ನೀರು ಕುಡಿಯುವುದು ಎಷ್ಟು ಒಳ್ಳೆಯದು.. ದಿನಕ್ಕೆ ಎಷ್ಟು ನೀರು ಕುಡಿಯಬೇಕು, ಹೇಗೆ ನೀರು ಕುಡಿಯಬೇಕು.. ಇತ್ಯಾದಿ ವಿಷಯಗಳ ಬಗ್ಗೆ ನಾವಿು ನಿಮಗೆ ಈಗಾಗಲೇ ಹೇಳಿದ್ದೇವೆ. ಆದ್ರೆ ತಾಮ್ರದ ಲೋಟದಲ್ಲಿ ನೀರು ಕುಡಿದರೆ, ಅದರಿಂದ ಎಷ್ಟೊಳ್ಳೆ ಆರೋಗ್ಯ ಪರಿಣಾಮಗಳಾಗತ್ತೆ ಅಂತಾ ತಿಳಿಯೋಣ ಬನ್ನಿ..
ಮೊಸರನ್ನ ಬರೀ ರುಚಿಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು..
ಮೊದಲೆಲ್ಲ ಹಿರಿಯರು ರಾತ್ರಿಯೇ ತಾಮ್ರದ ಲೋಟದಲ್ಲಿ ನೀರು ತುಂಬಿಸಿಟ್ಟು, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುತ್ತಿದ್ದರು. ಇದರಿಂದ ಅವರು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತಿದ್ದರು. ಯಾಕಂದ್ರೆ ಅವರು ಸತತ 8 ಗಂಟೆಗಳ ಕಾಲ ಆ ನೀರನ್ನು ತಾಮ್ರದ ಲೋಟೆಯಲ್ಲಿರಿಸುತ್ತಿದ್ದರು. ಅದರ ಪ್ರಭಾವವೇ ಅವರ ಆರೋಗ್ಯಕ್ಕೆ ಕಾರಣವಾಗಿರುತ್ತಿತ್ತು.
ನೀವು 8 ಗಂಟೆಗಳ ಕಾಲ ನೀರನ್ನು ತಾಮ್ರದ ಲೋಟದಲ್ಲಿ ತುಂಬಿಸಿಟ್ಟು ನಂತರ ಕುಡಿದಾಗಲೇ ಅದರ ಪ್ರಭಾವ ಅತ್ಯುತ್ತಮವಾಗಿರುತ್ತದೆ. ಈ ನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿರುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗಿ, ಮಲಬದ್ಧತೆ ಸಮಸ್ಯೆ ಬರದಂತೆ ಇದು ತಡೆಗಟ್ಟುತ್ತದೆ.
ಹೊಟ್ಟೆಯಲ್ಲಿ ಹುಳವಾದ ಲಕ್ಷಣ ಮತ್ತು ಅದಕ್ಕೆ ಪರಿಹಾರ ಮಾಡುವ ರೀತಿ..
ನಿಮಗೆ ವಯಸ್ಸಾದ ಮೇಲೆ ಸಂಧಿವಾತ ಸಂಭವಿಸಬಾರದು ಅಂದ್ರೆ, 8 ಗಂಟೆಗಳ ಕಾಲ ತಾಮ್ರದ ಲೋಟದಲ್ಲಿಟ್ಟ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಅದು ಕೂಡ ಕುಳಿತ ನೀರನ್ನು ಕುಡಿಯಬೇಕು. ಹೀಗೆ ಮಾಡಿದ್ರೆ ನಿಮಗೆ ಸಂಧಿವಾತ ಸಮಸ್ಯೆ ಬರುವುದಿಲ್ಲ. ಅಲ್ಲದೇ ನೀವು ವಯಸ್ಸಾದರೂ, ಯಂಗ್ ಆಗಿ ಕಾಣಬೇಕು ಅಂದ್ರೆ, ತಾಮ್ರದ ಲೋಟದಲ್ಲಿ ನೀರು ಕುಡಿಯಬೇಕು. ಇದರಿಂದ ನಿಮ್ಮ ತ್ವಚೆ ಸುಂದರವಾಗಿ, ಆರೋಗ್ಯವಾಗಿರುತ್ತದೆ.
ನೀವು ತೂಕ ಇಳಿಸಿಕೊಳ್ಳಬೇಕು. ಸಣ್ಣಗಾಗಬೇಕು ಅಂತಾ ಇದ್ರೆ, ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ತಾಮ್ರದ ಲೋಟದಲ್ಲಿರಿಸಿದ ನೀರನ್ನ ಕುಡಿಯಿರಿ. ಇದು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡಿ, ತೂಕ ಇಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಪದೇ ಪದೇ ಜ್ವರ ಬರದ ಹಾಗೆ ಮಾಡುತ್ತದೆ.




