ಡ್ರೈಫ್ರೂಟ್ಸ್ ಅಂದ್ರೆ ಎಲ್ಲರಿಗೂ ಇಷ್ಟ. ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಅಂಜೂರ, ಅಖರೂಟ್ ಇತ್ಯಾದಿ ಒಣಹಣ್ಣುಗಳು ರುಚಿಕರವೂ ಹೌದು, ಆರೋಗ್ಯಕರವೂ ಹೌದು. ಇಂಥ ಒಣಹಣ್ಣುಗಳಲ್ಲಿ ಅಖರೂಟ್ ಕೂಡ ಒಂದು. ಹಾಗಾಗಿ ನಾವಿಂದು ಅಖರೂಟ್ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ..
ಅಖರೂಟ್‌ನಲ್ಲಿ ಅತ್ಯುತ್ತಮ ಆರೋಗ್ಯಕರ ಗುಣಗಳಿರುವುದು ನಿಜ. ಆದ್ರೆ ನೀವು ಒಂದು ಅಖರೋಟನ್ನ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದ್ರೆ, ಆ ಆರೋಗ್ಯಕರ ಲಾಭ ದುಪ್ಪಟ್ಟಾಗುತ್ತದೆ. ನಿಮ್ಮ ಮಕ್ಕಳಿಗೆ ನೀವು ಈ ರೀತಿಯಾಗಿ ನೆನೆಸಿಟ್ಟ ಅಖರೋಟ್ ಕೊಟ್ಟರೆ, ಅವರ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಅವರು ಓದಿದ್ದನ್ನ ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ.
ಲವಂಗ ಸೇವನೆಯಿಂದ ಆಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..
ದೊಡ್ಡವರು ಕೂಡ ನೆನೆಸಿದ ಅಖರೋಟನ್ನ ತಿನ್ನಬಹುದು. ನಿಮಗೆ ಶುಗರ್ ಇಲ್ಲದಿದ್ದಲ್ಲಿ, ನೀವು ಈಗಿನಿಂದಲೇ ಬೆಳಿಗ್ಗೆ ನೆನೆಸಿಟ್ಟ ಅಖರೋಟನ್ನ ಖಾಲಿ ಹೊಟ್ಟೆಯಲ್ಲಿ ತಿನ್ನಿ. ಇದರಿಂದ ನಿಮಗೆ ಶುಗರ್ ಬರೋದಿಲ್ಲಾ. ಇನ್ನು ನೀವು ಶುಗರ್ ಪೇಶಂಟ್ ಆಗಿದ್ದಲ್ಲಿ, ನೆನೆಸಿಟ್ಟ ಅಖರೋಟ್ ತಿಂದಲ್ಲಿ. ನಿಮ್ಮ ಶುಗರ್ ಲೇವಲ್ ಕಂಟ್ರೋಲಿನಲ್ಲಿರುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನ ಹೆಚ್ಚು ಮಾಡತ್ತೆ. ನಿಮ್ಮ ತೂಕ ಕಂಟ್ರೋಲಿನಲ್ಲಿಡಲು ಕೂಡ ನೆನೆಸಿಟ್ಟ ಅಖರೋಟ್ ಸಹಾಯ ಮಾಡತ್ತೆ.
ಮಲಬದ್ಧತೆ ಸಮಸ್ಯೆ ಇದ್ದವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರು ಕುಡಿದು, ಒಂದು ನೆನೆಸಿಟ್ಟ ಅಖರೋಟ್ ಸೇವನೆ ಮಾಡಿದ್ದಲ್ಲಿ, ಮಲಮೂತ್ರ ವಿಸರ್ಜನೆ ಸರಿಯಾಗಿ ಆಗುತ್ತದೆ. ಇನ್ನು ಗರ್ಭಿಣಿಯರು ಪ್ರತಿದಿನಿ ಬೆಳಿಗ್ಗೆ ನೆನೆಸಿಟ್ಟ ಅಖರೋಟ್ ತಿನ್ನುವುದರಿಂದ ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಮಗು ಚುರುಕಾಗಿರುತ್ತದೆ. ಬುದ್ಧಿವಂತ ಮಗುವಾಗುತ್ತದೆ.
ಮೊಸರಿನೊಂದಿಗೆ ಈ 4 ಆಹಾರಗಳನ್ನು ಅಪ್ಪಿತಪ್ಪಿಯು ಸೇವಿಸಬೇಡಿ…!
ಇನ್ನು ನಿಮಗೆ ಅಖರೋಟ್ ತಿಂದಲ್ಲಿ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ. ಅಲ್ಲದೇ ದಿನಕ್ಕೆ ಒಂದು ಅಥವಾ ಎರಡು ಅಖರೋಟ್ ತಿಂದರೆ ಸಾಕು. ಅದಕ್ಕಿಂತ ಹೆಚ್ಚಿನ ಅಖರೋಟ್ ತಿಂದರೆ ಮಲಬದ್ಧತೆ ಸಮಸ್ಯೆ ಬರುವ, ಉಷ್ಣ ಹೆಚ್ಚಾಗುವ ಸಾಧ್ಯತೆ ಇದೆ.