Thursday, July 24, 2025

Latest Posts

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 1

- Advertisement -

ಕೆಲವೊಮ್ಮೆ ನಾವಾಡುವ ಕೆಲ ಮಾತುಗಳೇ ನಮಗೆ ಕೆಟ್ಟ ಪರಿಣಾಮ ನೀಡುತ್ತದೆ. ಕೆಲವೊಂದು ಮಾತು ಉತ್ತಮ ಪರಿಣಾಮ ನೀಡುತ್ತದೆ. ಆದ್ರೆ ಹೆಚ್ಚಿನ ಸಲ ಅದರಿಂದ ಸಮಸ್ಯೆಯೇ ಆಗುತ್ತದೆ ಹೊರತು, ಲಾಭವಲ್ಲ. ಹಾಗಾಗಿ ಕೆಲ ಮಾತುಗಳನ್ನು ಆಡುವಾಗ ನಾವು ಹಲವು ಬಾರಿ ಯೋಚಿಸಬೇಕು. ಅಲ್ಲದೇ, ನಿಮ್ಮ ಪ್ರೀತಿ ಪಾತ್ರರ ಬಳಿಯಾದರೂ ನೀವು ಕೆಲ ಮಾತುಗಳಲ್ಲಿ ಹೇಳಬಾರದು. ಹಾಗಾದ್ರೆ ಯಾವ ವಿಷಯಗಳನ್ನ ನೀವು ಯಾರಲ್ಲಿಯೂ ಹೇಳಬಾರದು ಅಂತಾ ತಿಳಿಯೋಣ ಬನ್ನಿ..

ಈ 4 ವಿಷಯ ನಿಮಗೆ ಗೊತ್ತಿದ್ದಲ್ಲಿ ನೀವು ಖಂಡಿತ ಜೀವನದಲ್ಲಿ ಸಫಲರಾಗುತ್ತೀರಿ..

ಮೊದಲನೇಯ ಮಾತು ನಾವು ನಮ್ಮ ಜೀವನದಲ್ಲಿ ಯಾವ ಗುರಿಯನ್ನು ಸಾಧಿಸಬೇಕೆಂದಿದ್ದೇವೆ ಎಂಬುದನ್ನು ಯಾರಲ್ಲಿಯೂ ಹೇಳಬಾರದು. ನಮ್ಮ ಕೆಲಸ ಶುರು ಮಾಡುವ ಮುನ್ನವೇ, ಅದರ ಬಗ್ಗೆ ನಾವು ಡಂಗುರ ಸಾರಬಾರದು. ಯಾಕಂದ್ರೆ ಆ ಕೆಲಸ ಮಾಡಲು ನಾವು ವಿಫಲರಾಗಿದ್ದಲ್ಲಿ, ಜನ ನಮ್ಮ ಬಗ್ಗೆ ಆಡಿಕೊಳ್ಳುತ್ತಾರೆ.

ಎರಡನೇಯ ಮಾತು ನಿಮ್ಮ ಮನೆಯಲ್ಲಿ ನಡೆಯುವ ಘಟನೆ, ಜಗಳಗಳ ಬಗ್ಗೆ ಇತರರಲ್ಲಿ ಹೇಳಿಕೊಳ್ಳಬಾರದು. ಯಾಕಂದ್ರೆ ಮನೆಯವರು ನಿಮ್ಮವರಾಗಿರುತ್ತಾರೆ. ಅವರನ್ನ ಎಂಥದ್ದೇ ಸಂದರ್ಭದಲ್ಲಿ ಬಿಟ್ಟು ಕೊಡಬಾರದು. ಯಾಕಂದ್ರೆ ಇಂದು ಜಗಳವಾಗತ್ತೆ, ನಾಲೆ ಒಂದಾಗುತ್ತೀರಿ. ಅದೇ ಜಗಳವಾದಾಗ, ಅದರ ಬಗ್ಗೆ ನೀವು ಬೇರೆಯವರಿಗೆ ಹೇಳಿದಾಗ, ಅವರು ನಿಮ್ಮ ಬಗ್ಗೆ ಇನ್ನೊಬ್ಬರಿಗೆ ಹೇಳಿ ಆಡಿಕೊಂಡು ನಗುತ್ತಾರೆ. ಆಗ ನಿಮಗೇ ಈ ಬಗ್ಗೆ ದುಃಖವಾಗಬಹುದು.

ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಯೋಚನೆ ಮಾಡುವವರು ಈ ಸ್ಟೋರಿ ಓದಿ..

ಮೂರನೇಯ ಮಾತು ನಿಮ್ಮ ಸಮಸ್ಯೆ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳಬೇಡಿ. ನಿಮಗೆ ಯಾವುದಾದರೂ ಸಮಸ್ಯೆ ಬಂದು, ದುಃಖವಾಗಿರಬಹುದು. ಅದನ್ನು ಬೇರೆಯವರ ಬಳಿ ಹೇಳಿದಾಗ ನಿಮ್ಮ ಮನಸ್ಸು ಹಗುರವಾಗಬಹುದು. ಆದ್ರೆ ಆ ಸಮಸ್ಯೆಯನ್ನು ಆಲಿಸಿದ ಪ್ರತಿಯೊಬ್ಬರೂ ನಿಮಗೆ ಸಮಾಧಾನ ಹೇಳುತ್ತಾರೆ ಅನ್ನುವ ಭಾವನೆ ಬೇಡ. ಯಾಕಂದ್ರೆ ಅದರಲ್ಲಿ ಕೆಲವರು ನಿಮ್ಮ ಸಮಸ್ಯೆಯನ್ನು ಇತರರ ಬಳಿ ಹೇಳಿ ಹಗುರವಾಗಿ ಮಾತನಾಡಬಹುದು. ಹಾಗಾಗಿ ನಿಮಗೆ ಬೇಸರವಾದರೆ ಅದನ್ನ ಯಾರ ಬಳಿಯೂ ಹೇಳಿಕೊಳ್ಳಬೇಡಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss