡ ಪುರಾಣದ ಪ್ರಕಾರ, ತಿನ್ನುವುದನ್ನು ಮಿತವಾಗಿಸದೇ ಇದ್ದಲ್ಲಿ, ನೀವು ಅನಾರೋಗ್ಯದಿಂದ ಬಳಲಬೇಕಾಗುತ್ತದೆ ಮತ್ತು ನಿಮ್ಮ ಆಯುಷ್ಯ ಕಡಿಮೆಯಾಗುತ್ತದೆ.

ಆರನೇಯ ಸತ್ಯ ತುಳಸಿಯ ಮಹತ್ವವನ್ನು ಹಿಂದೂ ಧರ್ಮದವರು ತಿಳಿಯಲೇಬೇಕು. ಹಿಂದೂಗಳಲ್ಲಿ ಪ್ರತೀ ನೈವೇದ್ಯವನ್ನೂ ಮಾಡುವಾಗಲೂ ತುಳಸಿಯನ್ನು ಬಳಸುತ್ತಾರೆ. ಹಾಗೆ ತುಳಸಿ ಬಳಸಿ ತಯಾರಿಸಿದ ನೈವೇದ್ಯವನ್ನ ಸೇವಿಸಿದ್ದಲ್ಲಿ, ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು, ಅದಕ್ಕೆ ಪ್ರತಿದಿನ ಪದ್ಧತಿ ಪ್ರಕಾರವಾಗಿ ನೀರು ಹಾಕಿದ್ದಲ್ಲಿ, ಅದು ಸಮೃದ್ಧವಾಗಿ ಬೆಳೆಯುತ್ತದೆ. ಮತ್ತು ತುಳಸಿಗಿಡ ಆರೋಗ್ಯಕರವಾಗಿದ್ದಲ್ಲಿ, ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ1

ಏಳನೇಯ ಸತ್ಯ ಏಕಾದಶಿ ವೃತವನ್ನ ಹಿಂದೂಗಳು ಮಾಡಲೇಬೇಕು. ಹೆಚ್ಚಿನ ಜನ ಏಕಾದಶಿ ವೃತವನ್ನ ಮಾಡುವುದಿಲ್ಲ. ಆದ್ರೆ ತಿಂಗಳಿಗೊಮ್ಮೆ ಬರುವ ಏಕಾದಶಿ ವೃತವನ್ನು ಮಾಡಿದ್ದಲ್ಲಿ, ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಅಲ್ಲದೇ, ನಿಮ್ಮ ಪುಣ್ಯ ಪ್ರಾಪ್ತಿಯಾಗುತ್ತದೆ.

- Advertisement -

Latest Posts

Don't Miss