Friday, November 14, 2025

Latest Posts

ಬೌದ್ಧ ಮತ್ತು ಜೈನ ಧರ್ಮ ಹಿಂದೂ ಧರ್ಮಕ್ಕಿಂತ ಹೇಗೆ ಭಿನ್ನ..?

- Advertisement -

ಕೆಲವರು ಬೌದ್ಧರು ಮತ್ತು ಜೈನರನ್ನು ಹಿಂದೂ ಧರ್ಮದವರು ಎಂದು ತಿಳಿದುಕೊಂಡಿದ್‌ದಾರೆ. ಕೆಲವರು ಹಿಂದೂಗಳ ಹಬ್ಬವನ್ನ ಕೂಡ ಆಚರಿಸುತ್ತಾರೆ. ಹೀಗಾಗಿ ಬುದ್ಧರು, ಜೈನರು, ಹಿಂದೂಗಳು ಒಂದೇ ಎಂದು ಅಂದುಕೊಂಡವರೇ ಹೆಚ್ಚು. ಆದ್ರೆ ಈ ಧರ್ಮಗಳ ಪದ್ಧತಿಗಳ ಮಧ್ಯೆ ಹಲವಾರು ವ್ಯತ್ಯಾಸಗಳಿದೆ. ಹಾಗಾದ್ರೆ ಆ ವ್ಯತ್ಯಾಸಗಳೇನು ಅಂತಾ ತಿಳಿಯೋಣ ಬನ್ನಿ..

ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!

ಹಿಂದೂ ಧರ್ಮ ಪುರಾತನವಾದ ಧರ್ಮವಾಗಿದೆ. ಪೂಜೆ ಪುನಸ್ಕಾರ, ಮರುಜನ್ಮ, ಪೂರ್ವಜನ್ಮ, ಆತ್ಮ, ಪರಮಾತ್ಮ ಎಲ್ಲದರಲ್ಲೂ ನಂಬಿಕೆ ಇರುವ ಧರ್ಮವಾಗಿದೆ. ಹಿಂದೂಗಳಲ್ಲಿ ಊಟ ಮಾಡಲು ಯಾವುದೇ ಸಮಯದ ಅವಶ್ಯಕತೆ ಇಲ್ಲ. ಮುಸ್ಸಂಜೆ ಬಳಿಕವೂ ಊಟ ಮಾಡಬಹುದು. ಹಿಂದೂ ಧರ್ಮದಲ್ಲಿ ಕೆಲವರು ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಕೆಲವರು ತಿನ್ನುತ್ತಾರೆ. ಆಹಾರ ಸೇವನೆಗೆ ಯಾವುದೇ ರೀತಿಯ ನಿಷೇಧವಿಲ್ಲ.

ಜೈನ ಧರ್ಮವು ಭಾರತದಲ್ಲೇ ಹುಟ್ಟಿದ ಧರ್ಮವಾಗಿದೆ. ಜೈನ ಧರ್ಮದಲ್ಲಿ ನಿರಾಹಾರ, ನಿರ್ವಾಣವಾಗುವುದರಿಂದ ಮುಕ್ತಿ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇವರು ಹಿಂಸಾಚಾರವನ್ನು ವಿರೋಧಿಸುತ್ತಾರೆ. ಹಾಗಾಗಿ ಮಾಂಸಾಹಾರ ನಿಷಿದ್ಧ. ಈರುಳ್ಳಿ ಬೆಳ್ಳುಳ್ಳಿ, ಬೇಕರಿ ತಿಂಡಿ ನಿಷಿದ್ಧ. ಮುಸ್ಸಂಜೆ ಬಳಿಕ ಊಟ ಮಾಡುವುದಿಲ್ಲ. ಯಾಕಂದ್ರೆ ಮುಸ್ಸಂಜೆ ಬಳಿಕ ಹುಳ ಹುಪ್ಪಟೆಗಳು ಓಡಾಡುತ್ತದೆ. ಅವು ನಮ್ಮ ಆಹಾರಕ್ಕೆ ಸೇರಬಹುದು ಎಂಬ ಕಾರಣಕ್ಕೆ ಮುಸ್ಸಂಜೆ ಮುನ್ನವೇ ಊಟ ಮಾಡುತ್ತಾರೆ. ಕೆಲವರು ಬಾಯಿಗೆ ಯಾವುದೇ ಕೀಟ ಸೇರಬಾರದು ಎಂದು ಬಟ್ಟೆ ಅಥವಾ ಮಾಸ್ಕ್ ಧರಿಸುತ್ತಾರೆ.

ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..

ಬೌದ್ಧ ಧರ್ಮವು ಕೂಡ ಭಾರತದಲ್ಲೇ ಹುಟ್ಟಿದ ಧರ್ಮವಾಗಿದೆ. ನೇಪಾಳ, ಥೈಲ್ಯಾಂಡ್, ಸೇರಿ ಹಲವು ದೇಶಗಳಲ್ಲಿ ಬೌದ್ಧ ಧರ್ಮದ ಅನುಯಾಯಿಗಳಿದ್ದಾರೆ. ಹಿಂಸಾಚಾರವನ್ನು ಈ ಧರ್ಮ ವಿರೋಧಿಸುತ್ತದೆ.

- Advertisement -

Latest Posts

Don't Miss