Monday, April 14, 2025

Latest Posts

ಬಿಗ್‌ಬಾಸ್‌ನಲ್ಲಿ ಸಿಕ್ಕ ದುಡ್ಡನ್ನ ಏನ್ ಮಾಡ್ತೀರಾ ಅಂತಾ ಕೇಳಿದ್ದಕ್ಕೆ ರೂಪಿ ಏನಂದ್ರು ಗೊತ್ತಾ..?

- Advertisement -

ಬಿಗ್‌ಬಾಸ್ ಕನ್ನಡ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾವು ಗೆದ್ದ ಹಣವನ್ನ ಏನು ಮಾಡ್ತಾರೆ ಅಂತಾ ಹೇಳಿದ್ದಾರೆ.

ನಾನು ಬಿಗ್‌ಬಾಸ್ ಫಿನಾಲೆ ಸ್ಟೇಜ್‌ ಮೇಲೂ ಹೇಳಿದ್ದೆ. ದುಡ್ಡು ಈಗ ಖರ್ಚಾಗಬಹುದು. ಆದ್ರೆ ನನಗೆ ಕಪ್ ಬೇಕು. ಅದು ಮುಖ್ಯ ಅಂತಾ ಹೇಳಿದ್ದೆ. ಯಾಕಂದ್ರೆ ದುಡ್ಡು ಇನ್ನು ಸ್ವಲ್ಪ ತಿಂಗಳಲ್ಲಿ ಖರ್ಚಾಗಬಹುದು. ಆದ್ರೆ ಆ ಟ್ರಾಫಿ, ಆ ಮೂಮೆಂಟ್, ಆ ಫೋಟೋಸ್ ಅದು ಮುಖ್ಯ. ನಾನು ಸಾಯುವವರೆಗೂ ಬಿಗ್‌ಬಾಸ್ ಕನ್ನಡ ಸೀಸನ್ 9 ಮತ್ತು ಬಿಗ್‌ಬಾಸ್ ಓಟಿಟಿ ವಿನ್ನರ್ ನಾನೇ, ಅದು ಯಾವತ್ತೂ ಮಾಸಿ ಹೋಗಲ್ಲಾ. ಅದು ನನಗೆ ಅಚೀವ್‌ಮೆಂಟ್ ಎಂದಿದ್ದಾರೆ ರೂಪೇಶ್.

60 ಲಕ್ಷ ಗೆದ್ದಿದ್ದು, ಅದರಲ್ಲಿ ಟ್ಯಾಕ್ಸ್ ಕಟ್ ಆಗಿ 40 ಬರಬಹುದು ಎಂದು ರೂಪೇಶ್ ಅಂದಾಜಿಸಿದ್ದಾರೆ. ಅದು ಕೂಡ ಒಂದೆರಡು ತಿಂಗಳು ಕಳೆದ ಬಳಿಕ ಬರುತ್ತದೆ. ನನ್ನದೊಂದು ದೊಡ್ಡ ಲೀಸ್ಟ್ ಇದೆ. ನನ್ನ ಬಟ್ಟೆಗೆ ಖರ್ಚಾಗಿದ್ದರ ಹಣ ಪಾವತಿಸಬೇಕು. ನನ್ನ ಸಿನಿಮಾ ತಂಡಕ್ಕೆ ಸಂಬಳ ಕೊಡಬೇಕು. ಇದಾದ ನಂತರ ಉಳಿದ ಸ್ವಲ್ಪ ಹಣದಲ್ಲಿ ನಾನು ಲೋನ್ ತೀರಿಸಬೇಕು. ಖಂಡಿತ ಸಮಾಜಮುಖಿ ಕೆಲಸ ಕೂಡ ಮಾಡುತ್ತೇನೆ ಎಂದು ರೂಪೇಶ್ ಹೇಳಿದ್ದಾರೆ.

‘ಮೊದ ಮೊದಲು ಕಿಚ್ಚ ಸುದೀಪ್ ಸರ್ ಬರ್ತಾರಂದ್ರೆ ಖುಷಿ ಆಗ್ತಿತ್ತು, ಆದ್ರೆ ಆಮೇಲೆ…’

- Advertisement -

Latest Posts

Don't Miss