ನಾವು ನಮ್ಮ ತ್ವಚೆ ಅಂದಗಾಣಿಸುವುದಕ್ಕೆ ಹಲವು ಫೇಸ್‌ಪ್ಯಾಕ್, ಫೇಸ್‌ವಾಶ್, ಜೆಲ್, ಕ್ರೀಮ್ ಇತ್ಯಾದಿಯನ್ನ ಬಳಸುತ್ತೇವೆ. ಆದ್ರೆ ನಿಮ್ಮ ದೇಹ ಆರೋಗ್ಯವಾಗಿದ್ರೆ, ನೀವು ಚೆಂದ ಕಾಣಿಸುತ್ತೀರಿ. ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡದಿದ್ದಲ್ಲಿ, ನೀವು ಚೆನ್ನಾಗಿ ಕಾಣಿಸಲು ಸಾಧ್ಯವೇ ಇಲ್ಲ. ಹಾಗಾಗಿ ಇಂದು ನಾವು ನೀವು ಚೆಂದಗಾಣಿಸಲು ಯಾವ ಡ್ರಿಂಕ್ ಕುಡಿಯಬೇಕು ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಚಿಕ್ಕ ತುಂಡು ಕ್ಯಾರೆಟ್, ಬೀಟ್ರೂಟ್, ಆ್ಯಪಲ್, ಸೌತೇಕಾಯಿ, ಅರ್ಧ ನಿಂಬೆಹಣ್ಣು.
ತಲೆ ಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳು..
ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ಆರೋಗ್ಯ, ಕೂದಲ ಆರೋಗ್ಯ, ತ್ವಚೆಯ ಆರೋಗ್ಯ ಉತ್ತಮವಾಗಿರುತ್ತದೆ. ಇನ್ನು ಬೀಟ್‌ರೂಟ್ ಸೇವನೆಯಿಂದ ನಿಮ್ಮ ಮುಖದಲ್ಲಿ ಹೊಳಪು ಕಾಣುತ್ತದೆ. ಇನ್ನು ಸೇಬುಹಣ್ಣಿನ ಸೇವನೆಯಿಂದ ನೀವು ಆರೋಗ್ಯವಾಗಿರುತ್ತೀರಿ. ಆದ್ರೆ ಅದನ್ನ ಸರಿಯಾಗಿ ತೊಳೆದು ತಿನ್ನಬೇಕು. ಸೌತೇಕಾಯಿ ಬಗ್ಗೆ ಹೇಳೋದಾದ್ರೆ, ಅತ್ಯಂತ ಆರೋಗ್ಯಕರ ತರಕಾರಿ ಇದಾಗಿದೆ. ಇದರ ಸೇವನೆಯಿಂದ ಸೌಂದರ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗತ್ತೆ. ಅಲ್ಲದೇ ತೂಕ ಕಡಿಮೆಯಾಗತ್ತೆ. ನಿಂಬೆ ಹಣ್ಣಿನಲ್ಲಿ ವಿಟಾಮಿನ್ ಸಿ ಇದ್ದು, ನಿಂಬೆ ಜ್ಯೂಸನ್ನ ಮಿತವಾಗಿ ಸೇವಿಸಿದ್ರೆ, ಅದು ಔಷಧಿಯಂತೆ ಕಾರ್ಯ ನಿರ್ವಹಿಸುತ್ತದೆ.
ಹೆಸರು ಕಾಳು ಬಳಸಿ ನಿಮ್ಮ ತ್ವಚೆ ಮತ್ತು ಕೂದಲನ್ನ ಚೆಂದಗೊಳಿಸಿಕೊಳ್ಳಿ..
ಮೊದಲು ಕ್ಯಾರೆಟ್, ಬೀಟ್ರೂಟ್, ಆ್ಯಪಲ್ ಮತ್ತು ಸೌತೇಕಾಯಿಯನ್ನು ಜ್ಯೂಸರ್‌ಗೆ ಹಾಕಿ ಜ್ಯೂಸ್ ತೆಗಿಯಿರಿ. ನಂತರ ಇದಕ್ಕೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿದ್ರೆ ಜ್ಯೂಸ್ ರೆಡಿ. ಪ್ರತಿದಿನ ಬೆಳಿಗ್ಗೆ ಈ ಜ್ಯೂಸ್ ಕುಡಿಯಿರಿ. ಎರಡು ವಾರ ಈ ಜ್ಯೂಸ್ ಕುಡಿದರೆ ಸಾಕು, ನಿಮ್ಮ ಮುಖದಲ್ಲಾಗುವ ಸುಂದರ ಬದಲಾವಣೆ ನೀವೇ ನೋಡುತ್ತೀರಿ. ಇದಕ್ಕೆ ಇನ್ನೇನು ಮಿಕ್ಸ್ ಮಾಡಕೂಡದು. ಉಪ್ಪು, ಸಕ್ಕರೆ, ಪೆಪ್ಪರ್, ಹೀಗೆ ಎನನ್ನೂ ಸೇರಿಸದೇ, ಜ್ಯೂಸ್ ತಯಾರಿಸಿ ಕುಡಿಯಿರಿ. ಇನ್ನು ನಿಮಗೆ ಇಲ್ಲಿ ಹೇಳಿರುವ ತರಕಾರಿಗಳಲ್ಲಿ ಯಾವುದಾದರೂ ತರಕಾರಿ ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.