Tuesday, November 4, 2025

Latest Posts

ಹೊಸ ಚಿತ್ರಕ್ಕೆ ರಜನಿ ಗ್ರೀನ್ ಸಿಗ್ನಲ್…!

- Advertisement -

Film News:

ಸೂಪರ್‌ ಸ್ಟಾರ್‌ ರಜನಿಕಾಂತ್‌ ʻಜೈಲರ್‌ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಿರ್ದೇಶಕ ಟಿ.ಜೆ.ಜ್ಞಾನವೇಲ್ ಹೇಳಿರುವ ಕಥೆಗೆ ರಜನಿ ಗ್ನೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.ʻಜೈಲರ್‌ʼ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ ಅವರು ಕಾಣಿಸಿಕೊಂಡಿದ್ದು, ಅವರ ಲುಕ್‌ ರಿವೀಲ್‌ ಆಗಿತ್ತು. ಮಾಲಿವುಡ್‌ ನಟ ಮೋಹನ್‌ಲಾಲ್ ಕೂಡ ಚಿತ್ರದಲ್ಲಿ ಇದ್ದಾರೆ.ಸನ್ ಪಿಕ್ಚರ್ಸ್ ಬೆಂಬಲದೊಂದಿಗೆ ಮೂಡಿ ಬರುತ್ತಿರುವ ಜೈಲರ್ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ.

ಜೈಲರ್ ನಂತರ ಲೈಕಾ ಪ್ರೊಡಕ್ಷನ್ಸ್‌ನ ಎರಡು ಚಿತ್ರಗಳಿಗೆ ರಜನಿಕಾಂತ್‌ ಸಹಿ ಮಾಡಿದ್ದಾರೆ.ಇದೀಗ ʻಜೈಲರ್‌ʼ ನಂತರ ಯಾವ ಸಿನಿಮಾವನ್ನು ರಜನಿ ಮೊದಲು ಮಾಡಲಿದ್ದಾರೆ ಎಂದು ಸಿನಿರಸಿಕರಿಲ್ಲಿ ಕುತೂಹಲ ಹೆಚ್ಚಾಗಿದೆ.

- Advertisement -

Latest Posts

Don't Miss