ಮನೆಯಲ್ಲಿ ಮರಣವಾದಾಗ, ಅಡುಗೆ ಮಾಡದಿರಲು ಕಾರಣವೇನು..?

ಹಲವರ ಮನೆಯಲ್ಲಿ ಯಾರದ್ದಾದರೂ ಮರಣವಾದಾಗ, ಅವರ ಅಂತ್ಯಸಂಸ್ಕಾರವಾಗುವವರೆಗೂ ಮನೆಯಲ್ಲಿ ಒಲೆ ಉರಿಯುವುದಿಲ್ಲ. ಅಡಿಗೆ ಮಾಡುವುದಿಲ್ಲ. ಅಕ್ಕಪಕ್ಕದ ಮನೆಯವರು ಅಥವಾ ಸಂಬಂಧಿಕರು ಊಟ ತಂದು ಕೊಡುತ್ತಾರೆ. ಹಾಗಾದ್ರೆ ಯಾಕೆ ಮರಣ ಹೊಂದಿದವರ ಮನೆಯಲ್ಲಿ ಒಲೆ ಉರಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.. ಈ ರಾಶಿಯವರಿಗೆ ಜೀವನದಲ್ಲಿ ದೊಡ್ಡ ಬದಲಾವಣೆಗಳು..!

ಮನೆಯಲ್ಲಿ ಮರಣವಾದಾಗ ಅಡುಗೆ ಮಾಡದಿರಲು ಮುಖ್ಯವಾದ ಕಾರಣ ಏನಂದ್ರೆ ಆ ಮನೆಯ ಸದಸ್ಯರು ದುಃಖದಲ್ಲಿರುತ್ತಾರೆ. ಹೀಗಿರುವಾಗ, ಯಾರಿಗೆ ತಾನೇ ಅಡುಗೆ ಮಾಡಲು ಸಾಧ್ಯ..? ಮತ್ತು ಆ ಅಡಿಗೆಯನ್ನ ನೆಮ್ಮದಿಯಾಗಿ ಯಾರು ಕುಳಿತು ತಿನ್ನುತ್ತಾರೆ..? ಹಾಗಾಗಿ ಮರಣವಾದ ಮನೆಯಲ್ಲಿ ಒಲೆ ಉರಿಸುವುದಿಲ್ಲ. ಯಾರಾದರೂ ಊಟ ತಂದು ಕೊಟ್ಟರೂ, ಹೊಟ್ಟೆ ತುಂಬ ಉಣ್ಣುವ ಮನಸ್ಸು ಯಾರಿಗೂ ಇರುವುದಿಲ್ಲ.

ಇನ್ನು ಮರಣ ಹೊಂದಿದರೂ ಕೂಡ, ಆ ಮನೆಯವರು ಅಲ್ಲೇ ಅಡುಗೆ ಮಾಡಿ, ನೆಮ್ಮದಿಯಾಗಿ ಉಂಡರೆ, ಆ ಆತ್ಮಕ್ಕೆ ಕೋಪ ಬರುವ ಸಾಧ್ಯತೆ ಇರುತ್ತದೆ. ಮತ್ತು ಅದರಿಂದ ನಮಗೆ ತೊಂದರೆಯಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿಯೇ ಶವವನ್ನು ಸುಟ್ಟು, ಅಂತ್ಯಕ್ರಿಯೆ ಸಂಪೂರ್ಣವಾಗುವ ತನಕ ಮನೆಯಲ್ಲಿ ಒಲೆ ಉರಿಸುವುದಿಲ್ಲ. ಮನೆಗೆ ಬಂದು, ಎಲ್ಲರೂ ಸ್ನಾನ ಮಾಡಿ ಶುದ್ಧವಾಗಿ, ನಂತರವೇ ಒಲೆ ಉರಿಸಿ, ಅಡಿಗೆ ಮಾಡಲಾಗುತ್ತದೆ.

ಹಲ್ಲಿ ದೇಹದ ಯಾವ ಭಾಗದ ಮೇಲೆ ಬಿದ್ದರೆ ಶುಭ..? ಮತ್ತು ಅಶುಭ..?

ಇನ್ನು ಈ ಬಗ್ಗೆ ವೈಜ್ಞಾನಿಕ ಕಾರಣವೇನೆಂದರೆ, ಸತ್ತ ವ್ಯಕ್ತಿಯ ದೇಹದಿಂದ ಕೀಟಗಳು ಹೊರಬರುತ್ತದೆ. ಅಂಥ ಕೀಟಗಳು ಇರುವ ಜಾಗದಲ್ಲಿ ನೀವು ಅಡುಗೆ ಮಾಡಿ ತಿಂದರೆ, ರೋಗ ರುಜಿನಗಳು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಶವ ಸಂಸ್ಕಾರ ಮಾಡಿದ ಮೇಲೆ ಶುದ್ಧವಾಗಬೇಕು. ಶವ ಹೋದ ಬಳಿಕ, ಮನೆಯನ್ನು ತುಳಸಿ ನೀರು, ಗೋಮೂತ್ರದಿಂದ ಸ್ವಚ್ಛಗೊಳಿಸಬೇಕು ಅಂತಾ ಹೇಳುತ್ತಾರೆ.

About The Author