Sandalwood: ಲಹರಿ ಸಂಸ್ಥೆಯ ಸಂಸ್ಥಾಪಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಆಡಿಯೋ ಸಂಸ್ಥೆಯಲ್ಲಿ ನಷ್ಟ-ಲಾಭವಾದಾಗ ಅದನ್ನು ಯಾವ ರೀತಿ ನಿಭಾಯಿಸುತ್ತಾರೆ ಅಂತಾ ವಿವರಿಸಿದ್ದಾರೆ.
ಲಹರಿ ಅವರು ಈ ಬಗ್ಗೆ ಮಾತನಾಡುತ್ತ, ಲಾಭವಾದಾಗ, ದಾಖಲೆಯಾದಾಗ ಅದನ್ನು ಎಲ್ಲರಿಗೂ ಹೇಳಿದ್ದೇವೆ. ಆದರೆ ನಷ್ಟವಾದಾಗ ನಾವು ಎಲ್ಲಿಯೂ ಹೇಳುವುದಿಲ್ಲ. ಅದಕ್ಕೆಲ್ಲ ಕೆಲವು ನಿಯಮಗಳಿದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅಂತಾ. ಅದೇ ರೀತಿ ಗಾಯಕರು ಲಹರಿ ಸಂಸ್ಥೆ ಇದೆ ಎಂದು ಹೇಗೆ ಹೇಳುತ್ತಾರೋ, ಅಂಥ ಸಂಗೀತಗಾರರಿಂದಾಗಿಯೇ ನಮ್ಮ ಸಂಸ್ಥೆ ಇದೆ ಎಂದು ಲಹರಿ ಅವರು ಹೇಳುತ್ತಾರೆ.
ಎಷ್ಟೇ ನಷ್ಟವಾದರೂ ನಾವು ನಿರ್ಮಾಪಕರ ಬಳಿ ಹೋಗಿ, ನಷ್ಟವಾಗಿದೆ ಎಂದು ಎಂದಿಗೂ ಕೇಳಲಿಲ್ಲ. ಕೇಳುವುದೂ ಇಲ್ಲ ಎಂದಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಮಾತನಾಡಿರುವ ಲಹರಿ ಕೆಜಿಎಫ್ ಹಾಡನ್ನು ನಾವು ದುಡ್ಡಿಗೋಸ್ಕರ ಮಾಡಲಿಲ್ಲ. ಕೆಜಿಎಫ್ ಹಾಡುಗಳು ಅಷ್ಟು ರಿಟರ್ನ್ಸ್ ಬರಲಿಲ್ಲ ಅಂತಾ ನಾನು ಹೇಳುವುದಿಲ್ಲ. ಇಲ್ಲಿ ಸಿಗದಿದ್ದಲ್ಲಿ, ಮತ್ತೆಲ್ಲಿಯಾದರೂ ಬರಬಹುದು. ಅದೆಲ್ಲ ನಿರೀಕ್ಷೆ ಮಾಡುವುದಿಲ್ಲ ನಾನು. ಜೀವನ ಹೇಗೆ ಹೋಗಬೇಕೋ ಹಾಗೇ ಹೋಗುತ್ತದೆ. ನಮಗೆ ದೇವರು ಕೈ ಬಿಟ್ಟಿಲ್ಲ ಅಂತಾರೆ ಲಹರಿ.
ಇನ್ನು ಸಂಗೀತದ ಬಗ್ಗೆ ಮಾತನಾಡಿರುವ ಲಹರಿ ವೇಲು, ಯಾವ ಮನುಷ್ಯ 1 ಹಾಡಿಗೆ ತಲೆಯಾಡಿಸುವುದಿಲ್ಲವೋ, ಅವರು ಮನುಷ್ಯನೇ ಅಲ್ಲ. ಪ್ರತೀ ಮನುಷ್ಯನಿಗೂ ಭಾವನೆ ಮುಖ್ಯ. ಅಂಥ ಭಾವನೆಯನ್ನು ನಾವು ಹಾಡಿನ ಮೂಲಕ ನೋಡಬಹುದು ಅಂತಾರೆ ಲಹರಿ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

