ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆ ಕೂಡ ಆರೋಗ್ಯಕರ..

ಕಿತ್ತಳೆ ಹಣ್ಣು ತಿನ್ನುವುದರಿಂದ ಹಲವು ಆರೋಗ್ಯಕರ ಮತ್ತು ಸೌಂದರ್ಯಕರ ಪ್ರಯೋಜನಗಳಿದೆ. ಇದರಲ್ಲಿರುವ ವಿಟಾಮಿನ್ ಸಿ ಅಂಶ, ನಮ್ಮ ಆರೋಗ್ಯ ಉತ್ತಮವಾಗಿಡುವುದಲ್ಲದೇ, ತ್ವಚೆ ಸುಂದರವಾಗಿರುವಂತೆ ಮಾಡುತ್ತದೆ. ಆದ್ರೆ ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆಯೂ ಕೂಡ ಆರೋಗ್ಯಕರವಾಗಿದೆ. ಹಾಗಾದ್ರೆ ಕಿತ್ತಳೆ ಹಣ್ಣಿನ ಸಿಪ್ಪೆಯಿಂದಾಗುವ ಪ್ರಯೋಜನವೇನು..? ಅದನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗೆ ಮಾಡಿ..

ಕಿತ್ತಳೆ ಹಣ್ಣಿನ ಸಿಪ್ಪೆಯಿಂದ ಚಟ್ನಿ ತಯಾರಿಸಿ, ಅನ್ನ, ಚಪಾತಿ, ರೊಟ್ಟಿ, ದೋಸೆಯೊಟ್ಟಿಗೆ ತಿನ್ನಬಹುದು. ಕಿತ್ತಳೆ ಸಿಪ್ಪೆ, ಹಸಿ ಮೆಣಸು ಅಥವಾ, ಒಣ ಮೆಣಸು, ಕೊಂಚ ಹುಣಸೆಹಣ್ಣು, ಕೊಬ್ಬರಿ ತುರಿ, ಉಪ್ಪು ಸೇರಿಸಿ ರುಬ್ಬಿದ್ರೆ ಚಟ್ನಿ ರೆಡಿ. ಇದಕ್ಕೆ ಹೆಚ್ಚು ಉಪ್ಪು ಖಾರ ಹಾಕಬೇಡಿ. ಬೇಕಾದಷ್ಟು ಉಪ್ಪು ಖಾರ ಬಳಸಿ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯಕರ ಲಾಭಗಳಿದೆ.

ಹಿಂದಿನ ಕಾಲದ ಸುಂದರಿಯರು ಇದೇ ಸೌಂದರ್ಯ ಸಲಹೆಗಳನ್ನು ಪಾಲಿಸುತ್ತಿದ್ದರು..

ಜೀರ್ಣಕ್ರಿಯೆ ಉತ್ತಮಗೊಳಿಸಲು ಕಿತ್ತಳೆ ಸಿಪ್ಪೆಯ ಚಟ್ನಿ ಸೇವಿಸುವುದು ಒಳ್ಳೆಯದು. ಇದರಿಂದ ನೀವು ತಿಂದ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಿ, ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ. ಮತ್ತು ಯಾರಿಗೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆಯೋ, ಮಲ ಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆಯೋ, ಅವರು ಯಾವಾಗಲೂ ಆರೋಗ್ಯವಾಗಿರುತ್ತಾರೆ.

ಈ ಚಟ್ನಿ ಸೇವಿಸುವುದರಿಂದ ನಿಮ್ಮ ಬಾಯಿಯ ದುರ್ವಾಸನೆ ಹೋಗುತ್ತದೆ. ಎಷ್ಟೇ ಬ್ರಶ್ ಮಾಡಿದ್ರೂ ನಿಮ್ಮ ಬಾಯಿಯ ದುರ್ವಾಸನೆ ಹೋಗುತ್ತಿಲ್ಲವೆಂದಲ್ಲಿ, ನೀವು ಕಿತ್ತಳೆ ಸಿಪ್ಪೆಯ ಚಟ್ನಿ ಕೊಂಚ ಸೇವಿಸಿದ್ರೂ ಸಾಕು, ಇಡೀ ದಿನ ಅದರ ಪರಿಮಳ ನಿಮ್ಮ ಬಾಯಲ್ಲಿರುತ್ತದೆ. ಹೃದಯದ ಆರೋಗ್ಯಕ್ಕೆ, ಕ್ಯಾನ್ಸರ್ ತಡೆಗೆ ಕಿತ್ತಳೆ ಸಿಪ್ಪೆ ಉತ್ತಮ ಆಹಾರ.

About The Author