ಮನುಷ್ಯ ಬದುಕುವುದಕ್ಕೆ ಕೆಲಸಗಳನ್ನು ಮಾಡುತ್ತಾನೆ. ದೇಹ ಸುಖಕ್ಕಾಗಿ, ದೇಹದ ಆಯಾಸ ಕಡಿಮೆ ಮಾಡಲು ಕೆಲ ಕೆಲಸಗಳನ್ನು ಮಾಡುತ್ತಾನೆ. ಆದ್ರೆ ವಿಷ್ಣು ಪುರಾಣದ ಪ್ರಕಾರ, 5 ಕೆಲಸಗಳನ್ನು ಅಗತ್ಯಕ್ಕಿಂತ ಹೆಚ್ಚು ಮಾಡುವುದರಿಂದ ಬೇಗ ಸಾವು ಸಂಭವಿಸುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಯಾವುದು ಆ ಕೆಲಸ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಕೆಲಸ ಸ್ನಾನ. ಅರೇ ಸ್ನಾನ ಮಾಡಿದ್ರೆ, ದೇಹದಲ್ಲಿರುವ ಕೊಳೆ, ಕೀಟಾಣುಗಳೆಲ್ಲ ನಾಶವಾಗಿ, ನಾವು ಆರೋಗ್ಯವಾಗಿರುತ್ತೇವೆ ಅಂತಾ ನಾವು ಕೇಳಲ್ಪಟ್ಟಿದ್ದೇವೆ. ಆದ್ರೆ ಸ್ನಾನ ಮಾಡಿದ್ರೆ ಬೇಗ ಸಾವು ಸಂಭವಿಸುತ್ತಾ ಅಂತಾ ನಿಮಗೆ ಆಶ್ಚರ್ಯವಾಗಬಹುದು. ಸ್ನಾನ ಮಾಡಿದ್ರೆ ಸಾವು ಸಂಭವಿಸುವುದಿಲ್ಲ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಹೊತ್ತು ಮತ್ತು ಅಗತ್ಯಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡಿದ್ರೆ, ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೆ ಎಷ್ಟು ಲಾಭ ಉಂಟು ಗೊತ್ತಾ..?
ಎರಡನೇಯ ಕೆಲಸ ನಿದ್ದೆ. ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ಅವನಿಗೆ ಆರೋಗ್ಯಕರ ಆಹಾರದ ಜೊತೆ ಉತ್ತಮ ನಿದ್ದೆ ಕೂಡ ಮುಖ್ಯ. 8 ಗಂಟೆಗಳ ಕಾಲ ನಿದ್ದೆ ಮಾಡಿದ್ರೆ ಮನುಷ್ಯ ಆರೋಗ್ಯವಾಗಿರ್ತಾನೆ. ಆದ್ರೆ ನೀವು 8ರಿಂದ 9 ಗಂಟೆಗೂ ಹೆಚ್ಚು ಕಾಲ ಪ್ರತಿದಿನ ನಿದ್ದೆ ಮಾಡಿದ್ರೆ, ಅನಾರೋಗ್ಯ ಉಂಟಾಗಿ ಬೇಗ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.
ಮೂರನೇಯ ಕೆಲಸ ಸಂಭೋಗ. ಓರ್ವ ಸ್ತ್ರೀ ಮತ್ತು ಪುರುಷ ವಿವಾಹವಾದಾಗ, ಅವರಿಗೆ ಮಕ್ಕಳಾದಾಗಲೇ ಒಂದು ಕುಟುಂಬ ರಚನೆಯಾಗುತ್ತದೆ. ಹಾಗೆ ಮಕ್ಕಳಾಗಬೇಕು ಅಂದ್ರೆ, ಸಂಭೋಗ ಮಾಡುವುದು ಮುಖ್ಯ. ಕೆಲವರು ಕುಟುಂಬ ರಚನೆಗಾಗಿ ಮಾಡಿದ್ರೆ., ಇನ್ನು ಕೆಲವರು ದೇಹ ಸುಖಕ್ಕಾಗಿ ಸಂಭೋಗ ಮಾಡುತ್ತಾರೆ. ಯಾರು ಹೀಗೆ ಅಗತ್ಯಕ್ಕಿಂತ ಹೆಚ್ಚು ಬಾರಿ, ಸಂಭೋಗ ಮಾಡಿದ್ರೆ, ಬೇಗ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಗೋಡಂಬಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭ ಮತ್ತು ನಷ್ಟವೇನು..?
ನಾಲ್ಕನೇಯ ಕೆಲಸ, ಅಗತ್ಯಕ್ಕಿಂತ ಹೆಚ್ಚು ತಿನ್ನುವುದು. ಬದುಕಲು ತಿನ್ನುವ ಅವಶ್ಯಕತೆ ಇದೆ. ಆದ್ರೆ ತಿನ್ನೋಕ್ಕಂತಾನೆ ಬದುಕಿದ್ರೆ, ಅದರಿಂದ ಆರೋಗ್ಯ ಹಾಳಾಗೋದು ಗ್ಯಾರಂಟಿ. ಹಾಗಾಗಿ ನಮ್ಮ ದೇಹಕ್ಕೆ ಎಷ್ಟು ಆಹಾರದ ಅವಶ್ಯಕತೆ ಇದೆಯೋ, ಅಷ್ಟೇ ಆಹಾರ ಸೇವಿಸುವುದು ಉತ್ತಮ. ಆದ್ರೆ ನೀವು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸಿದ್ರೆ, ಅನಾರೋಗ್ಯ ಬಂದು ಬೇಗ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ.
ಐದನೇಯ ಕೆಲಸ, ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು. ನಾವು ತಿಂದ ಆಹಾರ ಜೀರ್ಣವಾಗಲು, ನಾವು ಆರೋಗ್ಯವಾಗಿರಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ. ಆದ್ರೆ ನೀವು ಆರೋಗ್ಯ ಉತ್ತಮವಾಗಿರಲಿ, ನನ್ನ ಮೈಕಟ್ಟು ಚೆಂದವಾಗಿರಲಿ ಎಂದು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದ್ದಲ್ಲಿ, ಅದು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು. ಮತ್ತು ನಿಮಗೆ ಸಾವು ಕೂಡ ಸಂಭವಿಸಬಹುದು. ಎಷ್ಟೋ ಜನ ಹೆಚ್ಚಿನ ಸಮಯ ಜಿಮ್‌ನಲ್ಲಿ ಕಳೆದು ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆಯೂ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹಾಗಾಗಿ ಎಷ್ಟು ಬೇಕೋ ಅಷ್ಟೇ ಕಸರತ್ತು ಮಾಡಿ.