ಪಲಾವ್ ಮಾಡುವಾಗ, ಕೆಲವರು ಅನ್ನ ಮಾಡುವಾಗಲೂ ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ ಇತ್ಯಾದಿ ಮಸಾಲೆ ಪದಾರ್ಥವನ್ನ ಸೇರಿಸುತ್ತಾರೆ. ಹಾಗೆ ಸೇರಿಸುವುದರಿಂದ ಟೇಸ್ಟ್ ಕೂಡಾ ಹೆಚ್ಚುತ್ತದೆ. ಆರೋಗ್ಯಕ್ಕೂ ಉತ್ತಮ. ಹಾಗಾದ್ರೆ ಮಸಾಲೆ ಪದಾರ್ಥವನ್ನು ಅಡುಗೆಯಲ್ಲಿ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಲಕ್ಷ್ಮೀ ದೇವಿ ಯಾಕೆ ಯಾವಾಗಲೂ ಶ್ರೀವಿಷ್ಣುವಿನ ಕಾಲು ಒತ್ತುತ್ತಾಳೆ..
ಮಸಾಲೆ ಪದಾರ್ಥಗಳು ಬರೀ ರುಚಿ ಹೆಚ್ಚಿಸುವುದಲ್ಲ, ಬದಲಾಗಿ ಆರೋಗ್ಯಕ್ಕೂ ಉತ್ತಮ. ಕೆಲವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಸಾಲೆ ಪದಾರ್ಥಗಳನ್ನು ಹಾಕಿ ಕಶಾಯ ಮಾಡಿ ಕುಡಿಯುತ್ತಾರೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆದ್ರೆ ಕೆಲವರಿಗೆ ಈ ಕಸಾಯ ಪ್ರತಿದಿನ ಕುಡಿದರೆ, ಉಷ್ಣವಾಗುತ್ತದೆ. ಅಂಥವರು ವಾರಕ್ಕೆರಡು ಬಾರಿ ಮಸಾಲೆ ಪದಾರ್ಥ ಹಾಕಿ ಕಶಾಯ ಮಾಡಿ ಕುಡಿದರೆ ಸಾಕು.
ಈ ಕಶಾಯ ಮಾಡಲು, ಎರಡು ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಚಕ್ಕೆ, ಒಂದು ಲವಂಗ, ಎರಡು ಕಾಳುಮೆಣಸು, ಕೊಂಚ ಜೀರಿಗೆ, ಎರಡು ಎಸಳು ತುಳಸಿ, ಚಿಕ್ಕ ತುಂಡು ಸ್ಟಾರ್ ಅನೈಸ್ ಇವೆಲ್ಲವನ್ನು ಕೊಚ್ಚ ಜಜ್ಜಿ ಪುಡಿ ಮಾಡಿ, ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಬೇಕಾದಲ್ಲಿ ಚಿಕ್ಕ ತುಂಡು ಕೆಂಪು ಕಲ್ಲುಸಕ್ಕರೆ ಹಾಕಿ. ವಾರಕ್ಕೊಮ್ಮೆ ಚಿಕ್ಕ ಲೋಟದಲ್ಲಿ ಈ ಕಶಾಯ ಕುಡಿಯಿರಿ. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪದೇ ಪದೇ ಶೀತವಾಗುವುದಿಲ್ಲ. ಜ್ವರ ಬರುವುದಿಲ್ಲ.
ಮುಟ್ಟಾದ ಸಂದರ್ಭದಲ್ಲಿ ಈ ಅಂಶ ಕಂಡುಬಂದರೆ, ಖಂಡಿತ ವೈದ್ಯರ ಬಳಿ ಹೋಗಿ..
ಜೀರ್ಣಕ್ರಿಯೆ ಸಮಸ್ಯೆ, ಲೈಂಗಿಕ ಸಮಸ್ಯೆ, ಸಂಧಿವಾತ, ಬಿಪಿ ಶುಗರ್ ಎಲ್ಲದಕ್ಕೂ ಮಸಾಲೆ ಪದಾರ್ಥ ಉತ್ತಮ ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ. ಇನ್ನು ನಿದ್ರಾಹೀನತೆ ಸಮಸ್ಯೆ ಇದ್ದವರಿಗೆ ಮಸಾಲೆ ಪದಾರ್ಥಗಳನ್ನು ಹಾಕಿ, ಪಲಾವ್ ತಯಾರಿಸಿಕೊಟ್ಟಲ್ಲಿ, ಉತ್ತಮ ನಿದ್ದೆ ಬರುತ್ತದೆ. ಹಾಗಂತ ಪ್ರತಿದಿನ ನೀವು ಮಸಾಲೆ ಪದಾರ್ಥ ಬಳಸುವಂತಿಲ್ಲ. ಇಲ್ಲವಾದಲ್ಲಿ ದೇಹದಲ್ಲಿ ಉಷ್ಣ ಹೆಚ್ಚಾಗಿ, ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.