ಕೆಲವರು ಬಡತನದಲ್ಲಷ್ಟೇ ನಿಯತ್ತಾಗಿರುತ್ತಾರೆ. ಶ್ರೀಮಂತಿಕೆ ಬಂದಾಗ, ಇತರರು ಮಾಡಿದ ಸಹಾಯ ಅವರಿಗೆ ಮರೆತು ಹೋಗುತ್ತದೆ. ಅದೇ ರೀತಿ, ಬಡತನವಿದ್ದಾಗ, ದೇವರಲ್ಲಿದ್ದ ನಂಬಿಕೆ, ಭಕ್ತಿ, ಎಲ್ಲವೂ ಕರಗುತ್ತ ಬರುತ್ತದೆ. ಹಾಗಾಗಿ ಚಾಣಕ್ಯರು ಶ್ರೀಮಂತಿಕೆ ಬಂದರೂ ಕೆಲ ವಿಷಯಗಳನ್ನು ಮರಿಯಬಾರದು ಅಂತಾ ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ವಿಷಯಗಳು ಅಂತಾ ತಿಳಿಯೋಣ ಬನ್ನಿ..
ಮೆಕ್ ಡೋನಾಲ್ಡ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಮಹಿಳೆ..
ಹಣ ಗಳಿಸುವುದಷ್ಟೇ ಅಲ್ಲ, ಉಳಿಸುವುದನ್ನೂ ಕಲಿಯಿರಿ. ನೀವು ಕಷ್ಟಪಟ್ಟು ದುಡಿದಿದ್ದರಿಂದಲೇ, ನಿಮಗೆ ದುಡ್ಡು ಬಂದಿರುತ್ತದೆ. ಶ್ರೀಮಂತಿಕೆ ಬಂದಿರುತ್ತದೆ. ಹಾಗಾಗಿ ಹೇಗೆ ಕಷ್ಟಪಟ್ಟು ದುಡಿದು ದುಡ್ಡು ಮಾಡಿರುತ್ತೀರೋ, ಅಂತೆಯೇ ಜಾಣ್ಮೆಯಿಂದ ಅದನ್ನು ಕೂಡಿಡುವುದನ್ನೂ ಕಲಿಯಿರಿ. ಯಾಕಂದ್ರೆ ಈ ಪ್ರಪಂಚದಲ್ಲಿ ಎಷ್ಟೇ ಶ್ರೀಮಂತರಿದ್ದರೂ ಕೂಡ, ಅವರು ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದಿಲ್ಲ. ಕೊಂಚ ಹಣ ಕೂಡಿಡುತ್ತಾರೆ. ಯಾಕಂದ್ರೆ ಎಷ್ಟೇ ಹಣವಿದ್ರೂ, ಕಷ್ಟಕಾಲ ಬಂದಾಗ, ಹಣ ಖರ್ಚಾಗಬಹುದು. ಹಾಗೆ ಖರ್ಚಾದ ಬಳಿಕ, ನಮ್ಮ ಬಳಿ ಇನ್ನೂ ದುಡ್ಡಿರಬೇಕು. ಇಲ್ಲವಾದಲ್ಲಿ ಕಷ್ಟವಾಗುತ್ತದೆ ಅನ್ನೋ ಮುಂದಾಲೋಚನೆ ಇರುವುದರಿಂದ ಎಷ್ಟೇ ಶ್ರೀಮಂತರಿದ್ದರೂ, ಹಣ ಕೂಡಿಡುವ ಬುದ್ಧಿವಂತಿಕೆ ನಮ್ಮಲ್ಲಿರಬೇಕು.
ಅಗತ್ಯಕ್ಕೆ ತಕ್ಕಷ್ಟೇ ಖರ್ಚು ಮಾಡಿ. ನೀವು ಕಷ್ಟಪಟ್ಟು ದುಡಿದ ಹಣವನ್ನು ನಿಮ್ಮ ಪತ್ನಿ ಮಕ್ಕಳು ಭರ್ಜರಿಯಾಗಿ ಖರ್ಚು ಮಾಡಬಹುದು. ಯಾಕಂದ್ರೆ ಅವರಿಗೆ ದುಡಿಮೆಯ ಕಷ್ಟ ಗೊತ್ತಿರುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಿಗಾದರೂ ನೀವು ಚಿಕ್ಕಂದಿನಿಂದಲೇ, ದುಡಿಮೆಯ ಬೆಲೆ ಕಲಿಸಬೇಕು. ದುಡ್ಡನ್ನು ಅವಶ್ಯಕತೆ ಇದ್ದರಷ್ಟೇ ಖರ್ಚು ಮಾಡಬೇಕು ಎಂದು ಹೇಳಿ ಕೊಡಿ. ಅಲ್ಲದೇ, ಮನೆಯಲ್ಲಿ ಯಾರೇ ಹೀಗೆ ಸುಮ್ಮ ಸುಮ್ಮನೆ ಹಣ ಖರ್ಚು ಮಾಡಿದ್ರೆ, ಅವರಿಗೆ ಬೈದಾದರೂ ಸರಿ, ದುಡ್ಡಿನ ಬೆಲೆ ತಿಳಿಸಿ. ಇಲ್ಲವಾದಲ್ಲಿ ನೀವು ದುಡಿದ ಹಾಗೆ, ಹಣ ನೀರಿನಂತೆ ಖರ್ಚಾಗುತ್ತದೆ. ಮತ್ತು ನಿಮಗೆ ಹಣ ಉಳಿಸಲು ಸಾಧ್ಯವಾಗುವುದಿಲ್ಲ.