ಇಂದಿನ ಕಾಲದಲ್ಲಿ ಕ್ಯಾನ್ಸರ್ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಲವರು ಈ ಮಾರಕ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಬರುವುದು ಹೆಚ್ಚಾಗಿದೆ. ಹಾಗಾದ್ರೆ ಇದಕ್ಕೆ ಪರಿಹಾರವೇನು..? ಯಾವ ಟಿಪ್ಸ್ ಅನುಸರಿಸಿದ್ರೆ, ಸ್ತನ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಸ್ತನ ಕ್ಯಾನ್ಸರ್ ಬರಲು ಕಾರಣವೇನು ಅಂತಾ ತಿಳಿಯೋಣ. ಮೊದಲನೇಯ ಕಾರಣ ಧೂಮಪಾನ ಮತ್ತು ಮದ್ಯಪಾನ ಸೇವನೆಯಿಂದಲೂ ಸ್ತನಕ್ಯಾನ್ಸರ್ ಬರುತ್ತದೆ. ಎರಡನೇಯದಾಗಿ ದೇಹದ ತೂಕ ಹೆಚ್ಚಾದಾಗಲೂ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಮೂರನೇಯದಾಗಿ ತಾಯಿಯಾದ ಮೇಲೂ ನೀವು ನಿಮ್ಮ ಮಗುವಿಗೆ ಸ್ತನಪಾನ ಮಾಡಿಸಲು ಹಿಂಜರಿದಾಗ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅಲ್ಲದೇ ಕೆಲವರ ಆಹಾರ ಪದ್ಧತಿಯಿಂದಲೂ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಸಿಹಿ ಗೆಣಸು ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ..
ಇನ್ನು ಸ್ತನ ಕ್ಯಾನ್ಸರ್ ನ ಲಕ್ಷಣಗಳೇನು ಅಂತಾ ನೋಡೋದಾದ್ರೆ, ಸ್ತನದಲ್ಲಿ ನೋವುಂಟಾಗುತ್ತದೆ. ಆಸ್ಥಳದಲ್ಲಿ ಪದೇ ಪದೇ ನೀರು ಬರುವುದು. ಸ್ತನದ ಊತವಾಗುವುದು. ಇದೆಲ್ಲ ಸ್ತನಕ್ಯಾನ್ಸರ್ ಬಂದ ಮೊದಲ ಲಕ್ಷಣಗಳಾಗಿದೆ.
ಇನ್ನು ಸ್ತನ ಕ್ಯಾನ್ಸರ್ ಬರದಂತೆ ಹೇಗೆ ತಡೆಯುವುದು ಅಂತಾ ಹೇಳಿದ್ರೆ, ನೀವು ತಾಯಿಯಾಗಿದ್ದಲ್ಲಿ, ನಿಮ್ಮ ಮಗುವಿಗೆ ನೀವೇ ಸ್ತನಪಾನ ಮಾಡಿಸಬೇಕು. ಅದನ್ನು ಬಿಟ್ಟು ನನ್ನ ಫಿಗರ್ ಹಾಳಾಗುತ್ತದೆ ಎಂದು, ನಿಮ್ಮ ಹಾಲು ಕೊಡದೇ, ಮಗುವಿಗೆ ಹೊರಗಿನ ಹಾಲು ಕೊಟ್ಟಿದ್ದಲ್ಲಿ, ನಿಮಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ.
ಹುರಿಗಡಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ..?
ಅಲ್ಲದೇ, ಯಾವಾಗಲೂ ಯಾವುದಾದರೂ ವ್ಯಾಯಾಮ, ಡಾನ್ಸ್, ಅಥವಾ ಮನೆ ಕೆಲಸದಲ್ಲಿ ನಿರತರಾಗಿರಿ. ಇದರಿಂದ ನೀವು ಬ್ಯುಸಿಯಾಗಿರುವುದರ ಜೊತೆಗೆ, ನಿಮ್ಮ ಮನಸ್ಸು ಚೈತನ್ಯದಾಯಕವಾಗಿರುತ್ತದೆ. ಇದರಿಂದ ನೀವು ಆರೋಗ್ಯವಂತರಾಗಿರುತ್ತೀರಿ. ಇಂಥವರಿಗೆ ಸ್ತನ ಕ್ಯಾನ್ಸರ್ ಬರುವುದು ಅಪರೂಪ. ಹಾಗಾಗಿ ಸುಮ್ಮನೆ ಕೂರದೇ ದೇಹಕ್ಕೆ ಕೆಲಸ ಕೊಡುತ್ತೀರಿ.
ವಾಕಿಂಗ್ ಮಾಡಿ, ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಿರಿ. ಲಿಫ್ಟ್ ಬಳಸುವ ಬದಲು, ಮೆಟ್ಟಿಲುಗಳನ್ನ ಹತ್ತಿಯೇ ಹೋಗಿ. ಜಂಕ್ ಫುಡ್ ಸೇವನೆ, ಮದ್ಯಪಾನ, ಧೂಮಪಾನ ಸೇವನೆ ಮಾಡುವುದನ್ನು ನಿಲ್ಲಿಸಿ. ಆರೋಗ್ಯಕರ ಆಹಾರವನ್ನ ಹೆಚ್ಚಾಗಿ ತಿನ್ನಿ. ಫ್ರೆಶ್ ಜ್ಯೂಸ್, ತರಕಾರಿ, ಹಣ್ಣಿನ ಸೇವನೆ ಮಾಡಿ. ನೆಮ್ಮದಿಯಾಗಿ ನಿದ್ದೆ ಮಾಡಿ. ಒಟ್ಟಾರೆಯಾಗಿ ಚಿಂತೆ ದೂರವಿರುವಂತೆ ನೋಡಿಕೊಳ್ಳಿ. ದೇಹದ ತೂಕ ಹೆಚ್ಚದಂತೆ ನೋಡಿಕೊಳ್ಳಿ.

