ನೆಲ್ಲಿಕಾಯಿ ಅಂದ್ರೆ ಹಲವರಿಗೆ ಇಷ್ಟ. ಹುಳಿಯನ್ನ ಇಷ್ಟಪಡುವವರು ನೆಲ್ಲಿಕಾಯಿಯನ್ನ ಇಷ್ಟ ಪಟ್ಟೇ ಪಡ್ತಾರೆ. ರಾಜಾ ನೆಲ್ಲಿಕಾಯಿಯನ್ನ ಉಪ್ಪಿನೊಂದಿಗೆ ತಿಂದ್ರೆ ಸೂಪರ್ ಆಗಿರತ್ತೆ. ಆದ್ರೆ ಕಾಡು ನೆಲ್ಲಿಕಾಯಿ ತಿನ್ನೋದು ಅಂದ್ರೆ ಹಲವರು ದೂರ ಸರಿತಾರೆ. ಯಾಕಂದ್ರೆ ಕಾಡು ನೆಲ್ಲಿಕಾಯಿ ರಾಜಾ ನೆಲ್ಲಿಕಾಯಿಯಷ್ಟು ಟೇಸ್ಟಿಯಾಗಿ ಇರೋದಿಲ್ಲ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಊಟವಾದ ಬಳಿಕ ಸಿಹಿ ತಿನ್ನುವ ಪದ್ಧತಿ ಆರೋಗ್ಯಕ್ಕೆಷ್ಟು ಮಾರಕ ಗೊತ್ತಾ..?
ನೆಲ್ಲಿಕಾಯಿಯಲ್ಲಿ ಆ್ಯಂಟಿ ಏಜಿಂಗ್ ಪ್ರಾಪರ್ಟೀಸ್ ಇದೆ. ಹಾಗಾಗಿ ಪ್ರತಿದಿನ ಒಂದು ನೆಲ್ಲಿಕಾಯಿ ತಿಂದ್ರೆ, ನೀವು ವಯಸ್ಸಾದ ಮೇಲೂ ಯಂಗ್ ಆಗಿ ಕಾಣುವಂತೆ ಇದು ಮಾಡುತ್ತದೆ. ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕು. ವಯಸ್ಸಾದ ಮೇಲೂ ನಿಮಗೆ ಸರಿಯಾಗಿ ಕಣ್ಣು ಕಾಣಬೇಕು ಅಂದ್ರೆ ನೀವು ಈಗಿನಿಂದಲೇ ಪ್ರತಿದಿನ ಒಂದು ನೆಲ್ಲಿಕಾಯಿ ತಿನ್ನೋಕ್ಕೆ ಶುರು ಮಾಡಿ. ಇದು ನಿಮ್ಮ ಕಣ್ಣಿನ ಆರೋಗ್ಯ ಉತ್ತಮವಾಗಿಡುತ್ತದೆ. ದೃಷ್ಟಿ ದೋಷ ಬರದಂತೆ ತಡೆಗಟ್ಟುತ್ತದೆ.
ವಾತ, ಪಿತ್ತ, ಕಫ ಮೂರು ದೋಷವನ್ನು ಬ್ಯಾಲೆನ್ಸ್ ಮಾಡುವ ಶಕ್ತಿ ನೆಲ್ಲಿಕಾಯಿಯಲ್ಲಿದೆ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನ ಸಮಸ್ಯೆ, ಹೆಚ್ಚು ಬ್ಲೀಡಿಂಗ್ ಆಗುವ ಸಮಸ್ಯೆ ಇದ್ರೆ, ಅದನ್ನ ಕೂಡ ಪರಿಹರಿಸುವಲ್ಲಿ ನೆಲ್ಲಿಕಾಯಿ ಸಹಕರಿಸುತ್ತದೆ. ಶುಗರ್ ಇದ್ದವರು ನೆಲ್ಲಿಕಾಯಿ ತಿಂದ್ರೆ, ಶುಗರ್ ಲೆವಲ್ ಕಂಟ್ರೋಲಿನಲ್ಲಿಡಬಹುದು.
ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಟಿಪ್ಸ್..
ಪುರುಷರಲ್ಲಿ ಶಕ್ತಿ ಹೆಚ್ಚಿಸಲು ನೆಲ್ಲಿಕಾಯಿ ಸಹಾಯ ಮಾಡುತ್ತದೆ. ಅಲ್ಲದೇ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆಲ್ಲಿಕಾಯಿ ತಿನ್ನಬೇಕು. ಗಂಟಿನಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅದನ್ನ ನಿವಾರಿಸುವಲ್ಲಿಯೂ ನೆಲ್ಲಿಕಾಯಿ ಸಹಾಯಕವಾಗಿದೆ. ನೆಲ್ಲಿಕಾಯಿ ಸೇವನೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಉತ್ತಮ ಕೊಲಸ್ಟ್ರಾಲ್ ಹೆಚ್ಚಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
ದೇಹದಲ್ಲಿ ಉಷ್ಣತೆ ಹೆಚ್ಚಿದಾಗ ನೆಲ್ಲಿಕಾಯಿ ಸೇವನೆ ಮಾಡಬೇಕು. ಅಲ್ಲದೇ ನಿಮಗೆ ಜ್ವರ ಬಂದಾಗ ನೆಲ್ಲಿಕಾಯಿ ಸೇವನೆ ಮಾಡುವುದು ಉತ್ತಮ. ಮೂಳೆ ಗಟ್ಟಿಯಾಗಲು ನೆಲ್ಲಿಕಾಯಿ ತಿನ್ನಬೇಕು. ಹಾಗಾಗಿಯೇ ಗರ್ಭಿಣಿಯರಿಗೆ ಮತ್ತು ಅಪಘಾತವಾದವರಿಗೆ ನೆಲ್ಲಿಕಾಯಿ ಸೇವಿಸಲು ಹೇಳುತ್ತಾರೆ. ನೀವು ಸುಂದರವಾಗಿ ಕಾಣಬೇಕು. ನಿಮ್ಮ ತ್ವಚೆ ಮತ್ತು ಕೂದಲು ಚೆಂದವಿರಬೇಕು ಅೞದ್ರೆ ನೆಲ್ಲಿಕಾಯಿ ಸೇವನೆ ಮಾಡಿ.

