ಬಿಸಿ ಹಾಲಿನೊಂದಿಗೆ ಖರ್ಜೂರ ಸೇವನೆ ಮಾಡಿದ್ರೆ ಆರೋಗ್ಯವಾಗಲಿದೆ ಪರ್ಫೆಕ್ಟ್..

ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಸೇವಿಸಿ, ನಮ್ಮ ದಿನವನ್ನು ಶುರು ಮಾಡಬೇಕಂತೆ. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾಕಂದ್ರೆ ನಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಲು ಇದು ಸಹಕಾರಿಯಾಗಿದೆ. ಇದರೊಂದಿಗೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಹಾಲಿನೊಂದಿಗೆ ಖರ್ಜೂರ ತಿಂದರೆ, ನಿಮ್ಮ ಆರೋಗ್ಯ ಇನ್ನೂ ಉತ್ತಮವಾಗಿರುತ್ತದೆ. ಹಾಗಾದ್ರೆ ಇದರ ಪ್ರಯೋಜನವೇನು ಅಂತಾ ತಿಳಿಯೋಣ ಬನ್ನಿ..

ಬೆಳಿಗ್ಗೆ ಎದ್ದ ತಕ್ಷಣ ರಾತ್ರಿ ಹಾಲಿನಲ್ಲಿ ನೆನೆಸಿಟ್ಟ 2 ಖರ್ಜೂರವನ್ನು ಸೇವಿಸಬಹುದು. ಅಥವಾ ಖರ್ಜೂರ ತಿಂದು ಬಿಸಿ ಬಿಸಿ ಹಾಲನ್ನು ಕುಡಿಬಹುದು. ಅಥವಾ ಜೇನುತುಪ್ಪದಲ್ಲಿ, ತುಪ್ಪದಲ್ಲಿ ನೆನೆಸಿಟ್ಟ ಖರ್ಜೂರವನ್ನು ಸೇವಿಸಬಹುದು. ಆದರೆ ಎರಡೇ ಎರಡು ಖರ್ಜೂರವನ್ನು ಸೇವಿಸಿ. ಇದರಿಂದ ಅದ್ಭುತ ಪ್ರಯೋಜನವಾಗಲಿದೆ.

ರಾತ್ರಿ ಪಾದಕ್ಕೆ ತೆಂಗಿನೆಣ್ಣೆ ಮಸಾಜ್ ಮಾಡಿ.. ಆರೋಗ್ಯದಲ್ಲಾಗುವ ಬದಲಾವಣೆ ನೀವೇ ನೋಡಿ..

ಖರ್ಜೂರದ ಸೇವನೆಯಿಂದ ಪುರುಷತ್ವ ಸಮಸ್ಯೆ ಇದ್ದವರಿಗೆ ಶಕ್ತಿ ಬರುತ್ತದೆ. ಲೈಂಗಿಕ ಸಮಸ್ಯೆ ಇದ್ದವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಹಾಲು ಮತ್ತು ಎರಡು ಖರ್ಜೂರ ಸೇವಿಸಿದರೆ ಸಾಕು. ಇನ್ನು ನೀವು ಆಲಸ್ಯದಿಂದ ಇದ್ದರೆ, ಖರ್ಜೂರ ಹಾಲು ಸೇವಿಸಿದ್ದಲ್ಲಿ, ನಿಮ್ಮಲ್ಲಿ ಚೈತನ್ಯ ತುಂಬುತ್ತದೆ. ದಿನವಿಡೀ ಶಕ್ತಿಯುತರಾಗಿ ಕೆಲಸ ಮಾಡಲು ಇದು ಸಹಕಾರಿಯಾಗಿದೆ.

ಮೂಳೆಯ ಆರೋಗ್ಯ ಉತ್ತಮವಾಗುತ್ತದೆ. ವಯಸ್ಸಾದ ಹಾಗೆ ಕೈ ಕಾಲು ನೋವು ಶುರುವಾಗುತ್ತದೆ. ಈ ಸಮಸ್ಯೆ ಇದ್ದವರು ಖರ್ಜೂರವನ್ನು ಸೇವಿಸಲು ಶುರು ಮಾಡಿ. ಹೀಗೆ ಮಾಡುವುದರಿಂದ ಮೂಳೆ ಗಟ್ಟಿಯಾಗಿ, ಕೈ ಕಾಲು ನೋವಿನ ಸಮಸ್ಯೆ ದೂರವಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೇನುತುಪ್ಪದಲ್ಲಿ ಅಥವಾ ತುಪ್ಪದಲ್ಲಿ ನೆನೆಸಿಟ್ಟ ಖರ್ಜೂರವನ್ನು ತಿಂದು, ಬಿಸಿ ಹಾಲು ಅಥವಾ ಬಿಸಿ ನೀರು ಕುಡಿಯಿರಿ.

ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕರ..

ಹೊಟ್ಟೆ ಹಸಿವಾಗುತ್ತಿದ್ದು, ತುಂಬಾ ಹೊತ್ತಿನಿಂದ ಏನೂ ತಿಂದಿಲ್ಲವೆಂದಲ್ಲಿ, ಮೊದಲು ಎರಡು ಖರ್ಜೂರವನ್ನು ಸೇವಿಸಿ. ಯಾಕಂದ್ರೆ ಹೀಗೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಿಲ್ಲ. ವಾಂತಿ ಬರುವುದಿಲ್ಲ. ಹಾಗಾಗಿಯೇ ಮುಸ್ಲೀಂ ಬಾಂಧವರು ರಂಜಾನ್ ಉಪವಾಸ ಮುಗಿದ ಮೇಲೆ ಖರ್ಜೂರವನ್ನು ಮೊದಲು ಸೇವಿಸಿ, ನಂತರ ಉಪಹಾರ ಸೇವಿಸುತ್ತಾರೆ.

About The Author