ಸಂಕ್ರಾಂತಿ ಹಬ್ಬ ಸಮೀಪದಲ್ಲಿದೆ. ಇನ್ನು ಒಂದು ವಾರದಲ್ಲೇ ಸಂಕ್ರಾಂತಿ ಹಬ್ಬವಿದೆ. ಅಂಥಾದ್ರಲ್ಲಿ ಎಳ್ಳು ಬೆಲ್ಲ ಹಂಚೋಕ್ಕೆ ಅಂತಾನೇ ಎಲ್ಲರೂ ಕಾತರದಿಂದ ಇರ್ತೀರಾ. ಆದ್‌ರೆ ನೀವು ಮಾರುಕಟ್ಟೆಯಿಂದ ಎಳ್ಳು ಬೆಲ್ಲ ತಂದು ಹಂಚೋ ಬದಲು, ಮನೆಯಲ್ಲಿ ಎಳ್ಳು ಬೆಲ್ಲ ತಯಾರಿಸಿ, ಸವಿಯಲೂಬಹುದು, ಹಂಚಲೂಬಹುದು. ಹಾಗಾದ್ರೆ ಅದನ್ನ ಮಾಡುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಶೇಂಗಾ, ಒಂದು ಕಪ್ ಹುರಿಗಡಲೆ ಅಥವಾ ಪುಟಾಣಿ, ಸಣ್ಣಗೆ ಕಟ್ ಮಾಡಿದ ಒಣಕೊಬ್ಬರಿ, ಒಂದು ಕಪ್ ಎಳ್ಳು, ಬೇಕಾದಷ್ಟು ಬೆಲ್ಲ.
ಮಾಡುವ ವಿಧಾನ: ಮೊದಲು ಎಳ್ಳು, ಶೇಂಗಾ, ಕೊಬ್ಬರಿ, ಪುಟಾಣಿ ಎಲ್ಲವನ್ನೂ ಎಣ್ಣೆ ತುಪ್ಪ ಏನೂ ಹಾಕದೇ, ಸಪರೇಟ್ ಆಗಿ ಹುರಿಯಿರಿ. ಶೇಂಗಾ ಮತ್ತು ಪುಟಾಣಿಯನ್ನ ಕೈಯಿಂದ ಪುಡಿ ಮಾಡಿ ಬೇಳೆ ಸಪರೇಟ್ ಮಾಡಿ. ನಂತರ ಬೆಲ್ಲವನ್ನು ಪುಡಿ ಮಾಡಿಕೊಂಡು, ಆ ಪುಡಿಗೆ ಕೊಬ್ಬರಿ, ಶೇಂಗಾ, ಎಳ್ಳು, ಪುಟಾಣಿಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ ಎಳ್ಳು ಬೆಲ್ಲ ರೆಡಿ..
ಮೆಹೆಂದಿ ಜೊತೆ ಇದನ್ನ ಮಿಕ್ಸ್ ಮಾಡಿದ್ರೆ, ನಿಮ್ಮ ಕೂದಲ ಕಲರ್ ಸೂಪರ್ ಆಗಿರತ್ತೆ ನೋಡಿ..