Thursday, February 6, 2025

Latest Posts

ಎಸಿ ರೂಮಲ್ಲಿ ಕುಳಿತು ಕೆಲಸ ಮಾಡುವವರು ನೋಡಲೇಬೇಕಾದ ಸ್ಟೋರಿ ಇದು..

- Advertisement -

ಆಫೀಸಿನಲ್ಲಿ ಕೆಲಸ ಮಾಡುವವರಲ್ಲಿ ಹಲವರು ಎಸಿಯಲ್ಲೇ ಕೆಲಸ ಮಾಡುತ್ತಾರೆ. ಬೇಸಿಗೆಯಲ್ಲಿ ಇದು ಕೂಲ್ ಎನ್ನಿಸಿದರೂ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದ್ರೆ ದಿನಪೂರ್ತಿ ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುವುದರಿಂದ ಆರೋಗ್ಯಕ್ಕಾಗುವ ದುಷ್ಪರಿಣಾಮಗಳೇನು ಅಂತಾ ತಿಳಿಯೋಣ ಬನ್ನಿ..

ಈ ರೀತಿ ಇನ್‌ಸ್ಟಂಟ್ ಆಗಿ ರಾಗಿ ದೋಸೆ ತಯಾರಿಸಿ ನೋಡಿ..

ಹೆಚ್ಚು ಹೊತ್ತು ಎಸಿಯಲ್ಲಿ ಕುಳಿತರೆ, ನಿಮ್ಮ ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ಇದರಿಂದ ಮುಖ ಸುಕ್ಕುಗಟ್ಟಿದಂತಾಗುತ್ತದೆ. ತ್ವಚೆ ಒಣಗುತ್ತದೆ. ಹಾಗಾಗಿ ತುಂಬಾ ಹೊತ್ತು ಎಸಿಯಲ್ಲಿ ಕುಳಿತು ಕೆಲಸ ಮಾಡಬಾರದು. ಹಾಗಾಗಿ ಎಸಿಯನ್ನ ನಾರ್ಮಲ್ ಮೋಡ್‌ನಲ್ಲಿ ಇಡಬೇಕು. ಇದರಿಂದ ಹೆಚ್ಚು ಸೆಕೆಯೂ ಆಗಬಾರದು, ಹೆಚ್ಚು ಚಳಿಯೂ ಆಗಬಾರದು. ಆ ರೀತಿ ನೀವು ಎಸಿ ಬಳಸಬೇಕು.

ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..

ಇನ್ನು ಹೆಚ್ಚು ಎಸಿ ಬಳಕೆಯಿಂದ ಶ್ವಾಸಕೋಶದ ಸಮಸ್ಯೆ ಉದ್ಭವಿಸುವ ಸಂಭವವಿರುತ್ತದೆ ಅಂತಾನೂ ಹೇಳಲಾಗಿದೆ. ಉಸಿರಾಟದ ಸಮಸ್ಯೆ ಆರಂಭವಾಗುತ್ತದೆ. ಅದರಲ್ಲೂ ನೀವು ಸರಿಯಾಗಿ ಎಸಿಯನ್ನು ಸ್ವಚ್ಛ ಮಾಡದಿದ್ದಲ್ಲಿ, ಅದು ನೀಡುವ ಅಶುದ್ಧ ಗಾಳಿಯಿಂದ ಹಲವು ರೋಗ ರುಜಿನಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಸಿ ಕಡಿಮೆ ಬಳಸುವುದರ ಜೊತೆಗೆ, ಅದನ್ನ ಸರಿಯಾಗಿ ಸ್ವಚ್ಛ ಮಾಡಿ.

- Advertisement -

Latest Posts

Don't Miss