Sandalwood News: ಸ್ಯಾಂಡಲ್‌್ವುಡ್‌ನ ಆಡಿಯೋ ವಿತರಕ ಸಂಸ್ಥೆ ಲಹರಿ ಆಡಿಯೋಸ್ ಮಾಲೀಕ ಲಹರಿ ವೇಲು ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಲಹರಿ ಅವರು ಹೇಳುವ ಪ್ರಕಾರ, ಎಲ್ಲರೂ ಸದಾಶಿವ ನಗರದಲ್ಲಿ ಅಷ್ಟು ಆಸ್ತಿ ಇದೆ, ಇನ್ನೆಲ್ಲೋ ಅಷ್ಟು ಆಸ್ತಿ ಇದೆ, ಇಷ್ಟು ಆಸ್ತಿ ಇದೆ ಎಂದು ಹೇಳುತ್ತಾರೆ. ಆದರೆ ನಮ್ಮ ಆಡಿಯೋ ಸಂಸ್ಥೆಯಲ್ಲಿರುವ ಹಾಡುಗಳೇ ನನ್ನ ಆಸ್ತಿ ಎಂದು ಹೇಳಿದ್ದಾರೆ.
ನಮ್ಮ ಜೀವನವನ್ನು ತ್ಯಾಗ ಮಾಡಿ ಗಳಿಸಿರುವ ಹಾಡುಗಳೇ ನಮ್ಮ ಆಸ್ತಿ. ಇನ್ನು ಆಸ್ತಿಗಾಗಿ ನಮಗೆ ಸಹಾಯ ಮಾಡಿದ ಸ್ನೇಹಿತರು, ಹಣಕಾಸು ಸಹಾಯ ಮಾಡಿದವರು, ಹಳೆಯ ಸಿಬ್ಬಂದಿಗಳು, ಅಗಲಿದ ಸಿಬ್ಬಂದಿಗಳು, ಈಗಿರುವ ಸಿಬ್ಬಂದಿಗಳು ಎಲ್ಲರಿಗೂ ನಾನು ಚಿರಋಣಿ ಎಂದಿದ್ದಾರೆ ಲಹರಿ ವೇಲು.
ಅಲ್ಲದೇ ಶೃಂಗೇರಿ ಶಾರದೆಗೆ ನಮನ ಸಲ್ಲಿಸಿರುವ ಲಹರಿ ವೇಲು, ನಾನು ನಿರ್ಮಾಪಕನಲ್ಲ, ಬರಹಗಾರನೂ ಅಲ್ಲ, ಹಾಡುಗಾರನೂ ಅಲ್ಲ. ಆದರೂ ಶಾರದೆ ನನ್ನನ್ನು ಕಲಾ ಸೇವೆ ಮಾಡಲು ಅವಕಾಶ ನೀಡಿದ್ದಾಳೆ. ಇಷ್ಟು ವರ್ಷದಿಂದ ನಾನು ಸ್ಯಾಂಡಲ್‌ವುಡ್‌ನಲ್ಲಿ ಸೇವೆ ಸಲ್ಲಿಸಲು ಅರ್ಹತೆ ನೀಡಿರುವ ಶಾರದೆಗೆ ಧನ್ಯವಾದ ತಿಳಿಸಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

