ಕೆಲವು ವಿಷಯಗಳನ್ನು ನಾವು ಯಾರಲ್ಲಿಯೂ ಹೇಳುವಂತಿಲ್ಲ. ಯಾಕಂದ್ರೆ ಆ ಮಾತನ್ನೇ ಹಿಡಿದುಕೊಂಡು, ಅವರು ನಿಮ್ಮ ಮನಸ್ಸನ್ನು ನೋಯಿಸಬಹುದು. ಹಾಗಾಗಿ ತಂದೆ, ತಾಯಿ, ಮಡದಿ, ಪತಿ ಯಾರ ಬಳಿಯೂ ಕೂಡ ನೀವು ಕೆಲವು ವಿಷಯಗಳನ್ನು ಹೇಳುವ ಹಾಗಿಲ್ಲ. ಹಾಗಾದ್ರೆ ಎಂಥ ವಿಷಯಗಳನ್ನು ನಾವು ಯಾರಲ್ಲಿಯೂ ಹೇಳಬಾರದು ಅಂತಾ ಚಾಣಕ್ಯರು ಹೇಳಿದ್ದಾರೆಂದು ತಿಳಿಯೋಣ ಬನ್ನಿ..
ಆರೋಗ್ಯ ಸಮಸ್ಯೆ. ನಿಮಗೇನಾದ್ರೂ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಇದ್ದರೆ, ಅದು ನಿಮಗೊಬ್ಬರಿಗೆ ಗೊತ್ತಿರಲಿ. ನೀವು ನಿಮ್ಮ ಪರಿಚಯದ ವೈದ್ಯರ ಬಳಿ ಹೋಗಿ, ಆ ರೋಗಕ್ಕೆ ಮದ್ದು ತೆಗೆದುಕೊಳ್ಳಿ. ಆದರೆ ಜೀವಕ್ಕೆ ಕುತ್ತು ತರುವ ಸಮಸ್ಯೆ ಇದ್ದಲ್ಲಿ, ನೀವು ಮನೆಯವರ ಬಳಿ ಈ ಬಗ್ಗೆ ಮಾತನಾಡಿ, ವೈದ್ಯರ ಬಳಿ ಹೋಗಬೇಕಾಗುತ್ತದೆ. ಆದ್ರೆ ಅದು ಬರೀ ನಿಮ್ಮ ಮನೆ ಜನರಿಗಷ್ಟೇ ಗೊತ್ತಿರಲಿ. ಹೊರಗಿನವರಿಗಲ್ಲ. ಯಾಕಂದ್ರೆ ಹೊರಗಿನವರಿಗೆ ಈ ಬಗ್ಗೆ ಗೊತ್ತಾದರೆ, ಅವರು ಒಂದಕ್ಕೊಂದು ಸೇರಿಸಿ, ಡಂಗುರ ಸಾರಿ ಬಿಡುತ್ತಾರೆ.
ಲಕ್ಷ್ಮೀ ಸದಾ ನಿಮ್ಮ ಮನೆಯಲ್ಲಿರಬೇಕು ಅಂದ್ರೆ ನೀವು ಈ ಕೆಲಸವನ್ನು ಮಾಡಬೇಕು..
ಅದೇ ರೀತಿ ಪತಿ- ಪತ್ನಿ ಮಧ್ಯೆ ದೈಹಿಕ ಸಂಬಂಧ ಉತ್ತಮವಾಗಿರದಿದ್ದಲ್ಲಿ, ಅದನ್ನ ಯಾರಲ್ಲಿಯೂ ಹೇಳಬೇಡಿ. ಯಾಕಂದ್ರೆ ಪುರುಷನ ಬಗ್ಗೆ ಕೀಳಾಗಿ ಮಾತನಾಡಿ, ಪತ್ನಿಯ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು ಈ ಸಮಾಜ.
ಮನೆಯಲ್ಲಿ ಗಲಾಟೆಯಾದ ವಿಷಯ. ನಿಮ್ಮ ಮನೆಯಲ್ಲಿ ಪತಿ- ಪತ್ನಿ ಜಗಳ, ತಂದೆ ತಾಯಿಯೊಂದಿಗೆ ಜಗಳ, ಅಣ್ಣ ತಂಗಿ ಜಗಳ, ಹೀಗೆ ಯಾರೊಂದಿಗಾದ್ರೂ ಜಗಳವಾಗಬಹುದು. ಅದನ್ನು ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ಹೇಳಿಕೊಳ್ಳಬೇಡಿ. ಯಾಕಂದ್ರೆ ಇಂದು ಜಗಳವಾಗತ್ತೆ, ನಾಳೆ ಸರಿಯಾಗತ್ತೆ. ಆದ್ರೆ ನೀವು ಬೇರೆಯವರಿಗೆ ಹೇಳಿದ ಮಾತು ಹಾಗೆ ಇರುತ್ತದೆ. ಅವರು ನಿಮ್ಮ ಬಗ್ಗೆ ತಮಾಷೆ ಮಾಡಿ, ಇನ್ನೊಬ್ಬರೊಂದಿಗೆ ಈ ಮಾತನ್ನು ಹಂಚಿಕೊಳ್ಳುತ್ತಾರೆ. ಆಗ ನಿಮ್ಮ ಮನೆಯ ಮರ್ಯಾದೆ ಹೋಗುತ್ತದೆ. ಹಾಗಾಗಿ ನಿಮ್ಮ ಮನೆಯ ಜಗಳದ ಬಗ್ಗೆ ಇನ್ನೊಬ್ಬರಲ್ಲಿ ಹೇಳಬೇಡಿ.
ಈ ಮೂರು ಜನರಿಂದ ದೂರವಿರಿ.. ಇಲ್ಲದಿದ್ದಲ್ಲಿ, ನಿಮ್ಮ ಜೀವನವೇ ಹಾಳಾಗುತ್ತದೆ..
ದಾನ, ಸಹಾಯ ಮಾಡಿದ ವಿಷಯ. ನೀವು ನಿರ್ಗತಿಕರಿಗೆ ಸಹಾಯ ಮಾಡಿರುತ್ತೀರಿ. ದಾನ ಮಾಡಿರುತ್ತೀರಿ. ಅಥವಾ ಸಂಬಂಧಿಕರಿಗೋ, ಸ್ನೇಹಿತರಿಗೋ ಸಹಾಯ ಮಾಡಿರುತ್ತೀರಿ. ಅದನ್ನ ಹೇಳಿಕೊಂಡು ತಿರುಗಬೇಡಿ. ಚಾಣಕ್ಯರ ಪ್ರಕಾರ, ನೀವು ದಾನ ಮಾಡಿದ ವಿಷಯವನ್ನು ಇತರರಿಗೆ ಹೇಳಿದ್ದಲ್ಲಿ, ಅದರ ಪುಣ್ಯ ಫಲ ಕಡಿಮೆಯಾಗುತ್ತದೆ. ಮತ್ತು ನಿಮ್ಮ ಬಗ್ಗೆ ಯಾರಿಗೂ ಒಳ್ಳೆ ಅಭಿಪ್ರಾಯ ಬರುವುದಿಲ್ಲ. ಇವನು ಮಾಡಿದ ಸಹಾಯವನ್ನು ಹೇಳಿಕೊಂಡು ತಿರುಗುತ್ತಾನೆಂದು ಹೇಳುತ್ತಾರೆ.