Friday, September 20, 2024

Latest Posts

ದಾಬಾ ಸ್ಟೈಲ್ ಛೋಲೆ ರೆಸಿಪಿ..

- Advertisement -

ಯಾವಾಗಲೂ ಅನ್ನ, ಸಾರು, ಪಲ್ಯ ತಿಂದು ನಿಮಗೆ ಬೋರ್ ಬಂದಿದ್ರೆ, ಚಪಾತಿ, ಪೂರಿ ಜೊತೆಗೆ ತಿನ್ನೋಕ್ಕೆ ಛೋಲೆ ರೆಡಿ ಮಾಡಿ. ಇವತ್ತು ನಾವು ದಾಬಾ ಸ್ಟೈಲ್ ಛೋಲೆ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ಪ್ರತಿದಿನ 2 ಎಸಳು ಬೆಳ್ಳುಳ್ಳಿ ಸೇವನೆಯಿಂದ ನಿಮಗಾಗಲಿದೆ ಭರಪೂರ ಲಾಭ..

ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿದ ಕಪ್ಪು ಕಡಲೆ, ಬೇಯಿಸಿ ಪ್ಯೂರಿ ಮಾಡಿದ ಟೊಮೆಟೋ, ಮೂರು ಸ್ಪೂನ್ ಎಣ್ಣೆ, ಒಂದು ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಸ್ಟಾರ್ ಅನೈಸ್, ಅರ್ಧ ಸ್ಪೂನ್ ಜೀರಿಗೆ, ಎರಡು ಹಸಿಮೆಣಸಿನಕಾಯಿ, ಎರಡು ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, 1 ಸ್ಪೂನ್ ಕೊತ್ತೊಂಬರಿ ಪುಡಿ, ಅರ್ಧ ಸ್ಪೂನ್ ಜೀರಿಗೆ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, ಚಿಟಿಕೆ ಹಿಂಗು, ಕೊಂಚ ಕೊತ್ತೊಂಬರಿ ಸೊಪ್ಪು, ಅರ್ಧ ಸ್ಪೂನ್ ಕಸೂರಿ ಮೇಥಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು.

ಮಾಡು ವಿಧಾನ: ಮೊದಲು ಕೊಂಚ ಉಪ್ಪಿನ ಜೊತೆ ಕಡಲೆಯನ್ನು ಕುಕ್ಕರ್‌ಗೆ ಹಾಕಿ ಬೇಯಿಸಿ. ನಂತರ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು, ಸ್ಟಾರ್ ಅನೈಸ್, ಜೀರಿಗೆ, ಹಸಿಮೆಣಸಿನಕಾಯಿ, ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಖಾರದ ಪುಡಿ, ಕೊತ್ತೊಂಬರಿ ಕಾಳಿನ ಪುಡಿ( ಧನಿಯಾ ಪುಡಿ), ಜೀರಿಗೆ ಪುಡಿ, ಗರಂ ಮಸಾಲೆ, ಹಿಂಗು ಹಾಕಿ ಚೆನ್ನಾಗಿ ಬಾಡಿಸಿ.

ಈ ಜ್ಯೂಸ್ ಕುಡಿದ್ರೆ, ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ..

ನಂತರ ಟೊಮೆಟೋ ಪ್ಯೂರಿ ಸೇರಿಸಿಕೊಳ್ಳಿ, ಕೊಂಚ ನೀರು, ಉಪ್ಪು ಹಾಕಿ, 5ರಿಂದ 10 ನಿಮಿಷ ಮಂದ ಉರಿಯಲ್ಲಿ ಬೇಯಿಸಿ. ನಂತರ ಕೊಂಚ ಬೇಯಿಸಿದ ಕಡಲೆಕಾಳನ್ನು ಈ ಮಸಾಲೆಗೆ ಹಾಕಿ ಮ್ಯಾಶ್ ಮಾಡಿಕೊಳ್ಳಿ. ನಂತರ ಬೇಯಿಸಿದ ಅಷ್ಟೂ ಕಡಲೆ ಕಾಳನ್ನು ಸೇರಿಸಿ, ಮಿಕ್ಸ್ ಮಾಡಿ. ಇದಕ್ಕೆ ಕಸೂರಿ ಮೇಥಿ ಹಾಕಿ  2 ನಿಮಿಷ ಬೇಯಿಸಿ. ಕೊನೆಗೆ ಒಂದು ಸ್ಪೂನ್ ಬೆಣ್ಣೆ ಮತ್ತು ಕೊತ್ತೊಂಬರಿ ಸೊಪ್ಪನ್ನ ಹಾಕಿ ಮಿಕ್ಸ್ ಮಾಡಿದ್ರೆ, ಛೋಲೆ ರೆಡಿ.

- Advertisement -

Latest Posts

Don't Miss